ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪಿಗೆ ಸ್ವಾಗತ
1 min readಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪಿಗೆ ಸ್ವಾಗತ
ಒಳ ಮೀಸಲಾತಿ ಜಾರಿಗೆ ಕ್ರಮವಹಿಸಲು ಆಗ್ರಹ
ಒಳಮೀಸಲಾತಿ ನೀಡಬಹುದು ಎಂದು ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತಿರ್ಪನ್ನು ತಾಲೂಕಿನ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಸ್ವಾಗತಿಸಿ ವಿಜಯೋತ್ಸವ ಆಚರಣೆ ಮಾಡಿದರು. ಗುಡಿಬಂಡೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕಿನ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಸೇರಿ ಅಂಬೇಡ್ಕರ್ ಪುತ್ಥಳಿಗೆ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.ಈ ವೇಳೆ ದಲಿತ ಸಂಘಟನೆಗಳ ಒಕ್ಕೂಟದ ಡಾ .ನಾರಾಯಣಸ್ವಾಮಿ ಮಾತನಾಡಿ, ಒಳ ಮೀಸಲಾತಿ ಜಾರಿಗಾಗಿ ೩೫ ವರ್ಷಗಳ ನಿರಂತರ ಹೋರಾಟ ಮಾಡಿದ ಪರಿಣಾಮ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ರಾಜ್ಯ ಸರ್ಕಾರಗಳು ನೀಡಬಹುದು ಎಂದು ನೀಡಿರುವ ತೀರ್ಪು ಸ್ವಾಗತಾರ್ಹ. ಇದನ್ನು ರಾಜ್ಯ ಸರ್ಕಾರ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಬ್ರಾಹ್ಮಣರಹಳ್ಳಿ ನರಸಿಂಹಮೂರ್ತಿ, ಚಲಪತಿ , ಕೆ ಎನ್ ನರಸಿಂಹಪ್ಪ , ಈಶ್ವರಪ್ಪ , ಅದೆಪ್ಪ , ನರಸಿಂಹಪ್ಪ , ಅಶ್ವತ್ಥಪ್ಪ , ರಾಮಾಂಜಿ , ನಾಗೇಂದ್ರ , ವೆಂಕಟೇಶ್ , ಪೂಜಪ್ಪ , ಗಂಗಾಧರಪ್ಪ , ಎಂ ಎನ್ ನಾರಾಯಣಪ್ಪ , ರಾಜು , ಅಶ್ವತ್ಥಪ್ಪ , ಸಂತೋಷ , ಕೃಷ್ಣಪ್ಪ , ಜಗನಾಥ್ , ಶ್ರೀನಿವಾಸ್ , ಅಮರಾವತಿ , ಮಂಜುನಾಥ್ , ಜಾಂಬವ ಸೇನೆ ಶ್ರೀನಿವಾಸ್ , ಅಂಜಿನಪ್ಪ ಇದ್ದರು.