ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ರೈತರಿಗೆ ತೊಂದರೆಗಳು
1 min readರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ರೈತರಿಗೆ ಒಂದು ಒಂದು ತೊಂದರೆಗಳು ತಾಂಡವಾಡುತ್ತಿವೆ, ಅದರಂತೆ ರೈತರಿಗೆ ೭ ಗಂಟೆ ಬದಲು ೨ ಗಂಟೆ ವಿದ್ಯುತ್ ಪೂರೈಕೆ, ಕಿಸಾನ್ ಸಮ್ಮಾನ್ ಸಹಾಯಧನ ಕಡಿತ, ಹಾಲು ಒಕ್ಕೂಟರದ್ದು ಸೇರಿದಂತೆ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನಡೆಗಳನ್ನು ವಿರೋಧಿಸಿ ಅಕ್ಟೋಬರ್ ೧೧ ರಂದು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ತಮ್ಮ ಗೃಹ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಡಾ.ಕೆ.ಸುಧಾಕರ್ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆಡಳಿತದಿಂದ ಜನರು ಭ್ರಮನಿರಸನಗೊಂಡಿದ್ದಾರೆ. ದೇಶಕ್ಕೆ ಬೆನ್ನೆಲುಬು ರೈತರು ಎಂದು ಭಾವಿಸಿದ್ದು, ಆ ಬೆನ್ನೆಲುಬನ್ನೇ ಮುರಿಯುವ ಕೆಲಸವನ್ನು ಸರ್ಕಾರ ಮಾಡಿದೆ. ಕೋವಿಡ್ ಅವಧಿಯಲ್ಲೂ ಬಿಜೆಪಿ ಸರ್ಕಾರ ರೈತರಿಗೆ ೭ ಗಂಟೆ ನಿರಂತರ ವಿದ್ಯುತ್ ನೀಡಿತ್ತು. ಅಂಗೈಯಲ್ಲೇ ಚಂದ್ರನನ್ನು ತೋರಿಸುವಂತೆ ಕನಸು ತೋರಿದ ಕಾಂಗ್ರೆಸ್ ಸರ್ಕಾರ ರೈತರಿಗೆ ದ್ರೋಹ ಮಾಡಿದೆ.