ಸಂಕಷ್ಟದಲ್ಲಿರುವ ಜನರ ಬೆನ್ನಿಗೆ ನಿಲ್ಲುವುದೇ ಕಾಂಗ್ರೆಸ್ ಸರ್ಕಾರ
1 min readಸಂಕಷ್ಟದಲ್ಲಿರುವ ಜನರ ಬೆನ್ನಿಗೆ ನಿಲ್ಲುವುದೇ ಕಾಂಗ್ರೆಸ್ ಸರ್ಕಾರ
ಪ್ರವಾಹದಿಂದ ತತ್ತರಿಸಿದ ಕುಟುಂಬಗಳಿಗೆ ಧೈರ್ಯ ತುಂಬಿದ ಸಚಿವ
ಹೊರ ರಾಜ್ಯ ಕೇರಳದ ವೈ ನಾಡಿನಲ್ಲಿ ಸುರಿದ ಧಾರಾಕಾರ ಮಳೆಯ ಹಿನ್ನೆಲೆ ರಾಜ್ಯದ ಕಬಿನಿ ಜಲಾಶಯದಲ್ಲಿ ಬಾರಿ ಪ್ರಮಾಣದ ಒಳಹರಿವು ಹೆಚ್ಚಾದ ಕಾರಣ ನಂಜನಗೂಡಿನ ಕಪಿಲಾ ನದಿಯ ಮೂಲಕ ಸುಮಾರು 70 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹೊರ ಬಿಟ್ಟ ಹಿನ್ನೆಲೆ ನಂಜನಗೂಡಿನ ಕಪಿಲಾ ನದಿಯಲ್ಲಿ ಬಾರಿ ಪ್ರಮಾಣದ ಪ್ರವಾಹ ಹರಿಯುತ್ತಿದೆ. ಇದರಿಂದ ತಗ್ಗು ಪ್ರದೇಶದ ಬಡಾವಣೆಗಳಿಗೆ ಪ್ರವಾಹದ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಹೊರ ರಾಜ್ಯ ಕೇರಳದ ವೈ ನಾಡಿನಲ್ಲಿ ಸುರಿದ ಧಾರಾಕಾರ ಮಳೆಯ ಹಿನ್ನೆಲೆ ರಾಜ್ಯದ ಕಬಿನಿ ಜಲಾಶಯದಲ್ಲಿ ಬಾರಿ ಪ್ರಮಾಣದ ಒಳಹರಿವು ಹೆಚ್ಚಾದ ಕಾರಣ ನಂಜನಗೂಡಿನ ಕಪಿಲಾ ನದಿಯ ಮೂಲಕ ಸುಮಾರು 70 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹೊರ ಬಿಟ್ಟ ಹಿನ್ನೆಲೆ ನಂಜನಗೂಡಿನ ಕಪಿಲಾ ನದಿಯಲ್ಲಿ ಬಾರಿ ಪ್ರಮಾಣದ ಪ್ರವಾಹ ಹರಿಯುತ್ತಿದೆ. ಇದರಿಂದ ತಗ್ಗು ಪ್ರದೇಶದ ಬಡಾವಣೆಗಳಿಗೆ ಪ್ರವಾಹದ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ನಂಜನಗೂಡು ಪಟ್ಟಣದ ತೋಪಿನ ಬೀದಿ ಒಕ್ಕಲಗೇರಿ ಹಳ್ಳದ ಕೇರಿ ಹಾಗೂ ಹುಲ್ಲಹಳ್ಳಿಯ ಸಮೀಪದ ಕಡಬೂರು, ಹಳೆ ಕಡಜಟ್ಟಿ, ಹೆಜ್ಜಿಗೆ, ಬೊಕ್ಕಹಳ್ಳಿ , ತೊರೆ ಮಾವು ಗ್ರಾಮಗಳ ವಾಸದ ಮನೆಗಳಿಗೆ ಪ್ರವಾಹದ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದೆ.
ಕೃಷಿ ಭೂಮಿಯಲ್ಲಿ ಮಾಡಿದ ಬೆಳೆ ನಾಶವಾಗಿ ಸಾಕಷ್ಟು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲೂಕು ಮತ್ತು ಜಿಲ್ಲಾಡಳಿತ ಎಚ್ಚೆತ್ತು ಏಳು ಕಡೆ ಗಂಜಿ ಕೇಂದ್ರಗಳನ್ನು ತೆರೆದು ೨೫೦ಕ್ಕೂ ಹೆಚ್ಚು ಕುಟುಂಬಗಳನ್ನು ಕಾಳಜಿ ಕೇಂದ್ರಗಳಲ್ಲಿ ಬಿಟ್ಟು ಮೂಲ ಸೌಲಭ್ಯಗಳನ್ನು ಒದಗಿಸಿತ್ತು. ಇಂದು ಜಿಲ್ಲಾ ಮಂತ್ರಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹದೇವಪ್ಪ, ಎಂಎಲ್ಸಿ ಡಾ. ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ನಂಜನಗೂಡಿನ ತಹಸಿಲ್ದಾರ್ ಶಿವಕುಮಾರ್ ಕಾಸ್ನೂರು, ಸಿಇಒ ಗಾಯತ್ರಿ, ಇಒ ಜೆರಾಲ್ಡ್ ರಾಜೇಶ್ ಸೇರಿದಂತೆ ಸಾಕಷ್ಟು ಅಧಿಕಾರಿಗಳ ತಂಡ ಸ್ಥಳದಲ್ಲಿ ಹಾಜರಿದ್ದು, ನೊಂದ ಕುಟುಂಬಗಳ ಸಂಕ್ಷಿಪ್ತ ಮಾಹಿತಿಯನ್ನು ಸಚಿವರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.
ಕೂಡಲೇ ಸರ್ಕಾರದಿಂದ ನೊಂದ ಕುಟುಂಬಳಿಗೆ ಪರಿಹಾರದ ಹಣ ನೀಡಲಾಗುವುದು, ವಾಸದ ಮನೆಗಳ ನಿರ್ಮಾಣಕ್ಕೆ ಈಗಾಗಲೇ ಎಲ್ಲಾ ತಯಾರಿ ನಡೆಸಲಾಗಿದೆ. ಯಾವುದೇ ಕಾರಣಕ್ಕೂ ನಂಜನಗೂಡಿನ ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಮಹದೇವಪ್ಪ ನೋಂದವರಿಗೆ ಆತ್ಮಸ್ಥೆರ್ಯ ತುಂಬಿದರು. ಈಗಾಗಲೇ ಕಂದಾಯ ಸಚಿವ ಕೃಷ್ಣಬೈರೇಗೌಡ ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ಜಿಲ್ಲಾಧಿಕಾರಿಗಳ ಸಮೇತ ಅಧಿಕಾರಿಗಳ ತಂಡವೇ ಇಲ್ಲಿ ಪರಿಶೀಲನೆ ನಡೆಸಿದೆ ಎಂದರು.
ತಗ್ಗು ಪ್ರದೇಶಗಳಿಗೆ ಶಾಶ್ವತ ಪರಿಹಾರ ನೀಡಲು ಈಗ ತಯಾರಿ ನಡೆಸಲಾಗಿದೆ. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬದ್ಧವಾಗಿದೆ ಎಂದು ಎಂಎಲ್ಸಿ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.