ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಕೋಚಿಮುಲ್ ವಿಭಜನೆಗೆ ಸರ್ವಸದಸ್ಯರ ಒಪ್ಪಿಗೆ

1 min read

ಕೋಚಿಮುಲ್ ವಿಭಜನೆಗೆ ಸರ್ವಸದಸ್ಯರ ಒಪ್ಪಿಗೆ

ಬಾಗೇಪಲ್ಲಿಯಲ್ಲಿ ಕೋಚಿಮುಲ್ ನಂಜೇಗೌಡ

ಬಾಗೇಪಲ್ಲಿಯಲ್ಲಿ ಕೋಚಚಿಮುಲ್ ಸರ್ವ ಸದಸ್ಯರ ಸಭೆ

ಕೋಲಾರ ಚಿಕ್ಕಬಳ್ಳಾಪುರ ಸಹಕಾರ ಹಾಲು ಉತ್ಪಾದಕರ ಒಕ್ಕೂಟವನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಒಕ್ಕೂಟಗಳಾಗಿ ವಿಭಜನೆಗೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿರೆ ಎಂದು ಕೋಚಿಮುಲ್  ನಂಜೇಗೌಡ ತಿಳಿಸಿದರು.ಬಾಗೇಪಲ್ಲಿ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಕೋಚಿಮುಲ್ ಸರ್ವಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಕೋಲಾರ ಚಿಕ್ಕಬಳ್ಳಾಪುರ ಸಹಕಾರ ಹಾಲು ಉತ್ಪಾದಕರ ಒಕ್ಕೂಟವನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಒಕ್ಕೂಟಗಳಾಗಿ ವಿಭಜನೆಗೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿರೆ ಎಂದು ಕೋಚಿಮುಲ್ ನಂಜೇಗೌಡ ತಿಳಿಸಿದರು.ಬಾಗೇಪಲ್ಲಿ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಕೋಚಿಮುಲ್ ಸರ್ವಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಈ ಹಿಂದಿನ ಸರಕಾರ ಕೋಚಿಮುಲ್ ವಿಭಜಿಸಿತ್ತು. ಆದರೆ ಸರಿಯಾದ ರೀತಿಯಲ್ಲಿ ವಿಭಜನೆ ಮಾಡದ ಹಿನ್ನಲೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹಾಗಾಗಿ ನ್ಯಾಯಾಲಯದ ಸೂಚನೆಯಂತೆ ಸರ್ವಸದಸ್ಯರ ಸಭೆ ಕರೆಯಲಾಗಿದ್ದು, ಎಲ್ಲರೂ ಸರ್ವಾನುಮತದಿಂದ ವಿಭಜನೆಗೆ ಒಪ್ಪಿಗೆ ಸೂಚಿಸಿ ಎಂದರು.

ಆಡಳಿತ ಮಂಡಳಿ ಅಧಿಕಾರಾವಧಿಯಲ್ಲಿ ಸುಮಾರು 220 ಕೋಟಿ ಅನುದಾನದಲ್ಲಿ ಎಂ.ವಿ ಕೃಷ್ಣಪ್ಪ ಹೆಸರಲ್ಲಿ ಮೆಗಾ ಡೇರಿ ಸ್ಥಾಪಿಸಲಾಗುತ್ತಿದೆ, ಸುಮಾರು ೬೫ ಕೋಟಿ ವೆಚ್ಚದಲ್ಲಿ ಚಿಂತಾಮಣಿಯಲ್ಲಿ ಐಸ್ ಕ್ರೀಮ್ ಘಟಕದ ಕಾಮಗಾರಿ ಆರಂಭವಾಗಿದೆ. ಒಕ್ಕೂಟದಿಂದ ತಿಂಗಳಿಗೆ ೨ ಕೋಟಿ ವಿದ್ಯುತ್ ಬಿಲ್ ಪಾವತಿ ಮಾಡುತ್ತಿದ್ದು, ಅದನ್ನು ಉಳಿಸಲು ಸೋಲಾರ್ ಪ್ಲಾಂಟ್ ಸ್ಥಾಪಿಸಲಾಗಿದೆ. ಕೆಲವೇ ತಿಂಗಳಲ್ಲಿ 12 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಚಿಕ್ಕಬಳ್ಳಾಪುರದಲ್ಲಿ 130 ಕೋಟಿ ವೆಚ್ಚದಲ್ಲಿ ಹಾಲಿನ ಪ್ಯಾಕಿಂಗ್ ಘಟಕ ಮಾಡಲಾಗುತ್ತಿದೆ ಎಂದು ನಂಜೇಗೌಡರವರು ತಿಳಿಸಿದರು.

ಕೋಚಿಮುಲ್ ಮಾಜಿ ಕೆ.ವಿ ನಾಗರಾಜ್ ಮಾತನಾಡಿ, ಈಗಿನ ಆಡಳಿತ ಮಂಡಳಿ ಅಧಿಕಾರ ವಿಸ್ತರಣೆಗಾಗಿ ವಿಭಜನೆ, ಎಂದು . ಮೇ 12ಕ್ಕೆ ಇವರ ಅಧಿಕಾರಾವಧಿ ಮುಗಿದಿದ್ದು, ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದು ಎಂದು ನ್ಯಾಯಾಲಯ ಸೂಚಿಸಿದೆ. ಈ ವಿಷಯಗಳನ್ನು ಪ್ರಸ್ತಾಪಿಸಲು ಇಂದು ಅವಕಾಶ ಕೊಡಲಿಲ್ಲ.ಇವರಿಗೆ ಬೇಕಾದವರನ್ನು ಸಭೆಯಲ್ಲಿ ಕೂರಿಸಿ ಕೂಗುಗಳು  ಬಿಜೆಪಿ ಸರಕಾರ ಕೋಚಿಮುಲ್ ನಿಂದ ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಒಕ್ಕೂಟ ವಿಭಜಿಸಿದಾಗ  ಎಂದವರು ಈಗ ಹಾಲಿನ ಪ್ಯಾಕಿಂಗ್ ಘಟಕ ಮಾಡಬೇಕಿತ್ತು ಎಂದು ಆಕ್ರೋಶ ಹೊರಹಾಕಿದರು.

About The Author

Leave a Reply

Your email address will not be published. Required fields are marked *