ದಲಿತರ ಹಣ ಗ್ಯಾರೆಂಟಿಗಳಿಗೆ ಬಳಕೆ ವಿರೋಧಿಸಿ ಧರಣಿ
1 min readದಲಿತರ ಹಣ ಗ್ಯಾರೆಂಟಿಗಳಿಗೆ ಬಳಕೆ ವಿರೋಧಿಸಿ ಧರಣಿ
ಗೌರಿಬಿದನೂರಿನಲ್ಲಿ ದಲಿತ ಸಂಘಟನೆಗಳಿ0ದ ಪ್ರತಿಭಟನೆ
ರಾಜ್ಯ ಸರ್ಕಾರ ಎಸ್ ಸಿ ಪಿ ಮತ್ತು ಟಿ ಎಸ್ ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವ ಜೊತೆಗೆ ವಾಲ್ಮೀಕಿ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡು ದಲಿತ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ, ದಲಿತ ಸಂಘಟನೆಗಳ ಒಕ್ಕೂಟ ಗೌರಿಬಿದನೂರು ತಾಲ್ಲೂಕು ಕಚೇರಿ ಮುಂದೆ ಒಂದು ದಿಂದ ಸಾಂಕೇತಿಕ ಭರಣಿ ನಡೆಸಿತು.
ರಾಜ್ಯ ಸರ್ಕಾರ ಎಸ್ ಸಿ ಪಿ ಮತ್ತು ಟಿ ಎಸ್ ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವ ಜೊತೆಗೆ ವಾಲ್ಮೀಕಿ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡು ದಲಿತ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ, ದಲಿತ ಸಂಘಟನೆಗಳ ಒಕ್ಕೂಟ ಗೌರಿಬಿದನೂರು ತಾಲ್ಲೂಕು ಕಚೇರಿ ಮುಂದೆ ಒಂದು ದಿಂದ ಸಾಂಕೇತಿಕ ಭರಣಿ ನಡೆಸಿತು. ಈ ವೇಳೆ ದಲಿತ ಮುಖಂಡ ಸಿ ಜಿ ಗಂಗಪ್ಪ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡುವುದಾಗಿ ದಲಿತರಿಗೆ ಅನ್ಯಾಯ ಎಸಗಲು ಹೊರಟಿತ್ತು. ಆದರೆ ದಲಿತರ ಆಕ್ರೋಶಕ್ಕೆ ಸರ್ಕಾರ ಅಧಿಕಾರಕ್ಕೆ ಬರಲಿಲ್ಲ, ಈಗ ಕಾಂಗ್ರೆಸ್ ಅದೇ ದಲಿತ ವಿರೋಧಿ ಹಾದಿ ತುಳಿದಿದೆ ಎಂದರು.
ದಲಿತರಿಗೆ ಮೀಸಲಿಟ್ಟ ಎಸ್ ಸಿ ಪಿ ಮತ್ತು ಟಿ ಎಸ್ ಪಿ ಹಣವನ್ನು ದಲಿತರ ಕಲ್ಯಾಣಕ್ಕಾಗಿ ಬಳಸದೆ, ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದ್ದು, ದಲಿತರ ಧ್ವನಿ ಗಮನಿಸುವ ಕೆಲಸವಾಗುತ್ತಿದೆ. ದಲಿತರಿಗೆ ಮೀಸಲಿಟ್ಟ ಎಲ್ಲಾ ಹಣ ವಾಪಸ್ ಪಡೆದು ದಲಿತರ ಆರ್ಥಿಕ ಅಭಿವೃದ್ಧಿಗೆ ಬಳಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾಧ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನರಸಿಂಹ ಮೂರ್ತಿ ಮಾತನಾಡಿ, ದಲಿತರ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇಂದು ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ದಲಿತರ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಸಿರುವುದು, ವಾಲ್ಮೀಕಿ ಹಗರಣ, ಮಂಡ್ಯದಲ್ಲಿ ದಲಿತ ಯುವಕನ ಕೈ ಕತ್ತರಿಸಿರುವುದು, ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನೀತಿಯಾಗಿದೆ. ಈಗಾಗಲೇ ರಾಜ್ಯದ ಹಲವು ಕಡೆ ಪ್ರತಿಭಟನೆಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ತೀವ್ರ ರೂಪ ತಾಳಲಿವೆ ಎಂದರು.
ಚನ್ನಪ್ಪ, ಸೋಮಯ್ಯ, ನರಸಿಂಹ ಮೂರ್ತಿ, ನಾಗಾರ್ಜುನ, ಶಿವಪ್ಪ, ಮೂರ್ತಿ, ಲಿಂಗಪ್ಪ, ಲಕ್ಷ್ಮೀ ನಾರಾಯಣ, ಸತ್ಯನಾರಾಯಣ, ಗಂಗಾಧರಯ್ಯ, ನಾರಾಯಣಪ್ಪ, ಅಶ್ವಥ್, ಮಂಜುನಾಥ್, ಶಿವರಾಜ್ ಇದ್ದರು.