ಮಾಲೂರಿನಲ್ಲಿ ರಂಗಪಯಣ ತಂಡದ ಶರೀಫ ನಾಟಕ ಪ್ರರ‍್ಶನ
1 min readಆಟ ಪಾಠಗಳ ಜತೆಗೆ ಸಾಂಸ್ಕೃತಿಕ ಕಲೆಗಳಲ್ಲಿ ಆಸಕ್ತಿ ಅಗತ್ಯ
ಮಾಲೂರಿನಲ್ಲಿ ರಂಗಪಯಣ ತಂಡದ ಶರೀಫ್ ನಾಟಕ ಪ್ರದರ್ಶನ
ವಿದ್ಯಾರ್ಥಿಗಳು ಆಟ ಪಾಠಗಳ ಜತೆಗೆ ಸಾಂಸ್ಕೃತಿಕ ಕಲೆಗಳಲ್ಲಿ ಆಸಕ್ತಿ ತೋರಿದರೆ ಜೀವನ ಸುಂದರವಾಗಿ ಕಾಣಬಹುದು ಎಂದು ನಮ್ಮ ಕರ್ನಾಟಕ ಸೇನೆ ರಾಜ್ಯ ಉಪಾಧ್ಯಕ್ಷ ಚಾಕನಹಳ್ಳಿ ನಾಗರಾಜ್ ಹೇಳಿದರು.
ವಿದ್ಯಾರ್ಥಿಗಳು ಆಟ ಪಾಠಗಳ ಜತೆಗೆ ಸಾಂಸ್ಕೃತಿಕ ಕಲೆಗಳಲ್ಲಿ ಆಸಕ್ತಿ ತೋರಿದರೆ ಜೀವನ ಸುಂದರವಾಗಿ ಕಾಣಬಹುದು ಎಂದು ನಮ್ಮ ಕರ್ನಾಟಕ ಸೇನೆ ರಾಜ್ಯ ಉಪಾಧ್ಯಕ್ಷ ಚಾಕನಹಳ್ಳಿ ನಾಗರಾಜ್ ಹೇಳಿದರು. ಮಾಲೂರಿನ ಯುವಶಕ್ತಿ ಸಮಿತಿಯಿಂದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ರಂಗಪಯಣ ತಂಡದ ಶರೀಫ್ ನಾಟಕ ಪ್ರದರ್ಶನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಪಠ್ಯ ಪುಸ್ತಕಗಳಲ್ಲಿನ ಪಾಠಗಳ ಮೂಲಕ ಜೀವನಕ್ಕೆ ದಾರಿ ತೋರಿದರೆ ಅದನ್ನು ಸಾಂಸ್ಕೃತಿಕ ಕಲೆಗಳಾದ ನಾಟಕ, ಹಾಡುಗಾರಿಕೆ, ಬರವಣಿಗೆಗಳನ್ನು ಹವ್ಯಾಸವಾಗಿಸಿಕೊಂಡರೆ ಬದುಕನ್ನು ಸುಂದರವಾಗಿಸಬಹುದು ಮತ್ತು ಪ್ರಸ್ತುತ ಸಮಾಜದಲ್ಲಿ ಮುನ್ನೆಲೆಗೆ ಬರಲು ವೇದಿಕೆಯಾಗುತ್ತದೆ. ಜತೆಗೆ ವಿದ್ಯಾರ್ಥಿನಿಯರು ಶಿಕ್ಷಕರು ಭೋದಿಸುವ ಪಾಠಗಳನ್ನು ಗಮನವಿಟ್ಟು ಕೇಳಿ ಓದಿ ಶಿಕ್ಷಕರಿಗೆ ಮತ್ತು ಪೋಷಕರು ಹೆಮ್ಮೆ ಪಡುವಂತೆ ಉನ್ನತ ಸ್ಥಾನ ಪಡೆದುಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ರ0ಗಭೂಮಿಯ ಪ್ರಖ್ಯಾತ ತಂಡವಾಗಿ ಗುರುತಿಸಿಕೊಂಡಿರುವ ರಂಗಪಯಣ ತಂಡ ತನ್ನ 15 ವರ್ಷದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ 15 ಕಡೆ ವಿವಿಧ ನಾಟಕ ಪ್ರದರ್ಶನ ಮಾಡುವ ಮೂಲಕ ದಾಖಲೆ ನಿರ್ಮಿಸಲು ಮುಂದಾಗಿದ್ದು 15 ಪ್ರದರ್ಶನಗಳಲ್ಲಿ 2ನೇ ಪ್ರದರ್ಶನವಾಗಿ ಸಂತ ಶಿಶುನಾಳ ಶರೀಫ್‌ರ ನಾಟಕವನ್ನು ಪ್ರದರ್ಶಿಸಿದರು, ನಾಟಕದಲ್ಲಿ ಶರೀಫ್ ಪಾತ್ರದಲ್ಲಿ ಸಂಗೀತ ನಿರ್ದೇಶಕ ರಾಜ್ ಗುರು ಹೊಸಕೋಟೆ ಅವರು ನಟಿಸಿದರು, ತಂಡದ ನಿರ್ದೇಶಕಿ ನಯನ ಜೆ ಸೂಡ ಅವರು ತಂಡದ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದರು, ಕನ್ನಡ ಕೋಗಿಲೆ ಖ್ಯಾತಿಯ ಜಾನಪದ ಗಾಯಕಿ ಉಮಾ ವೈ.ಜಿ. ಕೋಲಾರ ಅವರು ತಮ್ಮ ಗಾಯನದ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು.
ಈ ಸಂದರ್ಭದಲ್ಲಿ ಬಾಲಕಿಯರ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ಸಿ.ವಿಜಯ ಕುಮಾರ್, ಶೈಲಜಾ ಕೃಷ್ಣ, ಎಸ್.ಎಂ.ರಾಜು, ಎಂ.ಶ್ರೀನಿವಾಸ್, ದ್ಯಾಪಸಂದ್ರ ಅಮರ್, ಓಬಳಾಪುರ ಶಂಕರ್, ಜಕ್ಕಸಂದ್ರ ಎನ್.ಸಂತೋಷ್ ಕುಮಾರ್ ಇದ್ದರು.