ಕಲಾವಿದರಿಗೆ ಕಡಿಮೆ ದರದಲ್ಲಿಯೇ ಸದಸ್ಯತ್ವ ನೀಡುವ ಭರವಸೆ
1 min readನೂತನವಾಗಿ ಕನ್ನಡ ಫಿಲಂ ಚೇಂಬರ್ ಅಸ್ಥಿತ್ವಕ್ಕೆ
ಕಲಾವಿದರಿಗೆ ಕಡಿಮೆ ದರದಲ್ಲಿಯೇ ಸದಸ್ಯತ್ವ ನೀಡುವ ಭರವಸೆ
ಕನ್ನಡ ಚಿತ್ರರಂಗದ ಉಳಿವು ಮತ್ತು ಗ್ರಾಮೀಣ ಪ್ರದೇಶದ ಸಾಮಾನ್ಯ ಕಲಾವಿದರಿಗೂ ಸದಸ್ಯತ್ವ ನೀಡುವ ಮೂಲಕ ಕಲಾವಿದರಾದ ಎಲ್ಲರನ್ನೂ ಗುರ್ತಿಸಿ, ಅವಕಾಶ ಕಲ್ಪಿಸುವ ಕೆಲಸವನ್ನು ಕನ್ನಡ ಫಿಲಂ ಚೇಂಬರ್ ಮಾಡಲಿದೆ ಎಂದು ಫಿಲಂ ಚೇಂಬರ್ ಅಧ್ಯಕ್ಷ ಎಂ.ಎಸ್. ರವೀಂದ್ರ ಹೇಳಿದರು.
ಕನ್ನಡ ಚಿತ್ರರಂಗದ ಉಳಿವು ಮತ್ತು ಗ್ರಾಮೀಣ ಪ್ರದೇಶದ ಸಾಮಾನ್ಯ ಕಲಾವಿದರಿಗೂ ಸದಸ್ಯತ್ವ ನೀಡುವ ಮೂಲಕ ಕಲಾವಿದರಾದ ಎಲ್ಲರನ್ನೂ ಗುರ್ತಿಸಿ, ಅವಕಾಶ ಕಲ್ಪಿಸುವ ಕೆಲಸವನ್ನು ಕನ್ನಡ ಫಿಲಂ ಚೇಂಬರ್ ಮಾಡಲಿದೆ ಎಂದು ಫಿಲಂ ಚೇಂಬರ್ ಅಧ್ಯಕ್ಷ ಎಂ.ಎಸ್. ರವೀಂದ್ರ ಹೇಳಿದರು. ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಹೊಸದಾಗಿ ಪ್ರಾರಂಭವಾಗಿರುವ ಫಿಲಂ ಚೇಂಬರ್ ಪೋಸ್ಟರ್ ಬಿಡುಗಡೆ ಮಡಿ ಮಾತನಾಡಿ, ಗ್ರಾಮೀಣ ಕಲಾವಿದರಿಗೆ, ತಂತ್ರಜ್ಞರಿಗೆ ಈಗಿನ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸದಸ್ಯತ್ವ ನೀಡುತ್ತಿಲ್ಲ, ಹಾಗಾಗಿ ಕಡಿಮೆ ಬೆಲೆಯಲ್ಲಿ ಎಲ್ಲರಿಗೂ ಸದಸ್ಯತ್ವ ನೀಡುವುದೇ ಫಿಲಂ ಚೇಂಬರ್ ಗುರಿ ಎಂದರು.
ಪ್ರತಿಯೊಬ್ಬ ಕಲಾವಿದನಿಗೂ ಸುಲಭವಾಗಿ ಸದಸ್ಯತ್ವ ನೀಡುವುದೇ ಚೇಂಬರ್ ಉದ್ಧೇಶವಾಗಿದೆ. ಅಷ್ಟೇ ಅಲ್ಲ, ಸದಸ್ಯತ್ವ ನೀಡಿ ಅವಕಾಶ ಕಲ್ಪಿಸಲಾಗುವುದು, ವೈದ್ಯಕೀಯ ಚೇಂಬರ್ ಸದಸ್ಯರಿಗೆ ಚಿಕಿತ್ಸೆಗೆ ವಿಮೆ ಮಾಡಿಸಿ ೫೦ ಸಾವಿರ ದನ ಸಹಾಯ ಮಾಡಲಾಗುವುದು. ಸಾಧಕರಿಗೆ ಕಲಾ ಸೇವಾರತ್ನ, ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಲು ನಿಧರಿಸಲಾಗಿದ್ದು, ಜುಲೈ 30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಈಗಿನ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಗೋವಾಗೆ ಹೋಗಿ ಮಜಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ರೇಣುಕಾಸ್ವಾಮಿಗೆ ಐದು ಲಕ್ಷ ರುಪಾಯಿ ಪರಿಹಾರವನ್ನು ಮಂಡಳಿಯಿದ ನೀಡಿದ್ದಾರೆ. ಇವರು ಯಾವ ಮಾನದಂಡದಲ್ಲಿ ರೇಣುಕಾಸ್ವಾಮಿಗೆ ಪರಿಹಾರ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು, ರೇಣುಕಾಸ್ವಾಮಿ ಅವರಿಗೆ ಪರಿಹಾರ ನೀಡಿರುವುದು ತಪ್ಪಲ್ಲ, ಆದರೆ ಅವರ ಸ್ವಂತ ಹಣದಲ್ಲಿ ಪರಿಹಾರ ನೀಡಬೇಕಿತ್ತು. ಅದನ್ನು ಬಿಟ್ಟು ಚಲನಚಿತ್ರ ವಾಣಿಜ್ಯ ಮಂಡಳಿಯಿದ ಪರಿಹಾರ ನೀಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.
ಫಿಲಂ ಚೇಂಬರ್ ಉಪಾಧ್ಯಕ್ಷ ಪ್ರಹ್ಲಾದ್ ಮಾತನಾಡಿ, ಕನ್ನಡ ಚಿತ್ರರಂಗವನ್ನು ಬಲಪಡಿಸಲು ಕರ್ನಾಟಕ ಫಿಲಂ ಚೇಂಬರ್ ಕೆಎಸಿ ಆರಂಭಿಸಿದ್ದಾರೆ. ಫಿಲಂ ಚೇಂಬರ್ ಮೂಲಕ ಪ್ರತಿ ಕಲಾವಿದನಿಗೆ ಅನುಕೂಲವಾಗಲಿದೆ, ಕನ್ನಡ ಚಿತ್ರರಂಗ ಬಲಪಡಿಸುವುದೇ ಚೇಂಬರ್ ಉದ್ಧೇಶವಾಗಿದೆ ಎಂದರು. ಚೇಂಬರ್ ಪ್ರಧಾನ ಕಾರ್ಯದರ್ಶಿ ನರಸಿಂಹಯ್ಯ ಮಾತನಾಡಿ, ರಾಜ್ಯದ 31 ಜಿಲ್ಲೆ ಗಳಲ್ಲಿಯೂ ಫಿಲಂ ಚೇಂಬರ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಮಾಡಲಾಗುತ್ತಿದೆ. ಈಗಾಗಲೇ ೧೫ ಜಿಲ್ಲೆ ಗಳಲ್ಲಿ ಪೂರ್ಣಗೊಂಡಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಆಂಜಿನಪ್ಪ, ಹೇಮಲತಾ, ಶಿವು ಸೇರಿದಂತೆ ಇತರರು ಇದ್ರು.