ಕ್ರೀಡಾಕೂಟದಲ್ಲಿ ಮಿಂದೆದ್ದ ವಿದ್ಯಾರ್ಥಿಗಳು
1 min readಅಂತರ್ ಶಾಲಾ ಕ್ರೀಡಾಕೂಟಕ್ಕೆ ಚಾಲನೆ
ಕ್ರೀಡಾಕೂಟದಲ್ಲಿ ಮಿಂದೆದ್ದ ವಿದ್ಯಾರ್ಥಿಗಳು
ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದ ಗುರುಮಲ್ಲೇಶ್ವರ ಬಾಲಕಿಯರ ಪ್ರೌಢ ಶಾಲೆಯಲ್ಲಿ 2024-25ನೇ ಸಾಲಿನ ಎರಡು ದಿನಗಳ ಅಂತರ್ ಶಾಲಾ ಕ್ರೀಡಾಕೂಟಕ್ಕೆ ತಗಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರವತಿ ಬಸವರಾಜು ಚಾಲನೆ ನೀಡಿದರು. ಈ ವೇಳೆ ಶಾಲೆಯ ಕಾರ್ಯದರ್ಶಿ ಹೆಚ್.ಎಂ ವೃಷಬೇಂದ್ರ ಮಾತನಾಡಿ, ಕ್ರಿಡೆಯಲ್ಲಿ ಹೆಚ್ಚು ತೊಡಗುವುದರಿಂದ ದೈಹಿಕ, ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದರು.
ಕ್ರಿಡೆ ಯುವಜನರ ಚೇತನವಾಗಬೇಕು. ಇಂದಿನ ಯುವ ಜನಾಂಗ ಕ್ರಿಡಾ ಮನೋಭಾವ ಬೆಳಸಿಕೊಳ್ಳಬೇಕು, ಮೊಬೈಲ್ ಬಳಕೆ ಕಡಿಮೆ ಮಾಡಿ, ದುಷ್ಪರಿಣಾಮಗಳಿಂದ ದೂರವಿರಬೇಕು. ಹಿಂದಿನ ಕಾಲದಲ್ಲಿ ಶ್ರಮಾದಾರಿತ ಜೀವನಶೈಲಿ ಇತ್ತು. ಇದರಿಂದ ಜನರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ತರಗತಿಯ ಪಾಠಕ್ಕೆ ಹೆಚ್ಚಿನ ಆದ್ಯತೆ ನೀಡಿ ಕ್ರೀಡೆಗಳಿಗೆ ಮನ್ನಣೆ ನೀಡದ ಮನಸ್ಥಿತಿಯಿಂದ ನಾವು ಹೊರಬರಬೇಕು. ಕ್ರೀಡೆ ಕೇವಲ ಮನರಂಜನೆಯ ಪ್ರತೀಕವಲ್ಲ. ಸಾಧನೆಯ ಪ್ರತಿರೂಪವಾಗಿದೆ. ವಿದ್ಯಾರ್ಥಿ ಜೀವನದಿಂದ ಶಿಸ್ತುಬದ್ಧವಾಗಿ ಕ್ರೀಡೆಯಲ್ಲಿ ಭಾಗವಹಿಸಿದರೆ ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳಾಗಬಹುದು ಎಂದು ಸಲಹೆ ನೀಡಿದರು.
ಗುರುಮಲ್ಲೇಶ್ವರ ಮಹಾ ವಿದ್ಯಾಸಂಸ್ಥೆಯ ಸುಮಾರು 12ಕ್ಕೂ ಹೆಚ್ಚು ಪ್ರೌಢಶಾಲೆಗಳಿಂದ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳು ಆಗಮಿಸಿದ್ದರು. ಮುಖ್ಯ ಶಿಕ್ಷೆಕ ಗಣೇಶ್, ರವಿಶಂಕರ್, ಬಸವಯ್ಯ, ಹೊಸಕೋಟೆ ಕುಮಾರಸ್ವಾಮಿ,ಶ್ರೀನಿವಾಸ್, ಮಹದೇವಮ್ಮ, ಸಂಪತ್ ಇದ್ದರು.