ರೈತನ ಮೇಲೆ ಚಿರತೆ ದಾಳಿ, ಆಸ್ಪತ್ರೆಗೆ ದಾಖಲು
1 min readರೈತನ ಮೇಲೆ ಚಿರತೆ ದಾಳಿ, ಆಸ್ಪತ್ರೆಗೆ ದಾಖಲು
ಚಿರತೆಯನ್ನು ಸೆರೆ ಹಿಡಿಯಲು ಗ್ರಾಮಸ್ಥರ ಆಗ್ರಹ
ಜಮೀನಿನಲ್ಲಿ ಮೇವು ಕಟಾವು ಮಾಡಲು ತೆರಳಿದ ರೈತನ ಮೇಲೆ ಚಿರತೆ ದಾಳಿ ಮಾಡಿದ ಘಟನೆ ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿ ನಡೆದಿದೆ.
ಜಮೀನಿನಲ್ಲಿ ಮೇವು ಕಟಾವು ಮಾಡಲು ತೆರಳಿದ ರೈತನ ಮೇಲೆ ಚಿರತೆ ದಾಳಿ ಮಾಡಿದ ಘಟನೆ ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿ ನಡೆದಿದೆ. ಬಸವಣ್ಣ ಚಿರತೆ ದಾಳಿಗೆ ಸಿಲುಕಿ ಗಾಯಗೊಂಡ ರೈತನಾಗಿದ್ದು, ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳಿಗ್ಗೆಯಿಂದ ಸಂಜೆ ನಾಲ್ಕು ಗಂಟೆಯವರೆಗೂ ತಮದೇ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸಿ, ಸಂಜೆ ಮನೆಗೆ ತೆರಳಲು ಮುಂದಾದ ವೇಳೆ ಮೇವು ಕಟಾವು ಮಾಡಲು ಜಮೀನಿನ ಒಳಭಾಗಕ್ಕೆ ರೈತ ತೆರಳಿದ್ದು, ಈ ಸಂದರ್ಭದಲ್ಲಿ ಒಳಗೆ ಅವಿತು ಕುಳಿತಿದ್ದ ಚಿರತೆ ಏಕಾಏಕಿ ರೈತನ ಮೇಲೆ ಎರಗಿದೆ. ಇದರಿಂದ ಗಾಬರಿಗೊಂಡ ರೈತ ಚೀರಾಡಿದ್ದು, ರೈತನ ಕೂಗಾಟದಿಂದ ಬೆದರಿದ ಚಿರತೆ ಬಿಟ್ಟು ಹೋಗಿದೆ.
ಈ ಕುರಿತು ಗಾಯಗೊಂಡು ಆಸ್ಪತ್ರೆ ಸೇರಿರುವ ರೈತ ಅಳಲು ತೋಡಿಕೊಂಡಿದ್ದು, ಸಿಂಧುವಳ್ಳಿ ಗ್ರಾಮದ ಸುತ್ತಮುತ್ತ ಚಿರತೆ ಮತ್ತು ಕಾಡುಪ್ರಾಣಿಗಳ ಕಾಟ ಹೆಚ್ಚಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಮತ್ತು ಸಂಘಟಕರು ಆಗ್ರಹಿಸಿz್ದÁರೆ.
೧. ತ್ರಿನೇಶ್ .ಪ್ರತಿಧ್ವನಿ ವೇದಿಕೆಯ ತಾಲೂಕು ಅಧ್ಯಕ್ಷ