ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತಕ್ಕೆ ಒಬ್ಬರ ಬಲಿ
1 min readವರಮಹಾಲಕ್ಷ್ಮಿ ಹಬ್ಬದ ದಿನವೇ ಜವರಾಯನ ಅಟ್ಟಹಾಸ
ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತಕ್ಕೆ ಒಬ್ಬರ ಬಲಿ
ವರಮಹಾಲಕ್ಷ್ಮಿ ಹಬ್ಬದ ದಿನವೇ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಚಿಕ್ಕಬಳ್ಳಾಪುರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಇಂದು ಸರಣಿ ಅಪಘಾತ ನಡೆದು ಒರ್ವ ಸ್ಥಳದಲ್ಲಿಯೆ ಪ್ರಾಣ ಕಳೆದುಕೊಂಡಿದ್ದು, ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಚಿಕ್ಕಬಳ್ಳಾಪುರ ಹೊರವಲಯದ ರಾಷ್ಟಿçಯ ಹೆದ್ದಾರಿ 44ರಲ್ಲಿ ಅಪಘಾತ ನಡೆದಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ಗೆ ಹೋಗುತಿದ್ದ ಸುಮಾರು ನಲವತ್ತು ಜನ ದೇವರ ದಯೆಯಿಂದ ಪಾರಾಗಿದ್ದಾರೆ
ವರ ಕೋಡೋ ವರಮಹಾಲಕ್ಷ್ಮಿ ಹಬ್ಬದ ದಿನವೇ ಯಮರಾಜ ಅಟ್ಟಹಾಸ ಮೆರೆದಿದ್ದು ನಗರದ ಹೊರ ವಲಯ ಅಗಲಗುರ್ಕಿ ಬೈ ಪಾಸ್ ನಲ್ಲಿ ನಡೆದ ಸರಣಿ ಅಪಘಾತದಲ್ಲಿ ಒಬ್ಬ ಕಾರ್ಮಿಕ ಸ್ಥಳದಲ್ಲಿಯೆ ಸಾವನ್ನಪ್ಪಿದ್ದು ಇಬ್ಬರು ಗಂಭೀರ ಗಾಯಗೊಂಡು ಜೈನ್ ಆಸ್ಪತ್ರೆಗೆ ಧಾಖಲಾಗಿದ್ದಾರೆ. ಬಾಗೇಪಲ್ಲಿ ಕಡೆಯಿಂದ ದೇವನಹಳ್ಳಿ ಕಡೆಗೆ ಹೊರಟಿದ್ದ ಆಂಧ್ರ ಮೂಲದ ಲಾರಿ ಏರ್ ಪೋರ್ಟ್ ಗೆ ಹೊರಟಿದ್ದ ಐಚರ್ ಮಿನಿ ಬಸ್‌ನ್ನ ಓವರ್ ಟೇಕ್ ಮಾಡಲು ಹೋಗಿ ಡಿಕ್ಕಿ ಹೊಡೆದ ರಭಸಕ್ಕೆ ಮಿನಿ ಬಸ್ ಎಡ ಬಾಗದಲ್ಲಿ ಬರುತಿದ್ದ ದೇವನಹಳ್ಳಿ ಟ್ರಾಕ್ಟರ್ ಗೆ ಒಡೆದು ಟ್ರಾಕ್ಟರ್ ಸಂಪೂರ್ಣ ಪಲ್ಟಿ ಹೊಡೆದಿದ್ದರಿಂದ ಬಿಹಾರ ಮೂಲದ ಕಾರ್ಮಿಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಸ್ಟೆರಿಂಗ್ ಕ್ಯಾಬಿನ್‌ನಲ್ಲಿದ್ದ ಚಾಲಕ್ ಜಂಪ್ ಮಾಡಿದ ಪರಿಣಾಮ ಬಲಗೈ ಮುರಿದಿದೆ. ಮತ್ತೊಬ್ಬನಿಗೂ ಗಂಭೀರ ಗಾಯಗಳಾಗಿದೆ. ಟ್ರಾಕ್ಟರ್ ಅಡ್ಡ ಇಲ್ಲದಿದ್ದರೆ ಡಿ ಪಾಳ್ಯದಿಂದ ದೇವನಹಳ್ಳಿ ಏರ್ ಪೋರ್ಟ್ ಗೆ ಹೊರಟಿದ್ದ ಮಿನಿ ಬಸ್‌ನಲ್ಲಿದ್ದ ನಲವತ್ತು ಜನರು ಜೀವ ಕಳೆದುಕೊಳ್ಳುವ ಆತಂಕವಿತ್ತು.
ಮಾಹಿತಿ ತಿಳಿದ ಕೂಡಲೆ ಸ್ಥಳಕ್ಕೆ ಸಂಚಾರಿ ಪೊಲೀಸ್ ಪಿ ಎಸ್ ಐ ಮಂಜುಳ, ವೃತ್ತ ನಿರೀಕ್ಷಕ ಮಂಜುನಾಥ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಲಾರಿ ಮತ್ತು ಚಾಲಕನನ್ನ ವಶಕ್ಕೆ ಪಡೆದಿದ್ದಾರೆ. ಪ್ರಕರಣ ಧಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆಗೆ ಕೈಗೊಂಡಿದ್ದಾರೆ.