ಕನ್ನಡಪರ ಸಂಘಟನೆಗಳಿAದ ಹೆದ್ದಾರಿ ಬಂದ್
1 min readಕಾವೇರಿ ನೀರಿಗಾಗಿ ಹೆದ್ದಾರಿ ಬಂದ್ ಮಾಡಿ ಟೋಲ್ಗೆ ಮುತ್ತಿಗೆ ಹಾಕಿರೋ ಕನ್ನಡಪರ ಸಂಘಟನೆಗಳು…. ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿರೋ ಕಾರ್ಯಕರ್ತರು…. ಮುತ್ತಿಗೆ ಹಾಕಲು ಹೋದ ಕನ್ನಡ ಹೋರಾಟಗಾರ ವಾಟಳ್ ನಾಗರಾಜ್ ರನ್ನ ವಶಕ್ಕೆ ಪಡೆಯುತ್ತಿರೋ ಪೊಲೀಸರು…. ಹೌದು ಈ ಎಲ್ಲಾ ಕಾವೇರಿಗಾಗಿ ಕನ್ನಡಪರ ಸಂಘಟನೆಗಳ ಹೋರಾಟ ನಡೆದಿದ್ದು ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿ.
ಅಂದಹಾಗೆ ತಮಿಳುನಾಡಿಗೆ ಕಾವೇರಿ ನೀರು ಬಿಡೋದನ್ನ ವಿರೋಧಿಸಿ ಹಲವು ವಿಭಿನ್ನ ಹೋರಾಟಗಳು ಮಾಡಿದ್ದ ವಾಟಳ್ ನಾಗರಾಜ್ ನೇತೃತ್ವದ ಕನ್ನಡಪರ ಸಂಘಟನೆಗಳು ಹೆದ್ದಾರಿ ಬಂದ್ ಟೋಲ್ ಮುತ್ತಿಗೆ ಹಮ್ಮುಕೊಂಡಿತ್ತು. ಹೊಸಕೋಟೆಯ ಟೋಲ್ಗೆ ಆಗಮಿಸಿದ ವಾಟಳ್ ಹಾಗೂ ಕನ್ನಡಪರ ಸಂಘಟನೆಗಳು ಕಾವೇರಿ ನೀರಿಗಾಗಿ ಪ್ರತಿಭಟನೆ ನಡೆಸಿದ್ರು. ಇನ್ನೂ ಟೋಲ್ಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಹೆದ್ದಾರಿ ಬಂದ್ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಹೋರ ಹಾಕಿದ್ರು. ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ಸ್ಥಳದಲ್ಲಿ ನೂರಾರು ಪೊಲೀಸರನ್ನ ಬಿಗಿ ಬಂದೋಬಸ್ತ್ಗೆ ನಿಯೋಜನೆ ಮಾಡಲಾಗಿತ್ತು.