ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಕ್ರೀಡಾಕೂಟ
1 min readಪದವಿಪೂರ್ವ ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ
ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಕ್ರೀಡಾಕೂಟ
ಬಾಗೇಪಲ್ಲಿ ತಾಲೂಕಿನ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಪಟ್ಟಣದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇಂದು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಪರಿವೀಕ್ಷಕ ರಂಗನಾಥ ಹಾಗೂ ವಿವಿಧ ಕಾಲೇಜು ಗಳು ಪ್ರಾಂಶುಪಾಲರು ಚಾಲನೆ ನೀಡಿದರು.
ಬಾಗೇಪಲ್ಲಿ ತಾಲೂಕಿನ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಪಟ್ಟಣದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶುಕ್ರವಾರ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಪರಿವೀಕ್ಷಕ ರಂಗನಾಥ ಹಾಗೂ ವಿವಿಧ ಕಾಲೇಜು ಗಳು ಪ್ರಾಂಶುಪಾಲರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ರಂಗನಾಥ ಮಾತನಾಡಿದರು.
ದೈಹಿಕ ಶಿಕ್ಷಣ ಪರಿವೀಕ್ಷಕ ರಂಗನಾಥ ಮಾತನಾಡಿ, ಶಿಕ್ಷಣದ ಜೊತೆಗೆ ಕ್ರೀಡೆಯನ್ನು ಸಮತೋಲನವಾಗಿ ನೋಡಬೇಕು. ಕ್ರೀಡೆಯಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿದಾಗ ನಾವೆಲ್ಲರೂ ಒಂದೇ ಎಂಬ ಮನೋಭಾವ ಮೂಡುತ್ತದೆ ಎಂದು ತಿಳಿಸಿದರು. ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ರೂಪಾ ಮಾತನಾಡಿ, ಶಿಕ್ಷಣ ಮತ್ತು ಕ್ರೀಡೆಯಲ್ಲಿ ಬಾಗೇಪಲ್ಲಿ ವಿಶಿಷ್ಟತೆ ಮೆರೆಯಬೇಕು. ಕ್ರೀಡೆಯಲ್ಲಿ ರಾಷ್ಟಮಟ್ಟದಲ್ಲಿ ಹೆಸರು ಪಡೆಯಬೇಕು. ಕ್ರೀಡಾಪಟುಗಳು ಇಲ್ಲಿನ ಮಣ್ಣಿನ ಗುಣವನ್ನು ದೇಶಕ್ಕೆ ಸಾರಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲೆ ಉಮಾಶಶಿ, ವೆಂಕಟಶಿವಾರೆಡ್ಡಿ, ವೆಂಕಟೇಶ್ ಪ್ರಸಾದ್, ಶಿವಣ್ಣ, ಉಪನ್ಯಾಸಕರಾದ ಎನ್. ಎನ್. ನಾಗರಾಜು, ಮುನಿರಾಜು ರವಿ ಚಂದ್ರೇ ನಾಯಕ್, ದೈಹಿಕ ಶಿಕ್ಷಕ ಇನಾಯತ್ತುಲ್ಲಾ , ಸುಜಾತ, ಹನುಮಪ್ಪ, ಬಯ್ಯಾರೆಡ್ಡಿ, ಡಿ.ಎನ್. ಶೀಲಾ ಇದ್ದರು.