ಒಂಟಿ ಮಹಿಳೆ ಜಮೀನಿನ ಮೇಲೆ ಭೂಮಾಫಿಯ ಕಣ್ಣು
1 min readಒಂಟಿ ಮಹಿಳೆ ಜಮೀನಿನ ಮೇಲೆ ಭೂಮಾಫಿಯ ಕಣ್ಣು
ಕೋರ್ಟ್ನಲ್ಲಿ ಕೇಸ್ ಇದ್ರು ಕಾಂಪೌ0ಡ್ ನಿರ್ಮಾಣ
ಸಾವಿನ ತಮಟೆ ಏಟು ಹೊಡೆದು ಪ್ರತಿಭಟನೆ
ನಂದಿಬೆಟ್ಟದ ತಪ್ಪಲಲ್ಲಿರುವ ಕೊಟ್ಯಾಂತರ ರೂಪಾಯಿ ಮೌಲ್ಯದ ಜಮೀನು, ಆ ಜಮೀನಿನ ವಾರಸ್ದಾರರೇ ದಲಿತ ಮಹಿಳೆ, ಆಕೆಯ ಜಮೀನು ಹೊಡೆಯಲು ಸಂಚು ನಡೆಸಿದೆ ಭೂಮಾಫಿಯಾ ಗ್ಯಾಂಗ್, ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಕಾಂಪೌ0ಡ್ ನಿರ್ಮಾಣಕ್ಕೆ ಮುಂದಾಗಿದೆ, ಮಹಿಳೆಯ ಪರನಿಂತ ದಲಿತ ಸಂಘಟನೆ ಪ್ರತಿಭಟನೆಗೆ ಮುಂದಾಗಿದ್ದು, ಸಾವಿನ ತಮಟೆ ಏಟು ಹೊಡೆಯುವ ಮೂಲಕ ದಲಿತ ಮಹಿಳೆಯ ಪರ ನ್ಯಾಯ ಕೇಳುತ್ತಿದ್ದಾರೆ.
ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಕಾಂಪೌ0ಡ್ ನಿರ್ಮಾಣಕ್ಕೆ ಮುಂದಾಗಿದೆ, ಮಹಿಳೆಯ ಪರನಿಂತ ದಲಿತ ಸಂಘಟನೆ ಪ್ರತಿಭಟನೆಗೆ ಮುಂದಾಗಿದ್ದು, ಸಾವಿನ ತಮಟೆ ಏಟು ಹೊಡೆಯುವ ಮೂಲಕ ದಲಿತ ಮಹಿಳೆಯ ಪರ ನ್ಯಾಯ ಕೇಳುತ್ತಿದ್ದಾರೆ. ದೊಡ್ಡಬಳ್ಳಾಪುರ ತಾಲೂಕು ಹೆಗ್ಗಡಿಹಳ್ಳಿಯ ಸರ್ವೆ ನಂಬರ್ 102ರ 5 ಎಕರೆ 3 ಗುಂಟೆ ಜಾಗದ ಒಡತಿ ಮುನಿನಾರಾಯಣಮ್ಮ, ಮುನಿಯಪ್ಪನವರ ಮೊದಲ ಹೆಂಡತಿ. ಚಿಕ್ಕತಿಮ್ಮಕ್ಕನವರ ಒಬ್ಬಳೇ ಮಗಳು.
ಈ ಮುನಿನಾರಾಯಣಮ್ಮ 2011ರಲ್ಲಿ ದೊಡ್ಡಬಳ್ಳಾಪುರದ ನ್ಯಾಯಾಲಯದಲ್ಲಿ ಭಾಂಶದ ಕೇಸ್ ಹಾಕಿದ್ದು, ಕೋರ್ಟ್ ಆದೇಶದಂತೆ ಮುನಿನಾರಾಯಣಮ್ಮನವರಿಗೆ 5 ಎಕರೆ 3 ಗುಂಟೆ ಜಮೀನು ಸಿಕ್ಕಿದೆ, ಸರ್ವೆ ನಡೆಸಿ ಜಾಗವನ್ನ ಗುರುತಿಸುವ ಕಾರಣಕ್ಕೆ ಕೋರ್ಟ್ ನಲ್ಲಿ ಎಪ್‌ಡಿಪಿ ಕೇಸ್ ನಡೆಯುತ್ತಿದೆ, ಈ ನಡುವೆ ಭೂಮಾಫಿಯಾ ಗ್ಯಾಂಗ್ ಮುನಿನಾರಾಯಣಮ್ಮರವರಿಗೆ ಸೇರಿದ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿ ಕಾಂಪೌ0ಡ್ ನಿರ್ಮಾಣ ಮಾಡಲಾಗುತ್ತಿದೆ. ಮುನಿನಾರಾಯಣಮ್ಮರವರಿಗೆ ನ್ಯಾಯ ಕೊಡಿಸುವ ಕಾರಣಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸುವ ಮೂಲಕ ಕಾಂಪೌ0ಡ್ ಕೆಲಸವನ್ನ ನಿಲ್ಲಿಸಿದೆ.
ಭಾರತೀಯ ಶೂದ್ರ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿದ್ದರಾಜು ಮಣೆಗಾರ ಮಾತನಾಡಿ, ವಿಕ್ರಂ ಮತ್ತು ಆತನ ಸಹಚರರ ತಂಡ ಕೋರ್ಟ್ ಕೇಸ್ ಇದ್ರು ಮುನಿನಾರಾಯಣಮ್ಮ ಜಮೀನಿನಲ್ಲಿ ಕಾಂಪೌ0ಡ್ ನಿರ್ಮಾಣ ಮಾಡುತ್ತಿದ್ದಾರೆ, ಅತಿಕ್ರಮ ಪ್ರವೇಶ ನಾರಾಯಣಮ್ಮನವರ ಸಾವಿನಂತೆ ವಾಸವಾಗಿದೆ, ಈ ಕಾರಣದಿಂದ ಸಾವಿನ ತಮಟೆ ಏಟು ಹೊಡೆಯುವ ಮೂಲಕ ನಾವು ಪ್ರತಿಭಟನೆ ಮಾಡುತ್ತಿದ್ದೇವೆ, ಭೂಮಾಫಿಯಾ ಗ್ಯಾಂಗ್ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಅವರನ್ನ ಗಡಿಪಾರು ಮಾಡಬೇಕು, ಇಲ್ಲದಿದ್ದಾರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.