ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

ನಗರಸಭೆ ಅಧ್ಯಕ್ಷ ಗಾದಿಗಾಗಿ ಹೆಚ್ಚಿದ ಪೈಪೋಟಿ

1 min read

ನಗರಸಭೆ ಅಧ್ಯಕ್ಷ ಗಾದಿಗಾಗಿ ಹೆಚ್ಚಿದ ಪೈಪೋಟಿ
ಮೀಸಲಾತಿ ವಿಚಾರದಲ್ಲಿಯೂ ಅಪಸ್ವರ
ಪರಿಶಿಷ್ಟರಿಗೆ ಸಿಗದ ಅವಕಾಶಕ್ಕೆ ಆಕ್ರೋಶ
ಅವಕಾಶ ವಂಚಿತರಾದ ಮಹಿಳೆಯರು

ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದ್ದೇ ತಡ ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ಗರಿಗದರಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ಇದ್ದು, ಕಳೆದ ಬಾರಿಯಂತೆ ಈ ಬಾರಿ ಕಾಂಗ್ರೆಸ್ ಮತಗಳು ಕೈ ತಪ್ಪದಂತೆ ಎಚ್ಚರ ವಹಿಸುವ ಕೆಲಸದಲ್ಲಿ ಶಾಸಕರು ಸೇರಿದಂತೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಆದರೆ ಇದೀಗ ಮೀಸಲಾತಿ ವಿಚಾರದಲ್ಲಿಯೇ ಅಪಸ್ವರ ಎದ್ದಿದ್ದು, ಒಂದೇ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡಲು ಮುಂದಾಗುತ್ತಿರುವ ನಾಯಕರ ವೈಖರಿಗೆ ಸದಸ್ಯರಲ್ಲಿ ತೀವ್ರ ಅಶಮಾಧಾನ ಸ್ಫೋಟಗೊಂಡಿದೆ. ಹಾಗಾದರೆ ಏನು ಆ ಅಸಮಾಧಾನ ಅಂತೀರಾ ಈ ಸ್ಟೋರಿ ನೋಡಿ.

ಹೌದು, ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಇದೀಗ ನಿಜವಾದ ರಾಜಕೀಯ ಪೈಪೋಟಿ ಆರಂಭವಾಗುವ ಸೂಚನೆಗಳು ಗೋಚರಿಸುತ್ತಿವೆ. ಕಳೆದ 10 ವರ್ಷಗಳಿಂದ ಯಾವುದೇ ವಿರೋಧವಿಲ್ಲದೆ ಸಕ್ರಮವಾಗಿ ನಡೆಯುತ್ತಿದ್ದ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಕಳೆದ ನಗರಸಭಾ ಚುನಾವಣೆ ವೇಳೆ ವಿರೋಧ ವ್ಯಕ್ತವಾಗಿತ್ತು. 31 ಸದಸ್ಯ ಬಲ ಇರುವ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ 16 ಮಂದಿ ಕಾಂಗ್ರೆಸ್ ಸದಸ್ಯರು ಗೆಲುವು ಸಾಧಿಸಿದ್ದರೆ ಬಿಜೆಪಿ ಕೇವಲ 9 ಮಂದಿ ಸದಸ್ಯರನ್ನು ಮಾತತ್ರ ಗೆದ್ದಿತ್ತು.

ಇದರಿಂದ ಸುಲಭವಾಗಿಯೇ ನಗರಸಭೆನ್ನು ಕಾಂಗ್ರೆಸ್ ವಶಕ್ಕೆ ಪಡೆಯಲಿದೆ ಎಂಬ ಲೆಕ್ಕಾಚಾರಗಳು ಒಂದೇ ದಿನದಲ್ಲಿ ತಲೆಕೆಳಗಾದವು. ಕಾರಣ ಕಾಂಗ್ರೆಸ್‌ನ ಐವರು ಸದಸ್ಯರು ವಿಪ್ ಉಲ್ಲಂಘಿಸಿ ಬಿಜೆಪಿ ಬೆಂಬಲಿಸುವ ಮೂಲಕ ಕಾಂಗ್ರೆಸ್‌ಗೆ ದೊಡ್ಡ ಶಾಕ್ ನೀಡಿ, ಇಲ್ಲಿನ ನಗರಸಭೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿತ್ತು. ಅಲ್ಲದೆ ಪಕ್ಷೇತರರಾಗಿ ಗೆಲುವು ಸಾಧಿಸಿದ್ದ ಆನಂದರೆಡ್ಡಿ ಅವರು ಅಧ್ಯಕ್ಷರಾಗಿದ್ದರು.

ಆದರೆ ಇದೀಗ ರಾಜಕೀಯ ಮತ್ತೆ ತಿರುವು ಮರೆವು ಆಗಿದೆ. ಈ ಹಿಂದೆ ವಿಪ್ ಉಲ್ಲಂಘಿಸಿ ಬಿಜೆಪಿ ಬೆಂಬಲಿಸಿದ್ದ ಸದಸ್ಯರು ಮತ್ತೆ ಕಾಂಗ್ರೆಸ್‌ಗೆ ವಾಪಸ್ ಆಗಿದ್ದಾರೆ. ಇದರಿಂದ ಕಾಂಗ್ರೆಸ್ ಬಲ ಮತ್ತೆ 16 ಮುಟ್ಟಿದ್ದು, ಇದರೊಂದಿಗೆ ಶಾಸಕ ಮತ್ತು ವಿಧಾನ ಪರಿಷತ್ ಸದಸ್ಯರ ಮತಗಳೂ ಸೇರಿ ಸ್ಪಷ್ಟ ಬಹುಮತ ಕಾಂಗ್ರೆಸ್ ಪಾಲಿಗಿದೆ ಎಂಬ ಲೆಕ್ಕಾಚಾರಗಳು ಪ್ರಸ್ತುತ ಇವೆ. ಆದರೆ ಅದು ಕೊನೆಯವರೆಗೂ ಇರಲಿದೆಯಾ ಎಂಬುದೇ ಅನುಮಾನಕ್ಕೆ ಎಡೆ ಮಾಡಿದ್ದರೆ, ಈ ನಡುವೆ ಪ್ರಸ್ತುತ ಪ್ರಕಟವಾಗಿರುವ ಮೀಸಲಾತಿಯ ಬಗ್ಗೆಯೇ ಸದಸ್ಯರಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಪ್ರಸ್ತುತ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಕಾಂಗ್ರೆಸ್ 16, ಬಿಜೆಪಿ 9, ಜೆಡಿಎಸ್ 2 ಮತ್ತು ಪಕ್ಷೇತ್ರರು 4 ಮಂದಿ ಸದಸ್ಯರಿದ್ದಾರೆ. ಇವರಲ್ಲಿ ಜಾತಿವಾರು ನೋಡುವುದಾದರೆ ಒಕ್ಕಲಿಗ ಸದಸ್ಯರು 4, ಬಲಿಜ ಸಮುದಾಯದ ಸದಸ್ಯರು 9, ಮುಸ್ಲಿಂ ಸಮುದಾಯದ ಸದಸ್ಯರು 4, ಕುರುಬ ಸಮುದಾಯದ ಸದಸ್ಯರು 3, ಎಸ್‌ಸಿ ಸಮುದಾಯದ ಸದಸ್ಯರು 6, ಎಸ್‌ಟಿ ಸಮುದಾಯದ ಸದಸ್ಯರು ಇಬ್ಬರು, ವಿಶ್ವಕರ್ಮ ಸಮುದಾಯದವರು 3, ಬೆಸ್ತ, ಕುಂಬಾರ ಮತ್ತು ಕ್ಷತ್ರೀಯ ಸಮುದಾಯಕ್ಕೆ ಸೇರಿದ ಸದಸ್ಯರು ತಲಾ ಒಬ್ಬರು ಇದ್ದಾರೆ.

ಇನ್ನು ಒಟ್ಟಾರೆಯಾಗಿ 31 ಸದಸ್ಯರಲ್ಲಿ 16 ಮಂದಿ ಮಹಿಳಾ ಸದಸ್ಯರು ನಗರಸಭೆಗೆ ಚುನಾಯಿತರಾಗಿದ್ದಾರೆ. ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಮಹಿಳಾ ಅಧ್ಯಕ್ಷರು 2013ರಲ್ಲಿ ಆಗಿರುವುದನ್ನು ಹೊರತುಪಡಿಸಿದರೆ ನಂತರ ಮಹಿಳಾ ಅಧ್ಯಕ್ಷರನ್ನು ಕಂಡಿಲ್ಲ. ಜೊತೆಗೆ ಎಸ್‌ಸಿ ಮಹಿಳೆ ಅಧ್ಯಕ್ಷರಾಗಿ ಒಮ್ಮೆಯೂ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಚುನಾಯಿತರಾಗಿಲ್ಲ. ಈ ಹಿಂದೆ 2018ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಸ್ಥಾನವನ್ನು ಎಸ್‌ಸಿ ಮಹಿಳೆಗೆ ಮೀಸಲಿಟ್ಟಿದ್ದರು. ಆದರೆ ಆಗ ಸಮ್ಮಿಶ್ರ ಸರ್ಕಾರ ಪತನವಾಗಿ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತಲ್ಲ, ಆಗ ಎಸ್ ಮಹಿಳಾ ಮೀಸಲಾತಿ ತೆಗೆದು ಎಸ್‌ಸಿ ಸಾಮಾನ್ಯ ಮಾಡಲಾಗಿತ್ತು. ಅದು ನಂತರ ಸಾಮಾನ್ಯವಾಗಿದ್ದು ವಿಶೇಷ.

ಪ್ರಸ್ತುತ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಕಳೆದ 10 ವರ್ಷಗಳಿಂದ ಮಹಿಳಾ ಅಧ್ಯಕ್ಷರು ನೇಮಕವಾಗಿಲ್ಲ. ಜೊತೆಗೆ ಚಿಕ್ಕಬಳ್ಳಾಪುರ ನಗರಸಭೆ ಇತಿಹಾಸದಲ್ಲಿಯೇ ಎಸ್‌ಸಿ ಮಹಿಳೆ ಅಧ್ಯಕ್ಷರಾಗಿಲ್ಲ. ಇನ್ನೂ ಹೇಳುವುದಾದರೆ ಪ್ರಸ್ತುತ ನಗರಸಭೆಯ ಮೊದಲ ಅವಧಿಯ 30 ತಿಂಗಳು ಸಾಮಾನ್ಯ ಮೀಸಲಾತಿ ಬಂದ ಕಾರಣಕ್ಕೆ ಒಕ್ಕಲಿಗ ಸಮುದಾಯಕ್ಕೆ ಸೇರಿದ ಆನಂದರೆಡ್ಡಿಯವರು ಅಧ್ಯಕ್ಷರಾಗಿದ್ದರು. ಇದೀಗ ಮತ್ತೆ ಸಾಮಾನ್ಯ ಮೀಸಲಾತಿ ಬಂದಿದ್ದು, ಈಗ ಮತ್ತೆ ಒಕ್ಕಲಿಗರನ್ನೇ ಅಧ್ಯಕ್ಷ ಮಾಡಲು ಸದಸ್ಯರಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಅಲ್ಲದೆ 4ನೇ ವಾರ್ಡಿನ ನಗರಸಭಾ ಸದಸ್ಯರಾಗಿರುವ ಗಜೇಂದ್ರ ಅವರನ್ನು ಬಿಜೆಪಿ ಮತ್ತು ಕಾಂಗ್ರೆಸ್ ಎರಡರಿಂದಲೂ ಅಧ್ಯಕ್ಷ ಅಭ್ಯರ್ಥಿ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿ ಬಂದಿವೆ. ಪ್ರಸ್ತುತ ಗಜೇಂದ್ರ ಅವರು ಬಿಜೆಪಿ ಚಿಹ್ನೆಯಡಿ ಆರಿಸಿ ಬಂದಿದ್ದು, ಒಂದು ವೇಳೆ ಬಿಎಪಿಯಲ್ಲಿ ಅಧ್ಯಕ್ಷ ಸ್ಥಾನದ ಅವಕಾಶ ಸಿಗದಿದ್ದರೆ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡುವ ಸಾಧ್ಯತೆಗಳೂ ಇವೆ ಎಂಬುದು ಸದಸ್ಯರೇ ಹೇಳುತತಿರುವ ಮಾತುಗಳಾಗಿದೆ. ಅಲ್ಲದೆ ಗಡೇಂದ್ರ ಅವರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರೇ ಆಗಿದ್ದು, ಸತತವಾಗಿ ಒಂದೇ ಸಮುದಾಯಕ್ಕೆ ಅಧಿಕಾರ ನೀಡುವ ದಲು ಹಿಂದುಳಿದವರಿಗೆ ಈ ಬಾರಿ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಬೇಡಿಕೆ ಕಾಂಗ್ರೆಸ್ ಮತ್ತು ಬಿಜೆಪಿ ಉಭಯ ಪಕ್ಷಗಳ ಸದಸ್ಯರಿಂದಲೂ ಕೇಳಿಬಂದಿದೆ.

ಎಸ್‌ಸಿ ಮಹಿಳೆಗೆ ಅಧ್ಯಕ್ಷರಾಗಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ 30ನೇ ವಾರ್ಡಿನ ಸದಸ್ಯರು ಒತ್ತಾಯಿಸಿದ್ದು, ಶತಾಗತಾಯ ಎಸ್‌ಸಿ ಮಹಿಳೆಯನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು 18ನೇ ವಾರ್ಡಿನ ನಗರಸಭಾ ಸದಸ್ಯರಾಗಿರುವ ಎ.ಬಿ. ಮಂಜುನಾಥ್ ಅವರು ವಿಶ್ವ ಕರ್ಮ ಸಮುದಾಯಕ್ಕೆ ಸೇರಿದ್ದು, ಈವರೆಗೆ ನಗರಸಭೆಯಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಅವಕಾಶವೇ ಸಿಕ್ಕಿಲ್ಲ. ಅಲ್ಲದೆ ಮೊದಲ ಅವಧಿಯಲ್ಲಿ ಒಕ್ಕಲಿಗ ಸಮುದಾಯದವರು ಅಧ್ಯಕ್ಷರಾಗಿದ್ದು, ಇದೀಗ ಹಿಂದುಳಿದ ಸಮುದಾಯವಾದ ವಿಶ್ವಕರ್ಮರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು 5 ನೇ ವಾರ್ಡಿನ ಬಿಜೆಪಿ ಸದಸ್ಯರಾಗಿರುವ ನಾಗರಾಜ್ ಅವರು ಎಸ್‌ಸಿ ಸಮುದಾಯಕ್ಕೆ ಯಾಕೆ ಒಂದು ಅವಕಾಶ ನೀಡಬಾರದು ಎಂದು ಪ್ರಶ್ನಸಿದ್ದಾರೆ. ಅಲ್ಲದೆ ಒಂದು ವೇಳೆ ಅಧ್ಯಕ್ಷ ಸ್ಥಾನ ಹಿಂದುಳಿದವರಿಗೆ ನೀಡುವುದಾದರೆ, ಉಪಾಅಧ್ಯಕ್ಷ ಸ್ಥಾನ ಎಸ್‌ಸಿಗೆ ಮೀಸಲಾಗಿದ್ದು, ಶತಾಯ ಗತಾಯ ಉಪಾಅಧ್ಯಕ್ಷ ಸ್ಥಾನ ತಮಗೇ ನೀಡಬೇಕು ಎಂಬುದು ಅವರ ವಾದವಾಗಿದೆ. ಅಲ್ಲಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷದಲ್ಲಿಯೂ ಪ್ರಸ್ತುತ ಅಧ್ಯಕ್ಷ ಸ್ಥಾನ ಅಹಿಂದ ವರ್ಗಕ್ಕೆ ನೀಡಬೇಕು ಎಂಬ ಬೇಡಿಕೆ ತೀವ್ರವಾಗಿದೆ.

ಅಹಿಂದ ವರ್ಗಕ್ಕೆ ಅಧ್ಯಕ್ಷ ಸ್ಥಾನದ ಬೇಡಿಕೆ ತೀವ್ರವಾಗಿರುವ ಬೆನ್ನಲ್ಲಿಯೇ ಮಹಿಳಾ ಅಧ್ಯಕ್ಷ ಸ್ಥಾನದ ಬಗ್ಗೆಯೂ ಉಭಯ ಪಕ್ಷಗಳಲ್ಲಿ ಬೇಡಿಕೆ ಬರುತ್ತಿರುವ ಬಗ್ಗೆ ಮೂಲಗಳು ತಿಳಿಸಿವೆ. ಕಾಂಗ್ರೆಸ್‌ನಿoದ ಆರಿಸಿ ಬಂದಿರುವ ಸಿ.ವಿ. ವೆಂಕಟರಾಯಪ್ಪ ಅವರ ಪುತ್ರಿ ಹಾಗೂ ಕೆವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಅವರ ತಾಯಿ ನಿರ್ಮಲಾ ಪ್ರಭು ಅವರು ಹಿಂದುಳಿದ ಬಲಿಜ ಸಮುದಾಯಕ್ಕೆ ಸೇರಿದವರಾಗಿದ್ದು, ಅವರ ತಂದೆಯ ಕಾಲದಿಂದಲೂ ರಾಜಕೀಯ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅಲ್ದೆ ಭ್ರಷ್ಟಾಚಾರ ಸೇರಿದಂತೆ ಯಾವುದೇ ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿತ್ವ ನಿರ್ಮಲಾ ಪ್ರಭು ಅವರದ್ದಾಗಿದ್ದು, ಹಿಂದುಳಿದ ಬಲಿಜ ಸಮುದಾಯದಿಂದ ನಿರ್ಮಲಾಪ್ರಭು ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಆದರೆ ಪಕ್ಷಾತೀತ ಬೆಂಬಲ ವ್ಯಕ್ತವಾಗಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಒಟ್ಟಿನಲ್ಲಿ ಪ್ರಸ್ತುತ ಚಿಕ್ಕಬಳ್ಳಾಪುರ ನಗರಸಬೆಯಲ್ಲಿ ಮೀಸಲಾತಿ ಪ್ರಕಟವಾದ ನಂತರ ಹಲವು ಬೇಡಿಕೆಗಳು ವ್ಯಕ್ತವಾಗುತ್ತಿದ್ದು, ಈಗಾಗಲೇ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿರುವ ಒಕ್ಕಲಿಗ ಸಮುದಾಯಕ್ಕೆ ಮತ್ತೆ ಅಧ್ಯಕ್ಷ ಸ್ಥಾನ ನೀಡಬಾರದು ಎಂಬ ಬೇಡಿಕೆ ತೀವ್ರವಾಗಿದೆ. ಅಲ್ಲದೆ ಈವರೆಗೂ ಅಧಿಕಾರವೇ ಸಿಗದ ಎಸ್‌ಸಿ ಮಹಿಳೆ ಮತ್ತು ವಿಶ್ವ ಕರ್ಮ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಬೇಡಿಕೆಯೂ ತೀವ್ರವಾಗಿದೆ. ಈ ನಡುವೆ ಹಿಂದುಳಿದ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಬೇಡಿಕೆಯೂ ಇದ್ದು, ಸದಸ್ಯರ ಈ ಬೇಡಿಕೆಗಳ ನಡುವೆ ವರಿಷ್ಠರು ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಮತ್ತು ಉಭಯ ಪಕ್ಷಗಳಲ್ಲಿ ಯಾರು ಯಾರು ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾಗಲಿದ್ದಾರೆ ಎಂಬುದು ಕುತೂಹಲಕ್ಕೆ ಎಡೆಮಾಡಿದೆ.

ಅಲ್ಲದೆ ನಗರಸಭೆ ಮೀಸಲಾತಿ ಪ್ರಕಟವಾದ ನಂತರ ಶಾಸಕರು ಫುಲ್ ಆಕ್ಟೀವ್ ಆಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಕಣಕ್ಕಿಳಿಸಬೇಕು ಎಂಬ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಲೋಕಸಭಾ ಅಧಿವೇಶನದಲ್ಲಿ ದೆಹಲಿಯಲ್ಲಿರುವ ಸಂಸದ ಡಾ.ಕೆ. ಸುಧಾಕರ್ ಅವರು ನಗರಸಭೆ ಅಧ್ಯಕ್ಷ ಸ್ಥಾನದ ಬಗ್ಗೆ ಇನ್ನೂ ಗಮನ ಹರಿಸಿದ ನಿದರ್ಶನವಿಲ್ಲ. ಅಧಿವೇಶನ ಮುಗಿಸಿ ಚಿಕ್ಕಬಳ್ಳಾಪುರಕ್ಕೆ ಸಂಸದರು ಬಂದ ನಂತರ ನಗರಸಭೆ ರಾಜಕೀಯ ಚಿತ್ರಣ ಮತ್ತಷ್ಟು ರಸವತ್ತಾಗಿ ಬದಲಾಗಲಿದ್ದು, ಸದಸ್ಯರ ಬೇಡಿಕೆಗಳಿಗೆ ವರಿಷ್ಠರು ಯಾವ ರೀತಿಯ ಮನ್ನಣೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.

►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura

-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday

About The Author

Leave a Reply

Your email address will not be published. Required fields are marked *