ಕೃಷಿ ವಿದ್ಯಾರ್ಥಿಗಳು ಅನ್ವೇಷಣೆಗೆ ಮುಂದಾಗಲಿ: ಕೃಷಿ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ್
1 min readಕೃಷಿ ವಿದ್ಯಾರ್ಥಿಗಳು ವೈಚಾರಿಕತೆಯನ್ನು ಓರೆಗೆ ಹಚ್ಚುವ ಮೂಲಕ ಹೊಸ ಅನ್ವೇಷಣೆಗಳಿಗೆ ಮುಂದಾಗಬೇಕು ಎಂದು ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ್ ಕರೆ ನೀಡಿದ್ದಾರೆ.
ನಗರದ ಜಿಕೆವಿಕೆ ಕ್ಯಾಂಪಸ್‌ನಲ್ಲಿ ವಿವಿಯ ಸ್ನಾತಕೋತ್ತರ ಅಧ್ಯಯನ ನಿರ್ದೇಶನಾಲಯವು ಆಯೋಜಿಸಿದ್ದ ‘ಸ್ನಾತಕೋತ್ತರ ವಿಜ್ಞಾನ ಸಪ್ತಾಹ’ಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಇಂದಿನ ಸಂಶೋಧನೆಗಳು ಭವಿಷ್ಯದ ಅಭಿವೃದ್ಧಿಗೆ ಬುನಾದಿ. ಯುವಜನತೆ ಸಂಶೋಧನೆಗಳ ಬಗ್ಗೆ ಹೆಚ್ಚಿನ ಒತ್ತು ನೀಡಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ವಿಜ್ಞಾನ ಸಪ್ತಾಹವು ಸಂಶೋಧನೆಯ ಮೂಲಭೂತ ಹಾಗೂ ಅನ್ವಯಿಕ ಆಯಾಮಗಳೆರಡನ್ನೂ ಪರಿಚಯಿಸುವ ಜತೆಗೆ ಪರಿಣಾಮಕಾರಿ ಸಂವಹನ ಪ್ರಾವೀಣ್ಯತೆ ಸಾಧಿಸಲು ನೆರವಾಗುತ್ತದೆ ಕೃಷಿಯು ವೈಜ್ಞಾನಿಕ ಜ್ಞಾನವನ್ನೂ ಸಂಯೋಜಿಸಿ ವರ್ಗಾಯಿಸಲು ಸಹಕಾರಿಯಾಗಲಿದೆ ಎಂದು ಪ್ರತಿಪಾದಿಸಿದರು.
ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಮ್ಮ ಸಂಶೋಧನಾ ಪ್ರಯತ್ನ ಹಾಗೂ ಆವಿಷ್ಕಾರಗಳನ್ನು ಪ್ರಸ್ತುತಪಡಿಸಲು ವಿಜ್ಞಾನ ಸಪ್ತಾಹ ಸೂಕ್ತ ವೇದಿಕೆ ಒದಗಿಸಿದೆ. ಈ ವಿಚಾರ ಸಂಕಿರಣದಲ್ಲಿ ಕೃಷಿ ವಿಜ್ಞಾನದ ತಿಳಿವಳಿಕೆಯನ್ನು ಹೆಚ್ಚುವುದರ ಜತೆಗೆ ಸಂವಹನ ಕೌಶಲವನ್ನು ಹದಗೊಳಿಸುವುದರ ಮೂಲಕ ಸಂಶೋಧನಾ ಉತ್ಕೃಷ್ಟತೆಯನ್ನು ಪ್ರೇರೇಪಿಸುವ ಹಾಗೂ ಪೋಷಿಸುವ ಗುರಿಯನ್ನು ಹೊಂದಿದೆ. ಭವಿಷ್ಯದಲ್ಲಿ ಅಂತರ್ ಕೃಷಿ ವಿವಿಗಳ ವಿಜ್ಞಾನ ಸಪ್ತಾಹವನ್ನು ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಸುರೇಶ್ ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಡೀನ್ ಡಾ. ಕೆ.ಎನ್.ಗಣೇಶಯ್ಯ, ಕೃಷಿ ಶಿಕ್ಷಣ ನಿರ್ದೇಶಕ ಡಾ. ಕೆ.ಸಿ. ನಾರಾಯಣಸ್ವಾಮಿ ಮತ್ತಿತರರಿದ್ದರು.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday