ಚಿಕ್ಕಬಳ್ಳಾಪುರದಲ್ಲಿ ಪತ್ರಿಕಾ ದಿನಾಚರಣೆ
1 min readಚಿಕ್ಕಬಳ್ಳಾಪುರದಲ್ಲಿ ಪತ್ರಿಕಾ ದಿನಾಚರಣೆ
ಜಚನಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ
ಖಡ್ಗಕ್ಕಿಂತ, ಲೇಖನಿ ಹರಿತ ಎಂದ ಜಿಲ್ಲಾಧಿಕಾರಿ
ಭಾರತ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗ ಉಳಿದ ಮೂರೂ ರಂಗಗಳನ್ನು ಎಚ್ಚರಿಸುವ ಮೂಲಕ ಸರಿದಾರಿಯಲ್ಲಿ ಸಮಾಜವನ್ನು ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಹೊಂದಿರುವ ಅಂಗವಾಗಿದ್ದು, ಭವಿಷ್ಯದ ಪತ್ರಕರ್ತರಾಗಲಿರುವ ಪತ್ರಿಕೋಧ್ಯಮ ವಿದ್ಯಾರ್ಥಿಗಳು ಪತ್ರಿಕೋಧ್ಯಮದ ಮೌಲ್ಯಗಳನ್ನು ಎತ್ತಿಹಡಿಯುವ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಪರ್ಕ ಇಲಾಖೆಯಿಂದ ಚಿಕ್ಕಬಳ್ಳಾಪುರದ ವಾಪಸಂದ್ರದಲ್ಲಿರುವ ಜಚನಿ ಕಾಲೇಜಿನಲ್ಲಿ ಇಂದು ಪತ್ರಿಕಾ ದಿನಾಚರಣೆ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಉದ್ಘಾಟಿಸಿ ಮಾತನಾಡಿ, ಪತ್ರಿಕಾರಂಗ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮಹತ್ತರ ಕೆಲಸ ಮಾಡಲಿದೆ. ಪತ್ರಿಕಾರಂಗ ಯಾರೇ ತಪ್ಪು ಮಾಡಲಿ ಪ್ರಶ್ನಿಸುವ ಜವಾಬ್ದಾರಿ ಹೊಂದಿದೆ. ಪತ್ರಿಕೋಧ್ಯಮದಲ್ಲಿ ಬದ್ಧತೆ ಮತ್ತು ಮೈಲ್ಯಗಳನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇದೆ. ಹಾಗಾಗಿ ಹತ್ತಾರು ವರ್ಷಗಳು ಕಳೆದರೂ ಪತ್ರಿಕೆಗಳಿಗೆ ಇಂದಿಗೂ ಮನ್ನಣೆ ದೊರೆಯುತ್ತಿದೆ ಎಂದರು.
ಪ್ರಸ್ತುತ ತಾಂತ್ರಿಕ ಯುಗದಲ್ಲಿದ್ದರೂ ಪತ್ರಿಕೆಗಳು ತಮ್ಮತನವನ್ನು ಕಳೆದುಕೊಡಿಲ್ಲ. ಇದಕ್ಕೆ ಕಾರಣ ಮೌಲ್ಯಗಳು ಮತ್ತು ಪ್ರಾಮಾಣಿಕತೆ. ಭವಿಷ್ಯದ ಪತ್ರಕರ್ತರಾಗಲಿರುವ ಪತ್ರಿಕೋಧ್ಯಮ ವಿದ್ಯಾರ್ಥಿಗಳು ಬದ್ಧತೆ, ಸಮಯಪಾಲನೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ವೃತ್ತಿ ಬದುಕು ಮುಂದುವರಿಸಬೇಕು. ಆ ಮೂಲಕ ಸಮಾಜದಲ್ಲಿ ಖ್ಯಾತಿ ದೊರೆಯಲಿದೆ ಎಂದು ಹೇಳಿದರು.
ಪತ್ರಕರ್ತರಾದವರು ಎಲ್ಲಿಗೆ ಬೇಕಾದರೂ ಹೋಗುವ ಮತ್ತು ಯಾರನ್ನು ಬೇಕಾದರೂ ಪ್ರಶ್ನಿಸುವ ಹಕ್ಕು ಹೊಂದಿರುತ್ತಾನೆ. ಸಮಾಜದ ಒಳಿತು ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಪತ್ರಕರ್ತರು ಸಾಕಷ್ಟು ಶ್ರಮಿಸಿದ್ದಾರೆ. ಹಾಗಾಗಿಯೇ ಖಡ್ಗಕ್ಕಿಂತ ಲೇಖನಿ ಹೆಚ್ಚು ಹರಿತ ಎನ್ನಲಾಗಿದೆ. ಖಡ್ಗ ಎಷ್ಟೇ ಹರಿತವಾಗಿದ್ದರೂ ಅದರ ಸಾಮರ್ಥ್ಯ ಕೆಲವು ದಿನಗಳಿಗೆ ಮತ್ರಾ ಸೀಮಿತ. ಆದರೆ ಲೇಖನಿ ಹರಿತವಾಗಿದ್ದರೆ ಅದು ಎಂದೆoದಿಗೂ ಶಾಶ್ವತವಾಗಿ ಉಳಿಯುತ್ತದೆ. ಹಾಗಾಗಿಯೇ ಪತ್ರಕರ್ತರು ಮೌಲ್ಯಗಳನ್ನು ಉಳಿಸಿಕೊಂಡು ಜವಾಬ್ದಾರಿಯಿಂದ ಲೇಖನ ಬರೆಯಬೇಕು ಎಂದರು.
ಚಿಕ್ಕಬಳ್ಳಾಪುರದ ಜಚನಿ ಕಾಲೇಜಿನಲ್ಲಿ ಕಾನೂನು ಪದವಿಯ ಜೊತೆಗೆ ಪತ್ರಿಕೋಧ್ಯಮ ಪದವಿಯೂ ಇದ್ದು, ಪತ್ರಿಕೋಧ್ಯಮ ವಿದ್ಯಾರ್ಥಿಗಳಿಗಾಗಿ ಪತ್ರಿಕಾ ದಿನಾಚರಣೆ ಅಂಗವಾಗಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಈ ವಿಚಾರಸಂಕಿರಣದಲ್ಲಿ ಹಿರಿಯ ಪತ್ರಕರ್ತ ಹಾಗೂ ಉಪನ್ಯಾಸದ ಎನ್. ಚಂದ್ರಶೇಖರ್ ಅವರು ಉಪನ್ಯಾಸ ನೀಡಿ, ಪ್ತರಿಕೋಧ್ಯಮ ಮೌಲ್ಯಗಳು ಮತ್ತು ಪತ್ರಿಕೋಧ್ಯಮದಲ್ಲಿ ಎದುರಾಗುವ ಸವಾಲುಗಳ ಬಗ್ಗೆ ವಿವರಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಜುಂಜಣ್ಣ, ಮಂಜುನಾಥ್, ಜಚನಿ ಕಾಲೇಜಿ ಪ್ರಾಂಶುಪಾಲೆ ಶಿವಜ್ಯೋತಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ಜಯರಾಂ ಸೇರಿದಂತೆ ಇತರರು ವಿಚಾರಸಂಕಿರಣದಲ್ಲಿ ಉಪಸ್ಥಿತರಿದ್ದರು.