ತಿದ್ದುಪಡಿಗೆ ಅರ್ಜಿ ಸಲ್ಲಿಸಿದವರು ಸರ್ವರ್ ಇಲ್ಲದೆ ಪರದಾಟ
1 min readತಿದ್ದುಪಡಿಗೆ ಅರ್ಜಿ ಸಲ್ಲಿಸಿದವರು ಸರ್ವರ್ ಇಲ್ಲದೆ ಪರದಾಟ
ಪಡಿತರ ಚೀಟಿ ಪಡೆಯಲು ಸಾರ್ವಜನಿಕರ ನಿರಂತರ ಪರದಾಟ
ಬಾಗೇಪಲ್ಲಿ ಪಟ್ಟಣದ ತಾಲೂಕು ಕಚೇರಿಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಕಚೇರಿ ಸಮೀಪ ತಿದ್ದುಪಡಿಗೆ ಅರ್ಜಿ ಸಲ್ಲಿಸಿ ಅನುಮೋದನೆಯಾಗದೆ ಪರದಾಡುತ್ತಿದ್ದಾರೆ. ಪಡಿತರ ಚೀಟಿ ತಿದ್ದುಪಡಿಗೆ ಸರಕಾರ ಜುಲೈ ತಿಂಗಳ ಕೊನೆಯವರೆಗೂ ಅವಕಾಶ ಕಲ್ಪಿಸಿದೆ. ಹಾಗಾಗಿ ಪಡಿತರ ಚೀಟಿಗೆ ಹೊಸದಾಗಿ ಹೆಸರು ಸೇರ್ಪಡೆ, ತೆಗೆಯಲು ಸೇರಿದಂತೆ ಸಣ್ಣಪುಟ್ಟ ದೋಷಗಳನ್ನು ತಿದ್ದು ಪಡಿ ಮಾಡಿಸಲು ಅರ್ಜಿ ಸಲ್ಲಿಸಿರುವವರ ಅನುಮೋದನೆ ಪಡೆದು ಪರಿಷ್ಕೃತ ಪಡಿತರ ಚೀಟಿ ಪಡೆಯಲು ಪರಿಪಾಟಲು ಪಡುವಂತಾಗಿದೆ.
ಪಡಿತರ ಚೀಟಿ ತಿದ್ದುಪಡಿಗೆ ಸರಕಾರ ಜುಲೈ ತಿಂಗಳ ಕೊನೆಯವರೆಗೂ ಅವಕಾಶ ಕಲ್ಪಿಸಿದೆ. ಹಾಗಾಗಿ ಪಡಿತರ ಚೀಟಿಗೆ ಹೊಸದಾಗಿ ಹೆಸರು ಸೇರ್ಪಡೆ, ತೆಗೆಯಲು ಸೇರಿದಂತೆ ಸಣ್ಣಪುಟ್ಟ ದೋಷಗಳನ್ನು ತಿದ್ದು ಪಡಿ ಮಾಡಿಸಲು ಅರ್ಜಿ ಸಲ್ಲಿಸಿರುವವರ ಅನುಮೋದನೆ ಪಡೆದು ಪರಿಷ್ಕೃತ ಪಡಿತರ ಚೀಟಿ ಪಡೆಯಲು ಪರಿಪಾಟಲು ಪಡುವಂತಾಗಿದೆ. ಬಾಗೇಪಲ್ಲಿ ಪಟ್ಟಣದ ತಾಲೂಕು ಕಚೇರಿಯ ಆಹಾರ ಮತ್ತು ನಾಗರೀಕ ಸರಬರಾಜು ಕಚೇರಿಯ ಮುಂದೆ ಪಡಿತರ ಚೀಟಿ ತಿದ್ದು ಪಡಿಗಾಗಿ ಅರ್ಜಿ ಸಲ್ಲಿಸಿದವರು ಬುಧವಾರ ಸಾಲಿನಲ್ಲಿ ನಿಂತು ನಿಂತು ಸರಕಾರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ಘಟನೆ ನಡೆಯಿತು.
ಪಡಿತರ ಚೀಟಿ ತಿದ್ದುಪಡಿ ಮಾಡಿಸಲು ತಾಲೂಕಿನ ನಾನಾ ಗ್ರಾಮಗಳಿಂದ ಆಗಮಿಸಿದ ಜನರು ಬೆಳಗ್ಗೆಯಿಂದಲೇ ಕಚೇರಿ ಸಮೀಪ ಕಾಯುವಂತಾಗಿದೆ. ಸಮರ್ಪಕವಾಗಿ ಸವರ್ರ ದೊರೆಯದೇ ಅಧಿಕಾರಿಗಳು ಮತ್ತು ನಾಗರೀಕರೂ ಕಿರಿಕಿರಿ ಅನುಭವಿಸುವಂತಾಗಿದೆ. ಇದರಿಂದಾಗಿ ಪುಟಾಣಿ ಮಕ್ಕಳನ್ನು ಹೊತ್ತು ತಂದವರು, ವಯೋವೃದ್ಧರು ಕಾದು ಕಾದು ಕಂಗಾಲಾಗಿ ಪರದಾಡುವಂತಾಗಿದೆ. ಜೊತೆಗೆ ಗ್ರಾಮೀಣ ಭಾಗದಿಂದ ಬಂದವರು ಕೂಲಿ ಕೆಲಸ ಮತ್ತಿತರ ಕೆಲಸಗಳನ್ನು ಬಿಟ್ಟು ಬಂದಿರುತ್ತಾರೆ. ತಿದ್ದುಪಡಿಗೆ ಒಳಪಡಿಸಿದ ಪಡಿತರ ಚೀಟಿಯನ್ನು ಪಡೆಯಲು ಅನುಮೋದನೆಗೆ ಸವರ್ರ ಸಮಸ್ಯೆಯಿಂದ ಊಟ, ನೀರು ಇಲ್ಲದೆ ಬೆಳಗ್ಗೆಯಿಂದ ಸಂಜೆವರೆಗೂ ಕಾಯುವಂತಾಗಿದೆ.
ಬಾಗೇಪಲ್ಲಿ ಪ್ರಭಾಕರ್ ಮಾತನಾಡಿ, ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದವರಿಗೆ ಅನುಮೋದನೆ ಕೊಡಲು ಸರ್ವರ್ ಸಮಸ್ಯೆಯಿದೆ. ಹಾಗಾಗಿ ಸಕಾಲದಲ್ಲಿ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತಿಲ್ಲ.ನಾನು ಮೇಲಧಿಕಾರಿಗಳಿಗೂ ತಿಳಿಸಲಾಗಿದೆ. ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹಾರ ಮಾಡಲಾಗುತ್ತದೆ. ಸವರ್ರ ಸಮಸ್ಯೆ ಬಗೆಹರಿದ ಕೂಡಲೇ ಎಲ್ಲ ಅರ್ಜಿಗಳ ಅನುಮೋದನೆ ನೀಡಲಾಗುತ್ತದೆ. ಅದಕ್ಕೂ ಸಮಯಾವಾಕಾಶವೂ ಇದೆ. ಸಾರ್ವಜನಿಕರಿಗೆ ಎಷ್ಟೇ ಹೇಳಿದರು ಕಚೇರಿ ಮುಂದೆ ಕಾಯುತ್ತಿದ್ದಾರೆ. ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹಾರ ಮಾಡಲಾಗುತ್ತದೆ ಎಂದು ತಿಳಿಸಿದರು.