ತುರುವೇಕೆರೆ ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಆಗ್ರಹ
1 min readತುರುವೇಕೆರೆ ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಆಗ್ರಹ
ದೂರು ನೀಡಿದರೂ ಕ್ರಮ ಕೈಗೊಳ್ಳದ ಪೊಲೀಸರು
12ನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಧರಣಿ
ಕಾನೂನು ಉಲ್ಲಂಘನೆ ಮಾಡಿದ ಬಗ್ಗೆ ದಂಡಿನಶಿವರ ಪೊಲೀಸ್ ಠಾಣೆಗೆ ಈಗಾಗಲೇ ದೂರು ಕೊಟ್ಟಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ತಹಸೀಲ್ದಾರ್ ವಿರುದ್ಧ ಎಮ್‌ಐಆರ್ ದಾಖಲಿಸಿ, ಕ್ರಮ ಜರುಗಿಸಬೇಕು ಎಂದು ರಾಜ್ಯ ರೈತಸಂಘದ ಜಿಲ್ಲಾದ್ಯಕ್ಷ ಕೆ.ಎಸ್. ಧನಂಜಯಾರಾದ್ಯ ಆಗ್ರಹಿಸಿದರು.
ತುರುವೇಕೆರೆ ತಾಲ್ಲೂಕು ಕಛೇರಿ ಮುಂಭಾಗ ಕಳೆದ 12ದಿನಗಳಿಂದ ಭರಣಿ ನಿರತ ರೈತರೊಡಗೂಡಿ ಮಾತನಾಡಿದ ರಾಜ್ಯ ರೈತಸಂಘದ ಜಿಲ್ಲಾದ್ಯಕ್ಷ ಕೆ.ಎಸ್. ಧನಂಜಯಾರಾದ್ಯ, ಕೋಳಘಟ್ಟ ಸರ್ವೆ ನಂ. 55ರಲ್ಲಿ ಮಹಲಿಂಗಪ್ಪ ಎಂಬ ರೈತ ತನ್ನ ಜಮೀನಿನಲ್ಲಿ ನೆಟ್ಟಿದ್ದ ತೆಂಗಿನ ಗಿಡಗಳನ್ನು ತಹಶೀಲ್ದಾರ್ ವರ್ಗಾವಣೆಗೊಂಡಿದ್ದರೂ ಏಕಾಏಕಿ ಕೀಳಿಸಿರುವುದು ಅಕ್ಷಮ್ಯ ಅಪರಾಧ ಎಂದರು.
ಆ ಭೂಮಿಯನ್ನು ದುರಸ್ತಿ ಮಾಡಿ ಅನುಭವದಲ್ಲಿರುವ ೪೫ ರೈತರಿಗೆ ಹಕ್ಕು ಪತ್ರ ನೀಡಬೇಕು, ಪರಿಸರ ಸೂಕ್ಷ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ನೀಡಿರುವ ಗುತ್ತಿಗೆ ರದ್ದುಮಾಡಿ ಯಂತ್ರಗಳನ್ನು ತೆರವುಗೊಳಿಸಬೇಕು, ರೈತರಿಗೆ ಜಮೀನಿನಲ್ಲಿ ನೆಟ್ಟಿದ್ದ ತೆಂಗಿನ ಸಸಿಗಳನ್ನು ಕೀಳಿಸಿ ಉಂಟುಮಾಡಿರುವ ನಷ್ಟವನ್ನು ತಹಸೀಲ್ದಾರ್ ಅವರೇ ತುಂಬಿಕೊಡಬೇಕು ಎಂದು ಒತ್ತಾಯಿಸಿದರು.
ಕಳೆದ 12 ದಿನಗಳಿಂದ ಆಹೋರಾತ್ರಿ ರೈತರು ತಾಲ್ಲೂಕು ಕಛೇರಿ ಮುಂದೆ ಭರಣಿ ಮಾಡುತ್ತಿದ್ದರೂ ಸರ್ಕಾರಕ್ಕೆ ಒಂದು ವರದಿಯೂ ಹೋಗಿಲ್ಲ. ಇದರಲ್ಲಿ ತಾಲ್ಲೂಕು ಆಡಳಿತದ ವೈಫಲ್ಯ ಎದ್ದು ಕಾಣುತ್ತಿದೆ. ಇದು ಖಂಡನೀಯವಾಗಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು. ಈ ಸಂಧರ್ಭದಲ್ಲಿ ರೈತ ಕುಟುಂಬ, ತಾಲ್ಲೂಕು ರೈತಪರ ಸಂಘಟನೆಗಳು,
ಕೋಳಗಟ್ಟ ಗ್ರಾಮದ ರೈತರು ಪಾಲ್ಗೊಂಡಿದ್ದರು.