ಡೆಂಗ್ಯೂ ನಿಯಂತ್ರಣಕ್ಕಾಗಿ ಎಪಿಎಂಸಿ ಜಾಲಾಡಿದ ಡಿಸಿ
1 min readಡೆಂಗ್ಯೂ ನಿಯಂತ್ರಣಕ್ಕಾಗಿ ಎಪಿಎಂಸಿ ಜಾಲಾಡಿದ ಡಿಸಿ
ಇಂದಿರಾ ಕ್ಯಾಂಟಿನ್ ಚೆಕ್ ಮಾಡಿ ಸ್ವಚ್ಚತೆಗೆ ಸೂಚನೆ
ಚಿಕ್ಕಬಳ್ಳಾಪುರ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯವನ್ನು ಕಾಡುತ್ತಿರುವ ಡೆಂಗ್ಯೂ ನಿಯಂತ್ರಣಕ್ಕೆ ಜಿಲ್ಲಾಡಳಿತ, ಜಿಲ್ಲೆ ಪಂಚಾಯತ್, ಆರೋಗ್ಯ ಇಲಾಖೆ ತೀವ್ರ ಕಸರತ್ತು ನಡೆಸುತ್ತಿದ್ದು, ಪ್ರತಿ ಶುಕ್ರವಾರ ಡ್ರೆಡೆ ಆಚರಿಸಲಾಗುತ್ತಿದೆ. ಎಲ್ಲಿಯೂ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಇಂದು ಬೆಳ್ಳಂಬೆಳಗ್ಗೆ ನಗರದ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳುಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ತರಲು ಜಿಲ್ಲಾಡಳಿತ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆರೋಗ್ಯ ಇಲಾಖೆಯನ್ನ ಚುರುಕುಗೊಳಿಸಿ ತಮ್ಮ ವ್ಯಾಪ್ತಿಯ ಎಲ್ಲ ಸಿಬ್ಬಂದಿಯನ್ನೂ ಡೆಂಗ್ಯೂ ನಿಯಂತ್ರಣ ಕಾರ್ಯಗಳಲ್ಲಿ ತೊಡಗಲು ಸೂಚಿಸಲಾಗಿದೆ. ನಗರಸಭಾ ವ್ಯಾಪ್ತಿಯಲ್ಲೂ ನಗರಸಭಾ ಅಧಿಕಾರಿಗಳು ಪೌರಕಾರ್ಮಿಕರಿಗೆ ಚರಂಡಿಗಳಲ್ಲಿ ನೀರು ನಿಲ್ಲದಂತೆ ಆಯಾ ವಾರ್ಡುಗಳಲ್ಲಿ ಟೈರು ತೆಂಗಿನ ಚಿಪ್ಪು ಡ್ರಮ್ ಗಳಲ್ಲಿ ನೀರು ಸ್ಟಾಕ್ ಮಾಡದಂತೆ ಜಾಗೃತಿ ಮೂಡಿಸಲಾಗುತ್ತಿದೆ.
ಆಶಾ ಕಾರ್ಯಕರ್ತರು ಮನೆಮನೆಗೂ ತೆರಳಿ ಡ್ರಮ್ ಖಾಲಿ ಮಾಡಿಸುತ್ತಿದ್ದಾರೆ. ಪ್ರತಿ ಶುಕ್ರವಾರ ಪ್ರತಿವಾರದ ಡ್ರಮ್ ಡೆಯನ್ನಾಗಿ ಆಚರಿಸುತ್ತಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ರವೀಂದ್ರ ಮಾರುಕಟ್ಟೆಯ ಎಲ್ಲ ರಸ್ತೆಗಳನ್ನೂ ಜಾಲಾಡಿ, ಕಸ ವಿಲೆವಾರಿ ಮಾಡುವಂತೆ ಸೂಚಿಸಿದರು. ಇಂದಿರಾ ಕ್ಯಾಂಟಿನ್‌ಗೆ ಭೇಟಿಕೊಟ್ಟು ಕ್ಯಾಂಟಿನ್ ನಲ್ಲಿರುವ ಪ್ರತಿ ಮೂಲೆ ಜಾಲಾಡಿದರು. ಇಡ್ಲಿ ಪಾತ್ರೆ, ಸಾಂಬಾರು ಪಾತ್ರೆಗಳನ್ನು ತೆಗೆದು ನೋಡಿದರು. ಕೈ ತೊಳೆಯೋ ಜಾಗವನ್ನ ಸ್ವಚ್ಚಗೊಳಿಸುವಂತೆ ಸಿಬ್ಬಂದಿಗೆ ಸೂಚಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ ಅವರು ಇಂದು ಬೆಳ್ಳಂ ಬೆಳಗ್ಗೆ ಎಂಜಿ ರಸ್ತೆಯಲ್ಲಿರುವ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ, ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೆ ಮಾರುಕಟ್ಟೆಯಲ್ಲಿ ಸ್ವಚ್ಚತೆ ಕಾಪಾಡುವ ಮೂಲಕ ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರ್ತಿಸಿ ದ್ರಾವಣ ಸಿಂಪಡಿಸುವAತೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾದಿಕಾರಿ ಡಾ ಮಹೇಶ್ ಕುಮಾರ್, ನಗರಸಭಾ ಪೌರಾಯುಕ್ತ ಉಮಾಶಂಕರ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹರೀಶ್ ಇದ್ದರು.