ಹಸು ಮೇಲೆ ಅತ್ಯಾಚಾರ ಮಾಡಿದ ಪಾಪಿ
1 min readಹಸುಗಳ ಮೇಲೆ ವಿಕೃತ ಕಾಮಿಯೊರ್ವ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ನಗರದ ವಾರ್ಡ್ ನಂಬರ್ ೦೮ ರ ಟಿ.ಜಿ ಟ್ಯಾಂಕ್ ರಸ್ತೆಯ ಸುರೇಶ್ ಎಂಬುವವರಿಗೆ ಸೇರಿದ ಹಸುಗಳ ಮೇಲೆ ಅತ್ಯಾಚಾರ ನಡೆಸಲಾಗಿದೆ.
ಕೊಲ್ಕತ್ತ ಮೂಲದ ರಾಹುಲ್ ಎಂಬಾತನೇ ಈ ಅಮಾನವೀಯ ಕೃತ್ಯ ನಡೆಸಿರುವ ಯುವಕನಾಗಿದ್ದಾನೆ, ಸರಿ ಸುಮಾರು ೨೫ ವರ್ಷದ ಯುವಕ ಹಲವು ಬಾರಿ ಹಸುಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ, ಹಸುಗಳ ಮಾಲೀಕ ಮನೆ ಕಟ್ಟುತ್ತಿದ್ದು ಬೆರೆಡೆ ವಾಸವಾಗಿರುತ್ತಾನೆ, ಮನೆ ಕಟ್ಟುತ್ತಿರುವ ಪಕ್ಕದಲ್ಲೇ ತನ್ನ ಹಸುಗಳ ಕಟ್ಟಿ ಹಾಕಲು ಜಾಗ ಮಾಡಿಕೊಂಡಿರುತ್ತಾನೆ, ಆದರೆ ಪ್ರತಿ ದಿನ ಮಧ್ಯರಾತ್ರಿ ೨-೩ ಗಂಟೆ ಸುಮಾರಿಗೆ ಈ ವಿಕೃತ ಕಾಮಿ ಹಸುಗಳನ್ನು ಕಟ್ಟಿ ಹಾಕುತ್ತಿದ್ದ ಸ್ಥಳಕ್ಕೆ ಬಂದೆ ಹಸುಗಳ ಮೇಲೆ ಅತ್ಯಾಚಾರವೆಸಗಿ ಹೋಗುತ್ತಿದ್ದ. ಮನೆ ಮಾಲೀಕ ಹಸುಗಳ ಕಳ್ಳರ ಕಾಟ ಇದ್ದುದ್ದರಿಂದ ಕಳೆದ ೧೫ ದಿನದ ಹಿಂದೆ ತಮ್ಮ ಮನೆಯ ಬಳಿ ಸಿ ಸಿ ಟಿವಿ ಅಳವಡಿಸಿದ್ದು, ಈ ಸಿ ಸಿ ಟಿವಿ ಯಲ್ಲಿ ಈತನ ನೀಚ ಕೃತ್ಯ ಬಯಲಾಗಿದೆ. ತಡ ರಾತ್ರಿ ಆರೋಪಿಯನ್ನ ರೆಡ್ ಹ್ಯಾಂಡಾಗಿ ಹಿಡಿದು ಚಿಕ್ಕಬಳ್ಳಾಪುರ ನಗರ ಪೊಲೀಸರ ವಶಕ್ಕೆ ನೀಡಲಾಗಿದೆ. ಚಿಕ್ಕಬಳ್ಳಾಪುರ ನಗರ ಪೊಲೀಸರು ಆರೋಪಿ ಯನ್ನ ವಶಕ್ಕೆ ಪಡೆದಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
https://www.youtube.com/watch?v=GXcaV_V3kH8