ಜುಲೈ 26ಕ್ಕೆ ವಿದ್ಯುತ್ ಗುತ್ತಿಗೆದಾರರ ಸಂಘದ ಚುನಾವಣೆ
1 min readಜುಲೈ 26ಕ್ಕೆ ವಿದ್ಯುತ್ ಗುತ್ತಿಗೆದಾರರ ಸಂಘದ ಚುನಾವಣೆ
ಸತತ ಆರು ವರ್ಷಗಳ ನಂತರ ನಡೆಯುತ್ತಿರುವ ಚುನಾವಣೆ
ಬೈಲಾ ಉಲ್ಲಂಘಿಸಿ ಆಡಳಿತ ಮಂಡಳಿ ಮುಂದುವರಿಸಿದ ಆರೋಪ
ಕೆಇಬಿ ಸಮುದಾಯ ಭವನದಲ್ಲಿ ಜುಲೈ 26ಕ್ಕೆ ಚುನಾವಣೆ
ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘ ಶತಮಾನೋತ್ಸವ ಸಂಭ್ರಮದಲ್ಲಿದ್ದು, ಇಂತಹ ಸಂಘದಲ್ಲಿ ಹಲವರ ಕುತಂತ್ರಗಳoದ ಕಳೆದ ಆರು ವರ್ಷಗಳಿಂದ ಬೈಲಾ ಉಳ್ಲಂಘಿಸಿ ಆಡಳಿತ ಸಮಿತಿ ಮುಂದುವರಿಸುವ ಮೂಲಕ ಆಂತರಿಕ ಪ್ರಜಾಪ್ರಭುತ್ವ ಗಾಳಿಗೆ ತೂರಲಾಗಿತ್ತು ಎಂದು ಸಂಘದ ಅಧ್ಯಕ್ಷ ಅಭ್ಯರ್ಥಿ ಟಿ.ಎಸ್. ಬಾಬಾ ಅಸಮಾಧಾನ ಹೊರಹಾಕಿದರು.
ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಇತ್ತೀಚಿಗಷ್ಟೇ ಶತಮಾನೋತ್ಸವ ಆಚರಿಸಿದೆ. ಕಳೆದ ಆರು ವರ್ಷಗಳಿಂದ ಚುನಾವಣೆ ನಡೆಸದೆ ಹಳೇ ಆಡಳಿತ ಮಂಡಳಿಯನ್ನೇ ಮುಂದುವರಿಸುವ ಮೂಲಕ ಸಂಘದ ಯಾವುದೇ ಕಾರ್ಯಚಟುವಟಿಕೆಗಳು ನಡೆಯದಂತೆ ಈ ಹಿಂದಿನ ಆಡಳಿತ ಮಂಡಳಿಯ ಕೆಲವರು ಪ್ರಯ್ತನಿಸಿದ್ದು, ಸದಸ್ಯರ ಸತತ ಪ್ರಯತ್ನದ ಫಲವಾಗಿ ಪ್ರಸ್ತುತ ಚುನಾವಣೆ ಘೋಷಣೆಯಾಗಿದೆ ಎಂದು ಹೇಳಿದರು.
ಜುಲೈ ೨೬ರಂದು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಆದರೆ ಕೆಲವರು ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆ ಎಂದು ಘೋಷಣೆ ಮಾಡಿದ್ದರೂ ಅವರ ಹೆಸರನ್ನು ನಾಮಪತ್ರದಲ್ಲಿ ನಮೂದಿಸುವ ಮೂಲಕ ಹಲವರು ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಗೊಂದಲಗಳಿಗೆ ಸದಸ್ಯರು ಗಮನ ನೀಡದೆ ಅರಿತು ಉತ್ತಮ ಅಭ್ಯರ್ಥಿಯ ಆಯ್ಕೆ ಮಾಡಲು ಅವರು ಮನವಿ ಮಾಡಿದರು.
ಕಳೆದ ಆರು ವರ್ಷದಿಂದ ಅನಧಿಕೃತವಾಗಿ ಸಮಿತಿ ಮುಂದುವರಿಯಿತ್ತಿತ್ತು, ಸರ್ವ ಸದಸ್ಯರ ಸಭೆ ಕರೆಯದೆ ಅವರ ಇಷ್ಟಾನುಸಾರ ಸಮಿತಿ ಮಾಡಿದ್ದರು, ಚುನಾವಣಾಧಿಕಾರಿ ಆದೇಶ ಇದ್ದರೂ ಗೊಂದಲ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಲಿದೆ. ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ಒಟ್ಟು 17 ಪದಾಧಿಕಾರಿ ಸ್ಥಾನಗಳಿದ್ದು, ಇದರಲ್ಲಿ 16 ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆ ಮಾಡಲಾಗಿದೆ. ಪ್ರಸ್ತುತ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಲಿದೆ ಎಂದರು.
ಎಲ್ಲ ಸದಸ್ಯರ ಸದಸ್ಯರ ಸಹಮತದೊಂದಿಗೆ ತಾವು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಸ್ಪರ್ಧೆ ಮಾಡಿದ್ದು, ಎಲ್ಲ ಸದಸ್ಯರೂ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು. ಅಲ್ಲದೆ ಚುನಾವಣೆ ಎಲ್ಲಿ, ಯಾವಾಗ ಎಂಬ ಯಾವುದೇ ಮಾಹಿತಿ ನೀಡದೆ ಸದಸ್ಯರನ್ನು ಗೊಂದಲಕ್ಕೆ ಈಡು ಮಾಡುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ಎಲ್ಲ ಸದಸ್ಯರು ಕೆಇಬಿ ಸಮುದಾಯ ಭವನದಲ್ಲಿ ಜುಲೈ ೨೬ರಂದು ನಡೆಯಲಿರುವ ಚುನಾವಣೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.
ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಮಧುಚಂದ್ರ ಮಾತನಾಡಿ, ನೂರು ವರ್ಷ ಸೇವೆ ಸಲ್ಲಿಸಿದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ, ಕಳೆದ ಆರು ವರ್ಷದಿಂದ ಸಮಿತಿ ನಿಷ್ಕಿöçಯವಾಗಿತ್ತು. ಆರು ವರ್ಷದ ಹಿಂದೆ ಟಿ.ಎಸ್ ಬಾಬು ಅವರು ಅಧ್ಯಕ್ಷರಾಗಿದ್ದರು. ಆಗ ಬಾಬು ಅವರ ಅಧ್ಯಕ್ಷತೆಯಲ್ಲಿ ಹಲವು ಹೋರಾಟ ಮತ್ತು ಅಭಿವೃದ್ಧಿಗಳು ನಡೆದಿವೆ. ಆದರೆ ನಂತರದ ಮೂರು ವರ್ಷಗಳ ಕಾಲ ಬೈಲಾ ಉಲ್ಲಂಘಿಸಿ ನಡೆದ ಆಡಳಿತ ಸಮಿತಿ ಆಯ್ಕೆಯಿಂದಾಗಿ ಅಭಿವೃದ್ಧಿ ಕುಂಟಿತವಾಗಿದೆ ಎಂದರು.
ಪ್ರತಿ ವಿದ್ಯುತ್ ಗುತ್ತಿಗೆದಾರ ಕನಿಷ್ಠ ೧೦ ಮಂದಿಗೆ ಉದ್ಯೋಗ ನೀಡುತ್ತಾನೆ. ಅದರಲ್ಲೂ ತರಬೇತಿ ನಡೀಇ, ಅವರಿಗೆ ಕಲಸ ನೀಡಲಾಗುತ್ತದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ೨೫೦ ಮಂದಿ ಗುತ್ತಿಗೆದಾರರಿದ್ದಾರೆ. ಈ ಹಿಂದೆ ಬೈಲಾ ವಿರುದ್ಧ ಮೂರು ವರ್ಷ ಆಡಳಿತ ಮುಂದುವರಿಸಿದ್ದಾರೆ, ಆಗ ಹಲವಾರು ಸಮಸ್ಯೆಗಳು ಗುತ್ತಿಗೆದಾರರಿಗೆ ಎದುರಾಗಿವೆ, ಆದರೆ ಈಗ ಚುನಾವಣೆ ಘೋಷಣೆ ಮಾಡಲಾಗಿದೆ, ಜುಲೈ ೨೬ ರಂದು ಕೆಇಬಿ ಸಮುದಾಯ ಭವನದಲ್ಲಿ ಚುನಾವಣೆ ನಡೆಯಲಿದ್ದು, 17 ಮಂದಿ ಪದಾಧಿಕಾರಿಗಳಲ್ಲಿ ೧೬ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಅಧ್ಯಕ್ಷ ಸ್ಥಾನಕ್ಕೆ ಮತ್ರಾ ಚುನಾವಣೆ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿಜಯ್ ಕುಮಾರ್ ನಾಯ್ಡು, ಮಂಡಿಕಲ್ ಶ್ರೀನಿವಾಸ್, ನಾಗರಾಜ್, ವೆಂಕಟೇಶ್, ಅಯೂಬ್, ಮುನಿರಾಜು, ಶ್ರೀನಾಥ್, ಬಸವರಾಜು ಸೇರಿದಂತೆ ಇತರರು ಇದ್ದರು.