ಕೇಂದ್ರ ಬಜೆಟ್ ನಲ್ಲಿ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ.
1 min readಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ (ಜುಲೈ 23) ಲೋಕಸಭೆಯಲ್ಲಿ ಮಂಡಿಸಿದ್ದ 2024-2025ನೇ ಸಾಲಿನ ಬಜೆಟ್ ನಲ್ಲಿ ಹಳದಿ ಲೋಹ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.15ರಿಂದ ಶೇ.6ಕ್ಕೆ ಇಳಿಕೆ ಮಾಡಿರುವುದಾಗಿ ಘೋಷಿಸಿದ್ದಾರೆ. ಇದು ಚಿನ್ನ ಖರೀದಿಸುವವರಿಗೆ ಸಂತಸದ ಸುದ್ದಿಯಾಗಿದೆ.
ಕೇಂದ್ರ ಸರ್ಕಾರ ಆಮದು ಬೆಳ್ಳಿ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದೆ. ಅಮೂಲ್ಯ ಲೋಹಗಳಾದ ಆಮದು ಚಿನ್ನದ ಮೇಲಿನ ಸುಂಕವನ್ನು ಶೇ.15ರಿಂದ ಶೇ.6ಕ್ಕೆ ಇಳಿಕೆ ಮಾಡಿದ್ದು, ಆಮದು ಬೆಳ್ಳಿಯ ಸುಂಕವನ್ನು ಶೇ.14.35ರಿಂದ ಶೇ.5.35ಕ್ಕೆ ಇಳಿಕೆ ಮಾಡಲಾಗಿದೆ.
ಚಿನ್ನ, ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಿದ್ದರಿಂದ ದೇಶೀಯವಾಗಿ ಚಿನ್ನದ ಬೇಡಿಕೆ ಹೆಚ್ಚಳವಾಗಲಿದ್ದು, ಚಿನ್ನ ಕಳ್ಳಸಾಗಣೆ ತಡೆಯಲು ನೆರವಾಗಲಿದೆ ಎಂದು ಇಂಡಸ್ಟ್ರಿ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, ಭಾರತದಲ್ಲೂ ಚಿನ್ನದ ಬೆಲೆ ಭಾರೀ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ಆಮದು ಚಿನ್ನದ ಮೇಲಿನ ಸುಂಕವನ್ನು ಕಡಿತಗೊಳಿಸಿರುವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಅಲ್ಲದೇ ಲಿಥಿಯಂ ಸೇರಿದಂತೆ 25 ಅಪಾಯಕಾರಿ ಖನಿಜಗಳ ಮೇಲಿನ ಆಮದು ಸುಂಕಕ್ಕೆ ವಿನಾಯ್ತಿ ನೀಡುವುದಾಗಿ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಈ ಮೂಲಕ ಭಾರತದ ಲಿಥಿಯಂ ಸರಬರಾಜಿನ ಹಾದಿ ಸುಗಮವಾಗಬೇಕಾಗಿದೆ. ಲಿಥಿಯಂ ರಾ ಮೆಟಿರಿಯಲ್ ಅನ್ನು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳಿಗೆ ಬಳಸಲಾಗುತ್ತದೆ.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday