ಡಾ.ಕೆ.ಸುಧಾಕರ್‌ಗೆ, ವೇಣುಗೋಪಾಲ್ ಅಭಿನಂದನೆ
1 min readಡಾ.ಕೆ.ಸುಧಾಕರ್‌ಗೆ, ವೇಣುಗೋಪಾಲ್ ಅಭಿನಂದನೆ
ಸ0ಸದ ಡಾ.ಕೆ.ಸುಧಾಕರ್‌ಗೆ, ಮಾಜಿ ಸಚಿವ ದಿ.ಸಿ.ಚನ್ನಿಗಪ್ಪ ಪುತ್ರ ಡಿ.ಸಿ.ವೇಣುಗೋಪಾಲ್ ರಿಂದ ಅಭಿನಂದನೆ
ಮಧುಗಿರಿಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದಿಸುವ ಇಚ್ಛೆ
ಮಾಜಿ ಅರಣ್ಯ ಮತ್ತು ಅಧಿಕಾರಿ ಸಚಿವ ದಿವಂಗತ ಸಿ.ಚನ್ನಿಗಪ್ಪರ ಪುತ್ರ ಡಿ.ಸಿ.ವೇಣುಗೋಪಾಲ್ ಚಿಕ್ಕಬಳ್ಳಾಪುರ ಲೋಕಸಭಾ ಸಂಸದ ಡಾ.ಕೆ.ಸುಧಾಕರ್ ಗೆ ಅಭಿನಂದನೆ ತಿಳಿಸಿದ್ದಾರೆ. ನಾನು ಭವಿಷ್ಯದಲ್ಲಿ 2029 ರ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿಯಿಂದ ಸ್ಪರ್ದಿಸುತ್ತೇನೆ ಎಂದು ಸ್ವಾತಂತ್ರ‍್ಯ ದಿನಾಚರಣೆ ದಿನವೇ ಮುಂದಿನ ರಾಜಕೀಯ ನಡೆ ಬಗ್ಗೆ ತಿಳಿಸಿದ್ದಾರೆ.
ಒಂದೆ0ಡೆ ಶ್ರೀ ಶಿವಕುಮಾರ ಮಹಾಸ್ವಾಮಿ ತಾಂತ್ರಿಕ ಎಮಜಿನಿಯರಿಂಗ್ ಕಾಲೇಜಿನಲ್ಲಿ 78 ನೇ ಸ್ವಾತಂತ್ರೋತ್ಸವ ಸಂಭ್ರಮ, ಸಂಸ್ಥೆಯ ಮುಖ್ಯಸ್ಥ ಜಿ.ಪಂ ಮಾಜಿ ಸದಸ್ಯ ಡಿ.ಸಿ.ವಿ ಮುಂದಿನ ರಾಜಕೀಯ ನಡೆ ಕುರಿತು ಹೇಳಿಕೆ, ಜೆಡಿಎಸ್-ಬಿಜೆಪಿ ಎನ್.ಡಿ.ಎ. ಮೈತ್ರಿ ಸುಭದ್ರ, ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೈರನಾಯ್ಕನಹಳ್ಳಿಯ ಎಂಜಿನಯರಿ0ಗ್ ಕಾಲೇಜು ಆವರಣದಲ್ಲಿ ಸ್ವಾತಂತ್ರ‍್ಯ ದಿನಾಚರಣೆ ಜೊತೆಗೆ, ಮಾಜಿ ಸಚಿವರ ಪುತ್ರ ಭವಿಷ್ಯದ ರಾಜಕೀಯದ ನಡೆ ವಿವರಿಸುತ್ತಾ ಮಾತನಾಡಿದ ಡಿ.ಸಿ.ವೇಣುಗೋಪಾಲ್.
ನೆಲಮಂಗಲ ಮತ್ತು ಕೊರಟಗೆರೆ ವಿಧಾನಸಭಾ ಕ್ಷೇತ್ರಗಳು ಮೀಸಲಾಗಿದೆ, ನನ್ನ ತಂದೆ ಸಿ.ಚನ್ನಿಗಪ್ಪರ ಎರಡು ಕರ್ಮಭೂಮಿ ಮೀಸಲಾತಿಯಾಗಿದೆ ಆದ್ದರಿಂದ ಜೆಡಿಎಸ್ ಪಕ್ಷದ ಹೈ ಕಮಾಂಡ್ ಆದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮಾರ್ಗದರ್ಶನ ನೀಡಿದರೆ ನಾನು 2029 ರಲ್ಲಿ ಮಧುಗಿರಿ ಕ್ಷೇತ್ರಕ್ಕೆ ಸ್ಪರ್ದಿಸುವೇ, ಸಂಸದ ಡಾ.ಕೆ.ಸುಧಾಕರ್ ಉತ್ತಮ ಸಂಸದೀಯ ಪಟು ಆದ್ದರಿಂದ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 33 ಸಾವಿರ ಅಧಿಕ ಮತ ಬಂದಿದೆ, ಸ್ವಾತಂತ್ರ‍್ಯದಿನಾಚರಣೆಯನ್ನು ನಮ್ಮ ಇಂಜಿನಿಯರಿ0ಗ್ ಕಾಲೇಜಿನಲ್ಲಿ ಅರ್ಥಪೂರ್ಣವಾಗಿ ಆಚರಿಸಿದ್ದೇವೆ, ಸ್ವಾತಂತ್ರ‍್ಯ ಹೋರಾಟಗಾರರ ಜೀವನವನ್ನು ಪ್ರತಿದಿನ ಮೈಗೂಡಿಸಿಕೊಳ್ಳುತ್ತೇವೆ, ಭಾರತ ದೇಶ ಪ್ರಧಾನಿ ನರೇಂದ್ರ ಮೋದಿಗಳಿಂದ ಮೊದಲ ಸ್ಥಾನದಲ್ಲಿದ್ದೇವೆ, ನಮ್ಮ ಕಾಲೇಜಿನಲ್ಲಿ 1000 ಗ್ರಾಮೀಣ ವಿದ್ಯಾರ್ಥಿಗಳಿಗೆ ಕಡಿಮೆದರದಲ್ಲಿ ತಾಂತ್ರಿಕ ಶಿಕ್ಷಣ ನೀಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಎಂಜಿನಿಯರಿ0ಗ್ ಕಾಲೇಜಿನ ಪ್ರಾಂಶುಪಾಲ ರಮೇಶ್, ಡಿಪ್ಲೊಮಾ ವಿಭಾಗದ ಪ್ರಾಂಶುಪಾಲ ಮಹಮ್ಮದ್ ಅಸೀಬ್, ಗ್ರಾ.ಪಂ.ಸದಸ್ಯ ರಾಜಣ್ಣ, ಹೊನ್ನಗಂಗಪ್ಪ, ಕಾಲೇಜಿನ ಸಿಬ್ಬಂದಿ ಬೋಧಕ-ಬೋಧಕೇತರ ಸಿಬ್ಬಂದಿ ಹಾಜರಿದ್ದರು.