ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

CM ಸಿದ್ದು ಭೇಟಿಯಾದ ಆಂಧ್ರ DMC ಪವನ್ ಕಲ್ಯಾಣ್ಗೆ ಅಗೌರವ; ರಾಜ್ಯದ ಮಾನ ಕಳೆಯಿತಾ ಅರಣ್ಯ ಇಲಾಖೆ

1 min read

ಆಂಧ್ರ ಪ್ರದೇಶದ  ಡಿಸಿಎಂ ಪವನ್ ಕಲ್ಯಾಣ್  ಅವರು ಇಂದು ಬೆಂಗಳೂರಿಗೆ ಆಗಮಿಸಿ ಸಿಎಂ ಸಿದ್ದರಾಮಯ್ಯ  ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ  ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಬೆಂಗಳೂರು ಭೇಟಿ ವೇಳೆ ಪವನ್ ಕಲ್ಯಾಣ್ ಅವರು ಆಂಧ್ರದಲ್ಲಿ ಕಾಡಾನೆಗಳ  ಸೆರೆ, ಆನೆ ಕಾರ್ಯಾಚರಣೆ, ಆನೆಗಳನ್ನು ಪಳಗಿಸುವುದು, ಮಾವುತರಿಗೆ ತರಬೇತಿಯ ಕುರಿತು ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

ರಾಜಧಾನಿಯ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಪವನ್ ಕಲ್ಯಾಣ್ ಅವರು ಕುಶಲೋಪರಿ ವಿಚಾರಿಸಿದರು. ಆ ಬಳಿಕ ವಿಧಾನಸೌಧದಲ್ಲಿ ಅರಣ್ಯ ಸಚಿವರ ಜೊತೆ ಸಭೆ ನಡೆಸಿದರು. ಇದಕ್ಕೂ ಮುನ್ನ ಈಶ್ವರ್ ಖಂಡ್ರೆ ಅವರಿಗೆ ಶಾಲು ಹಾರ ಹಾಕಿ ತಿರುಪತಿ ಲಡ್ಡು ನೀಡಿ ಸನ್ಮಾನಿಸಿ ಗೌರವಿಸಿದರು.

ಇನ್ನು, ರಾಜ್ಯದ ಅತಿಥಿಯಾಗಿ ಆಗಮಿಸಿದ ಪವನ್ ಕಲ್ಯಾಣ್ ಗೆ ಸೂಕ್ತ ಗೌರವ ನೀಡಿಲ್ಲ ಎಂಬ ಮಾತು ಕೇಳಿ ಬಂದಿದೆ. ಅಲ್ಲದೇ ಸಭೆಯಲ್ಲಿ ಪವನ್ ಕಲ್ಯಾಣ್ ಅವರನ್ನು ಗೌರವಿಸುವ ವೇಳೆಯೂ ಭದ್ರತಾ ಲೋಪ ಎದುರಾಗಿತ್ತು, ವಿಧಾನಸೌಧ ಸಿಬ್ಬಂದಿ ಗಳು, ಅಭಿಮಾನಿಗಳಿಂದ ನೂಕು ನುಗ್ಗಲು ಉಂಟಾಗಿದೆ. ಸಭೆಯನ್ನು ಸರಿಯಾಗಿ ಆಯೋಜನೆ ಮಾಡದೇ ರಾಜ್ಯ ಸರ್ಕಾರ ಸ್ಟೇಟ್ ಪ್ರೋಟೋಕಾಲ್ ಮರೆತಿದೆ ಎಂಬ ಟೀಕೆಗಳು ಕೇಳಿ ಬಂದಿದೆ. ಅದರಲ್ಲೂ ವಿಧಾನಸಭೆಯ ಸಚಿವಾಲಯದ ಸಿಬ್ಬಂದಿಗಳಿಂದಲೇ ನೂಕುನುಗ್ಗಲು ಉಂಟಾಗಿದ್ದು, ಅಲ್ಲದೇ ಸಿಬ್ಬಂದಿಗಳು-ಅಭಿಮಾನಿಗಳು ಫೋಟೋ ತೆಗೆದುಕೊಳ್ಳಲು ಮುಗಿಬಿದ್ದ ಕಾರಣ ಅರಣ್ಯ ಸಚಿವರ ಸಭೆಯೂ ಆರಂಭದಲ್ಲಿ ಅವ್ಯವಸ್ಥೆ ಉಂಟಾಗಿತ್ತು.

ಪವನ್ ಕಲ್ಯಾಣ್ ಅವರನ್ನು ಸನ್ಮಾನಿಸಿ ಗೌರವಿಸಿದ ಸಚಿವ ಈಶ್ವರ್ ಖಂಡ್ರೆ

ಇತ್ತ ಪವನ್ ಕಲ್ಯಾಣ್ ಅವರು ಸಿಎಂ ಹಾಗೂ ಸಚಿವರ ಭೇಟಿ ವೇಳೆ, ಮುಖ್ಯವಾಗಿ ಕೆಂಪು ಚಂದನದ ಕಳ್ಳಸಾಗಣೆ ತಡೆಗೆ ಕೈಗೊಳ್ಳಬೇಕಾದ ಕ್ರಮಗಳು. ಕರ್ನಾಟಕದಿಂದ ಆರು ಕುಂಕಿ ಆನೆಗಳನ್ನು ಆಂಧ್ರ ಪ್ರದೇಶಕ್ಕೆ ನೀಡುವುದು ಸೇರಿದಂತೆ ಹಲವು ವಿಚಾರಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಿದರು. ಆಂಧ್ರ ಕೆಲ ಭಾಗಗಗಳಲ್ಲಿ ಕಾಡಾನೆಗಳು ರೈತರ ಹೊಲಗಳನ್ನು ಹಾಳು ಮಾಡುತ್ತಿರುವುದು, ಬೆಳೆ ನಾಶ ಮಾಡುವ ಆನೆಗಳ ಸೆರೆ ಹಿಡಿದು ಅವುಗಳನ್ನು ಫಳಗಿಸುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಶ್ವರ್ ಖಂಡ್ರೆ ಅವರು, ಆನೆ ಮಾನವ ಸಂಘರ್ಷ ತಡೆಯಲು ಆಂಧ್ರ ಕರ್ನಾಟಕದ ನಡುವೆ ಒಪ್ಪಂದ ಹಾಗೂ ಕೆಲ ಕುಮ್ಕಿ ಆನೆಗಳನ್ನ ಕೊಡಲು ಆಂಧ್ರ ಡಿಮ್ಯಾಂಡ್ ಮಾಡಿದೆ. ಎಂಟು ಆನೆಗಳನ್ನ ಕೊಡಲು ಮನವಿ ಮಾಡಿದ್ದಾರೆ, ಈ ಬಗ್ಗೆ ನಾವು ಪರಿಶೀಲನೆ ಮಾಡುತ್ತೇವೆ. ಕರ್ನಾಟಕದಲ್ಲಿ 103 ಕುಮ್ಕಿ ಆನೆಗಳಿವೆ, ಆದರೆ ತಕ್ಷಣ ಎಂಟು ಕುಮ್ಕಿ ಆನೆಗಳನ್ನ ಕೊಡಲು ಆಗಲ್ಲ. ಮಾವುತರಿಗೆ, ಕಾವಾಡಿಗಳಿಗೆ ತರಬೇತಿ ಕೊಡಬೇಕು. ಇದೇ ವೇಳೆ ಅರಣ್ಯ ಒತ್ತುವರಿ ಹಾಗೂ ಶ್ರೀಗಂಧ, ರಕ್ತ ಚಂಧನ ತಡೆಗೆ ಅಗತ್ಯ ಕ್ರಮ, ಮಾಹಿತಿ ವಿನಿಮಯ ಮಾಡಿಕೊಳ್ಳುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು. (ವರದಿ: ತಿಮ್ಮೇಗೌಡ, ನ್ಯೂಸ್18 ಕನ್ನಡ, ಬೆಂಗಳೂರು.

Top News: Latest Trending in India, Buzz, World Trending News, Hot on Social Media, What is Trending in the World, Trending on Social Media.

►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura

-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday #ctv -news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday #rtodaybreakingnews #chikkaballapuranews #flashnews #liveupdatenews @ctv-news

About The Author

Leave a Reply

Your email address will not be published. Required fields are marked *