ಚಿತ್ರಾವತಿ ಡ್ಯಾಂ ಕುಡುಕರ ಅಡ್ಡೆ ಪ್ಯಾಕೇಜ್
1 min readಚಿತ್ರಾವತಿ ಡ್ಯಾಂ ಕುಡುಕರ ಅಡ್ಡೆ ಪ್ಯಾಕೇಜ್.
ಕುಡುಕರ ಅಡ್ಡೆಯಾಗಿರುವ ಚಿತ್ರಾವತಿ ಡ್ಯಾಂ.
ಬಾಗೇಪಲ್ಲಿ ತಾಲ್ಲೂಕಿನ ನಗರ ಹಾಗೂ ಹಳ್ಳಿಗಳಿಗೆ ಕುಡಿಯುವ ನೀರು ಕೊಡುವ ಡ್ಯಾಂ.
ಅನೈತಿಕ ಚಟುವಟಿಕೆಗಳ ತಾಣವಾದ ಡ್ಯಾಂ.
ಕುಟುoಭ ಸಮೇತ ಬಂದರೆ ಎಲ್ಲಿ ನೋಡಿದರೂ ಡ್ರಿಂಕ್ಸ್ ಬಾಟಲ್ ಗಳು.
ಈ ಸ್ಥಳಕ್ಕೆ ಬಂದವರು ಆಗುವ ಕಿರುಕುಳದಿಂದ ಇದರ ಸಹವಾಸವೇ ಬೇಡಾ ಎಂದ ಪ್ರವಾಸಿಗರು
ಬಾಗೇಪಲ್ಲಿ ತಾಲೂಕಿನ ಕುಡಿಯುವ ನೀರಿಗೆ ಇದೇ ಡ್ಯಾಂ ನ ಮೇಲೆ ಅವಲಂಬನೆ.
ಎಲ್ಲಿ ನೋಡಿದರೂ ಬಿಯರ್ ಬಾಟಲ್ ಗಳು.
ಅದು ಮೊದಲೇ ಬರಡು ನಾಡು ಎಂದು ಕುಖ್ಯಾತಿ ಹೊಂದಿದ್ದ ತಾಲೂಕು. ಆ ತಾಲೂಕಿನ ಜನರಿಗೆ ಕುಡಿಯಲು ಆ ಒಂದು ಡ್ಯಾಂ ಸಂಜೀವಿನಿಯಾಗಿತ್ತು. ಆದರೆ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡದೆ ಈಗ ಕುಡುಕರ ಅಡ್ಡರಯಾಗಿದೆ. ಅಷ್ಟಕ್ಕೂ ಆ ಡ್ಯಾಂ ಯಾವುದು, ಏನು ಅಲ್ಲಿನ ಸಮಸ್ಯೆ ಎನ್ನುತ್ತೀರಾ ಹಾಗಾದರೆ ಈ ಸ್ಟೋರಿ ಒಮ್ಮೆ ನೋಡಿ…….
ಹೌದು ಹೀಗೆ ಎಲ್ಲಿ ನೋಡಿದರೂ ಮದ್ಯದ ಕವರ್ ಗಳು, ಬಿಯರ್ ಬಾಟೆಲ್ ಗಳು, ಬಂಡೆಯ ಮೇಲೆ ಬಿದ್ದಿರುವ ಗಾಜಿನ ಚೂರುಗಳು, ಡ್ಯಾಂ ನ ಪಕ್ಕದಲ್ಲೇ ಭೂತ ಬಂಗಲೆ ರೀತಿ ಕಾಣುತ್ತಿರುವ ವಿಶ್ರಾಂತಿ ಗೃಹ ಈ ಎಲ್ಲಾ ದೃಶ್ಯಗಳು ಕಂಡುಬದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ. ಹೌದು ಮೊದಲೇ ಚಿಕ್ಕಬಳ್ಳಾಪುರ ಜಿಲ್ಲೆ ಬರಡು ನಾಡು ಎಂದು ಕುಖ್ಯಾತಿ ಪಡೆದಿತ್ತು. ಬಯಲು ಸೀಮೆಯಲ್ಲಿ ಹುಟ್ಟುವ ಚಿತ್ರಾವತಿ ನದಿಗೆ ಅಡ್ಡಲಾಗಿ ಡ್ಯಾಂ ನ್ನು ಬಾಗೇಪಲ್ಲಿ ಬಳಿ ನಿರ್ಮಾಣ ಮಾಡಲಾಗಿತ್ತು. ಈ ಡ್ಯಾಂ ನ ನೀರನ್ನೇ ಈಗಲು ಬಾಗೇಪಲ್ಲಿ ತಾಲೂಕಿಗೆ ಕುಡಿಯುವ ನೀರಿಗಾಗಿ ಬಳಕೆ ಮಾಡುತ್ತಿದ್ದಾರೆ. ಹೀಗಿದ್ದರೂ ಸಹ ಪುರಸಭೆ ಅಧಿಕಾರಿಗಳು ಮಾತ್ರ ಇವುಗಳನ್ನು ನಿರ್ವಹಣೆ ಮಾಡಲು ನಿರ್ಲಕ್ಷ್ಯ ವಹಿಸುತ್ತಿವೆ. ಇದರ ಪರಿಣಾಮ ಈಗ ಈ ಪ್ರಸಿದ್ಧ ಸ್ಥಳ ಅಕ್ರಮ ಚುಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಚಿತ್ರಾವತಿ ಡ್ಯಾಂ ನ ಸುತ್ತಮುತ್ತ ಎಲ್ಲಿ ನೋಡಿದರೂ ಮದ್ಯದ ಕವರ್ ಗಳು, ಬಿಯರ್ ಬಾಟೆಲ್ ಗಳು, ಡ್ಯಾಂ ನ ಅಕ್ಕಪಕ್ಕ ಇರುವ ಬಂಡೆ ಕಲ್ಲುಗಳ ಮೇಲೆ ಗಾಜಿನ ಚೂರುಗಳೇ ಕಾಣಿಸುತ್ತವೆ. ಡ್ಯಾಂ ನ ಬಳಿಗೆ ಬರುವ ಜನರಿಗೆ ಉಪಯೋಗಕ್ಕೆ ಬರಲಿ ಎಂದು ನಿರ್ಮಾಣ ಮಾಡಿರುವ ವಿಶ್ರಾಂತಿ ಗೃಹದಲ್ಲಿ ಪೋಲಿ ಪುಂಡರು ಅಕ್ರಮ ತಾಣಗಳಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಳೆಗಾಲ ಆರಂಭ ಆಗಿರುವುದರಿಂದ ಡ್ಯಾಂ ನಲ್ಲಿ ನೀರು ಹೆಚ್ಚಿರುತ್ತವೆ ನೋಡೋಣಾ ಎಂದು ಬರುವ ಜನರಿಗೆ ಇಲ್ಲಿ ನಿರಾಸೆಯಾಗುತ್ತಿದೆ. ಡ್ಯಾಂ ನೋಡಿ ೫ ನಿಮಿಷ ನೆಮ್ಮದಿಯಾಗಿ ಕುಳಿತು ಕೊಳ್ಳಲು ಆಗುವುದಿಲ್ಲ. ಅಲ್ಲದೆ ಕುಟುಂಬ ಸಮೇತ ಬರುವವರಿಗೆ ಭದ್ರತೆಯ ಭಯ ಕಾಡುತ್ತಿದೆ. ಪುಂಡರು ಯಾವಾಗ ಹೇಗೆ ಬರುತ್ತಾರೋ ಎಂದು ತಿಳಿಯದೆ ಭಯದಿಂದ ಕುಟುಂಬಸ್ಥರು ಬೇಗ ಜಾಗ ಖಾಲಿ ಮಾಡುತ್ತಿದ್ದಾರೆ. ವೀಕೆಂಡ್ ನಲ್ಲಿ ಅತೀ ಹೆಚ್ಚು ಜನರು ಈ ಜಾಗಕ್ಕೆ ಆಗಮಿಸುತ್ತಾರೆ. ಸರಿಯಾಗಿ ಅಧಿಕಾರಿಗಳು ಇದನ್ನು ನಿರ್ವಹಿಸಿದರೆ ಒಂದು ಪ್ರಮುಖ ಪ್ರವಾಸಿ ತಾಣವಾಗುತ್ತದೆ. ಆದರೆ ಅಧಿಕಾರಿಗಳು ಮಾತ್ರ ಈ ಕಡೆ ತಕೆ ಕೂಡ ಹಾಕುತ್ತಿಲ್ಲ. ಇರುವ ಒಂದು ವಿಶ್ರಾಂತಿ ಗೃಹವನ್ನೂ ಕೂಡ ನಿರ್ವಹಣೆ ಮಾಡಿಲ್ಲ ಎಂಬುದೇ ಬೇಸರ.
ಡ್ಯಾಂ ನ ನಿರ್ವಹಣೆ ಮಾಡಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೀಗಾಗಿ ಬಾಗೇಪಲ್ಲಿ ಜನರು ಕಲುಷಿತ ನೀರು ಕುಡಿಯಬೇಕಿದೆ. ಇನ್ನಾದರೂ ಪೋಲೀಸ್ ಇಲಾಖೆ ಜೊತೆಗೆ ಪೌರಸಭೆ ಅಧಿಕಾರಿಗಳು ಸೇರಿ ಅಕ್ರಮ ಚಟುವಟಿಕೆಗಳಿ ಕಡಿವಾಣ ಹಾಕುತ್ತಾ ಕಾದು ನೋಡಬೇಕಿದೆ.