ರಸ್ತೆ ದುರಸ್ತಿ ಪಡಿಸಲು ಗ್ರಾಮಸ್ಥರ ಆಗ್ರಹ
1 min readರಸ್ತೆ ದುರಸ್ತಿ ಪಡಿಸಲು ಗ್ರಾಮಸ್ಥರ ಆಗ್ರಹ
40 ದಿನಗಳ ಗಡುವು ನೀಡಿದ ಪ್ರತಿಭಟನಾಕಾರರು
ಮಾಜಿ ಶಾಸಕರ ಸಹವಾಸ ಬಿಡಲು ಹಾಲಿ ಶಾಸಕರಿಗೆ ಮನವಿ
ನಂಜನಗೂಡು ತಾಲೂಕಿನ ಹಳದಕೇರಿ ಮಾರ್ಗವಾಗಿ ದೇವರಸನಹಳ್ಳಿ, ಹೊಸೂರು, ಉಪ್ಪಿನಹಳ್ಳಿ ಮಾರ್ಗದ ರಸ್ತೆ ಸರಿಪಡಿಸುವಂತೆ ಗ್ರಾಮಸ್ಥರಿಂದ ಇಂದು ಪ್ರತಿಭಟನೆ ನಡೆಸಲಾಯಿತು. ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ಶ್ರೀಕಂಠೇಶ್ವರ ದೇವಸ್ಥಾನದಿಂದ ರಾಷ್ಟ್ರಪತಿ ರಸ್ತೆಯ ಮೂಲಕ ಲೋಕಾಯುಪಯೋಗಿ ಇಲಾಖೆ ಕಚೇರಿವರಗೆ ಪಾದಯಾತ್ರೆ ಮಾಡಲಾಯಿತು.
ನಂಜನಗೂಡು ತಾಲೂಕಿನ ಹಳದಕೇರಿ ಮಾರ್ಗವಾಗಿ ದೇವರಸನಹಳ್ಳಿ, ಹೊಸೂರು, ಉಪ್ಪಿನಹಳ್ಳಿ ಮಾರ್ಗದ ರಸ್ತೆ ಸರಿಪಡಿಸುವಂತೆ ಗ್ರಾಮಸ್ಥರಿಂದ ಇಂದು ಪ್ರತಿಭಟನೆ ನಡೆಸಲಾಯಿತು. ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ಶ್ರೀಕಂಠೇಶ್ವರ ದೇವಸ್ಥಾನದಿಂದ ರಾಷ್ಟ್ರಪತಿ ರಸ್ತೆಯ ಮೂಲಕ ಲೋಕಾಯುಪಯೋಗಿ ಇಲಾಖೆ ಕಚೇರಿವರಗೆ ಪಾದಯಾತ್ರೆ ಮಾಡಲಾಯಿತು. ಈ ಹಿಂದೆ ರಾಜ ಸರ್ಕಾರ ರಸ್ತೆ ನಿರ್ಮಾಣಕ್ಕೆ ಮೂರು ಕೋಟಿ ಅನುದಾನ ಬಿಡುಗಡೆ ಮಾಡಿದರೂ ಲೋಕೋಪಯೋಗಿ ಅಧಿಕಾರಿಗಳ ನಿರ್ಲಕ್ಷದಿಂದ ಬೇರೆ ಗ್ರಾಮದ ರಸ್ತೆಗೆ ಅನುದಾನ ಬಳಕೆ ಮಾಡಿಕೊಂಡಿದ್ದರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಚುನಾವಣೆ ವೇಳೆ ಶಾಸಕ ದರ್ಶನ್ ಧ್ರುವನಾರಾಯಣ್ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಸ್ತೆಗಳನ್ನು ಸರಿಪಡಿಸುವ ಭರವಸೆ ನೀಡಿದ್ದರು. ಶಾಸಕರಾಗಿ ಒಂದು ವರ್ಷ ಕಳೆದರೂ ಎಂಟು ತಿಂಗಳ ಮಾಜಿ ಶಾಸಕರ ಜೊತೆ ಸೇರಿ ಮಂದಗತಿಯಾದ ಶಾಸಕರಾಗಿದ್ದರೆ. ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಸಾಕಷ್ಟು ಅನಾಹುತ ಸಂಭವಿಸುತ್ತಿದೆ. ಜನರು ಸಂಕಷ್ಟದಿಂದ ರಸ್ತೆಯಲ್ಲಿ ಓಡಾಡುವ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಐದು ಗ್ಯಾರಂಟಿಗಳಿಗೆ ಹಣ ಬಿಡುಗಡೆ ಮಾಡುತ್ತಿದೆ, ಆದರೆ ರಸ್ತೆ ನಿರ್ಮಾಣ ಸೇರಿದೆಂತೆ ಇತರೆ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ದುಡ್ಡಿಲ್ಲ. ಶಾಸಕ ದರ್ಶನ್ ರವನಾರಾಯಣ್ ನಂಜನಗೂಡಿನ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಹಳ್ಳಿಗಳ ರಸ್ತೆಗಳನ್ನು ಅಭಿವೃದ್ಧಿ ಮಾಡಬೇಕು, ಸರ್ಕಾರದಲ್ಲಿ ರಸ್ತೆ ಸರಿಪಡಿಸಲು ದುಡ್ಡಿಲ್ಲ ಎಂದರೆ ಹಣ ದೇಣಿಗೆ ಮೂಲಕ ಸಂಗ್ರಹಿಸಿ ಕಳಿಸಿಕೊಡುವುದಾಗಿ ಪ್ರತಿಭಟನಾಕಾರರು ಹೇಳಿದರು.
ಇನ್ನಾದರೂ ಶಾಸಕ ದರ್ಶನ್ ನಾರಯಾಣ್ 8 ತಿಂಗಳ ಮಾಜಿ ಶಾಸಕರ ಸಹವಾಸದಿಂದ ಹೊರಬರುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ನಂತರ ಸಿರಸ್ತೆದಾರರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ದೇವರಸನಹಳ್ಳಿ ಪೈಲ್ವಾನ್ ದೇವರಾಜ್, ಗ್ರಾಮ ಪಂಚಾಯತಿ ಸದಸ್ಯ ಮಹದೇವ್, ವೆಂಕಟೇಶ್, ಗೋವರ್ಧನ್, ಮಂಜುನಾಥ್, ಉಪ್ಪಿನಹಳ್ಳಿ ಮಹದೇವ್ ಸ್ವಾಮಿ, ಮಾಡರಹಳ್ಳಿ ರವಿ, ಮಲ್ಲೇಶ್ ಇದ್ದರು.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday