ಮಗನಿಂದಲೇ ಹೆತ್ತ ತಾಯಿಯ ಮೇಲೆ ಅತ್ಯಾಚಾರ, ಕೊಲೆಗೆ ಯತ್ನ
1 min readನಾಗರಿಕ ಸಮಾಜವೇ ತಲೆತಗ್ಗಿಸುವ ಕೃತ್ಯಕ್ಕೆ ಬೆಚ್ಚಿದ ಜಿಲ್ಲೆ . ಮಗನಿಂದಲೇ ಹೆತ್ತ ತಾಯಿಯ ಮೇಲೆ ಅತ್ಯಾಚಾರ, ಕೊಲೆಗೆ ಯತ್ನ. ಗುಡಿಬಂಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ಥೆ
ಇದು ನಾಗರಿಕ ಸಮಾಜವೇ ತಲೆ ತಗ್ಗಿಸೋ ವಿಚಾರ, ಸಂಸ್ಕೃತಿ, ಸಂಸ್ಕಾರ ಇಲ್ಲದ ನೀಚನೊಬ್ಬ ಮಾಡಿದ ಹೀನಕೃತ್ಯದಿಂದ ಇಡೀ ಸಮಾಜ ಅಸಹ್ಯ ಪಡುವಂತಾಗಿದೆ. ಮದ್ಯದ ಅಮಲಿನಲ್ಲಿ ಎಸಗಿದ ಆ ಕೃತ್ಯ ಹೇಳಲೂ ನೋವಾಗುತ್ತದೆ. ಹಾಗಾದರೆ ಅಲ್ಲಿ ನಡೆದಿರೋದಾದರೂ ಏನು ಅಂತೀರಾ????
ಆಸ್ಪತ್ರೆ ಬೆಡ್ ಮೇ ಮಲಗಿ ಚಿಕಿತ್ಸೆ ಪಡೆಯುತ್ತಿರೋ ತಾಯಿ, ಅವರಿಂದ ಮಾಹಿತಿ ಪಡೆಯುತ್ತಿರೋ ಪೊಲೀಸರು, ಹಾಗಾದರೆ ಅಲ್ಲಿ ಆಗಿದ್ದು ಏನು ಅಂತೀರಾ, ಅದು ನಾಗರಿಕ ಸಮಾಜ ತಲೆತಗ್ಗಿಸೋ ವಿಚಾರ. ವಿಕೃತ ಕಾಮಿಯೊಬ್ಬ ಮದ್ಯದ ಮತ್ತಿನಲ್ಲಿ ಎಸಗಿದ ಆ ಕೃತ್ಯ ಹೇಳಲೂ ಸಾಧ್ಯವಾಗದ ಅಮಾನುಷ.
ಹೌದು, ತಾಯಿ ಮಗ ಸಂಬಂಧ ಎಂಬುದು ನಮ್ಮ ಸಾಂಪ್ರದಾಯದಲ್ಲಿ ಮಹತ್ವದ್ದಾಗಿದೆ. ಆದರೆ ಅಂತಹ ತಾಯಿ ಮಗನ ಸಂಬಂಧಕ್ಕೆ ಕಳಂಕ ತಂದ ವಿಚಾರವಿದು. ಮಗನಿಂದಲೇ ತಾಯಿ ಮೇಲೆ ಅತ್ಯಾಚಾರ ಮಾಡಿ ವಿಕೃತಿ ಮೆರೆದ ವಿಚಾರವಿದು.
ಈ ಸೈಕೋ ಹೆತ್ತ ತಾಯಿಯ ಮೇಲೆ ಅತ್ಯಾಚಾರ ಮಾಡುವ ಜೊತೆಗೆ ತಾಯಿಯ ಕೊಲೆಗೂ ಯತ್ನಿಸಿರುವುದಾಗಿ ಪೊಲೀಸರು ತಿಳಿಸಿದ್ದು, ಆತನನ್ನ ವರ್ಣಿಸಲು ಪದಗಳೇ ಸಿಗದ ಸ್ಥಿತಿ.
ಕುಡಿದ ಅಮಲಿನಲ್ಲಿ ಕೃತ್ಯ ಎಸಗಿರೋದಾಗಿ ಪೊಲೀಸರು ತಿಳಿಸಿದ್ದು, ಗುಡಿಬಂಡೆ ತಾಲ್ಲೂಕಿನ ಚಿನ್ನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಅಶೋಕ್ ಎಂಬ ಪಾಪಿ ತನ್ನ ಹೆತ್ತ ತಾಯಿ ಮೇಲೆ ಅತ್ಯಾಚಾರ ಮಾಡಿರೋದಾಗಿ ಪೊಲೀಸರು ತಿಳಿಸಿದ್ದಾರೆ. ಈ ಪಾಪಿ ಅಶೋಕನ ಕಿರುಕುಳ ತಾಳಲಾರದೆ ಆತನ ಪತ್ನಿ ಈಗಾಗಲೇ ಮನೆ ಬಿಟ್ಟು ಹೋಗಿರೋದಾಗಿ ತಿಳಿದು ಬಂದಿದೆ.
ಟಿಪ್ಪರ್ ಲಾರಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ಅಶೋಕ, ಹೆತ್ತ ತಾಯಿಯನ್ನು ವಿವಸ್ತ್ರಗೊಳಿಸಿ ತಿಪ್ಪೆಗೆ ಎಳೆದೊಯ್ದು ಕೃತ್ಯ ಎಸಗಿರೋದಾಗಿ ಹೇಳಲಾಗಿದೆ. 60 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
ಸದ್ಯ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂತ್ರಸ್ತೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅತ್ಯಾಚಾರದ ನಂತರ ತನ್ನ ತಾಯಿಯನ್ನು ತಿಪ್ಪೆಯಲ್ಲಿಯೇ ಬಿಟ್ಟು ಪಾಪಿ ಪರಾರಿಯಾಗಿದ್ದಾನೆ.
ಗುಡಿಬಂಡೆ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
* https://youtube.com/@ctvnewschikkaballapura?si=C-CJWuVfM-65JQMa
* LIVE: https://shashwatha.com/player.php?url=https://shashwatha.com/hls/shashwatha/ctvnews.m3u8
* CTV News : https://ctvnewskannada.com/
* Subscribe to Ctv News: https://www.youtube.com/channel/UCHtq26kA5D5anCbPD3HoURw
* Big News Big Update : https://ctvnewskannada.com/
* Download CTV Android App: https://play.google.com/store/apps/details?id=com.ctv.ctvnews
* Like us on Facebook: https://www.facebook.com/ctvnewschikkaballapura
* Follow us on Instagram: https://www.instagram.com/ctvnewschikkaballapura/
* Follow us on Twitter: https://twitter.com/ctvnewscbpura