ಅಪಾಯ ಆಹ್ವಾನಿಸುತ್ತಿರುವ ಪುರಸಭೆ ಕೊಳವೆ ಬಾವಿ ಸ್ಟಾಟರ್ ಪೆಟ್ಟಿಗೆ
1 min readಅಪಾಯ ಆಹ್ವಾನಿಸುತ್ತಿರುವ ಪುರಸಭೆ ಕೊಳವೆ ಬಾವಿ ಸ್ಟಾಟರ್ ಪೆಟ್ಟಿಗೆ
ಯಾವುದೇ ಸಮಯದಲ್ಲಿ ಅಪಾಯ ಎದುರಾಗುವ ಆತಂಕ
ಬಾಗೇಪಲ್ಲಿ ಪಟ್ಟಣದಲ್ಲಿ ವಾರ್ಡ್ಗಳ ಜನತೆಗೆ ನೀರಿನ ಸೌಲಭ್ಯಕ್ಕಾಗಿ ಕೊಳವೆ ಬಾವಿಗಳನ್ನು ಪುರಸಭೆಯಿಂದ ಕೊರಿಸಲಾಗಿದೆ. ಆ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಿ, ಸ್ಟಾಟರರ್ ಪೆಟ್ಟಿಗೆಗಳನ್ನು ಅವುಗಳ ಸಮೀಪದಲ್ಲೆ ಅಳವಡಿಸಲಾಗಿದೆ. ವಿದ್ಯುತ್ ಎಂದರೇ ಅಪಾಯಕಾರಿ. ಇಂತಹ ಅಪಾಯಕಾರಿ ವಿದ್ಯುತ್ ಉಪಕರಣಗಳ ಬಳಕೆ ಎಚ್ಚರದಿಂದ ಉಪಯೋಗಿಸಬೇಕಾಗುತ್ತದೆ. ಇಲ್ಲವಾದರೆ ಅಪಾಯ ಕಟ್ಟಿಟ್ಟಬುತ್ತಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಬಾಗೇಪಲ್ಲಿ ಪಟ್ಟಣದಲ್ಲಿ ವಾರ್ಡ್ಗಳ ಜನತೆಗೆ ನೀರಿನ ಸೌಲಭ್ಯಕ್ಕಾಗಿ ಕೊಳವೆ ಬಾವಿಗಳನ್ನು ಪುರಸಭೆಯಿಂದ ಕೊರಿಸಲಾಗಿದೆ. ಆ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಿ, ಸ್ಟಾಟರರ್ ಪೆಟ್ಟಿಗೆಗಳನ್ನು ಅವುಗಳ ಸಮೀಪದಲ್ಲೆ ಅಳವಡಿಸಲಾಗಿದೆ. ವಿದ್ಯುತ್ ಎಂದರೇ ಅಪಾಯಕಾರಿ. ಇಂತಹ ಅಪಾಯಕಾರಿ ವಿದ್ಯುತ್ ಉಪಕರಣಗಳ ಬಳಕೆ ಎಚ್ಚರದಿಂದ ಉಪಯೋಗಿಸಬೇಕಾಗುತ್ತದೆ. ಇಲ್ಲವಾದರೆ ಅಪಾಯ ಕಟ್ಟಿಟ್ಟಬುತ್ತಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಪುರಸಭೆ ಸಿಬ್ಬಂದಿಗೆ ವಿದ್ಯುತ್ ಸಂಪರ್ಕವಿರುವ ಪಂಪ್ ಸ್ಟಾಟರರ್ ಪೆಟ್ಟಿಗೆಗಳಿಂದ ಉಂಟಾಗುವ ಅಪಾಯದ ಪರಿವೇ ಇಲ್ಲದಂತಾಗಿದೆ.
ಹಲವು ವಾರ್ಡ್ ಗಳಲ್ಲಿ ಕೊಳವೆ ಬಾವಿಗಳ ಸ್ಟಾಟರರ್ ಪೆಟ್ಟಿಗೆಗಳನ್ನು ನೆಲದ ಅಳವಡಿಸಲಾಗಿದೆ. 9,14,22 ಮತ್ತು 19ನೇ ವಾರ್ಡುಗಳು ಸೇರಿ ಹಲವು ವಾರ್ಡುಗಳಲ್ಲಿ ಕೊಳವೆ ಬಾವಿಗಳಿಗೆ ಸಂಪರ್ಕಿಸಿರುವ ಸ್ಟಾಟರರ್ ಪೆಟ್ಟಿಗಳ ನಿರ್ವಹಣೆಯೇ ಇಲ್ಲದಂತಾಗಿದೆ. ಕೇವಲ ಸ್ವಿಚ್ ಆನ್ ಮತ್ತು ಆಫ್ ಮಾಡಲೆಂದೆ ಬಳಸುತ್ತಿದ್ದು, ಅವುಗಳು ಹಾಳಾದರು, ಅವುಗಳಿಂದ ಅನಾಹುತಗಳು ಸಂಭವಿಸಿದರೂ ತಮಗೆ ಸಂಬoಭವಿಲ್ಲದoತೆ ಪುರಸಭೆ ಸಿಬ್ಬಂದಿ ನಿರ್ಲಕ್ಷಿಸಿದ್ದಾರೆ.
ಪುರಸಭೆ ಸಿಬ್ಬಂದಿಯ ನಿರ್ಲಕ್ಷದಿಂದ ವಿದ್ಯುತ್ ಉಪಕರಣಗಳು ರಸ್ತೆ ಬದಿಯ ನೆಲದಲ್ಲೆ ಇರುವುದರಿಂದಾಗಿ ಆಟವಾಡುವ ಮಕ್ಕಳು, ಮೇವಾಡುವ ಪ್ರಾಣಿಗಳಿಗೆ ಕುತ್ತು ತರುವ ಸಂಭವ ಹೆಚ್ಚಾಗಿದೆ. ಅದರಲ್ಲೂ ಕೆಲವು ಸ್ಟಾಟರ್ ಪೆಟ್ಟಿಗೆಗಳಿರುವ ಜಾಗದಲ್ಲೆ ಅಲ್ಲಿನ ನಿವಾಸಿಗಳು ಕಸದ ರಾಶಿ ಸುರಿಯುವ ಅಡ್ಡವನ್ನಾಗಿಸಿಕೊಂಡಿದ್ದು, ಕಸ ಎಸೆಯುವಾಗ ವಿದ್ಯುತ್ ಗ್ರೌಂಡಿoಗ್ ಅಥವಾ ಕಸ ವಿಲೇವಾರಿ ಮಾಡುವ ಪೌರಕಾರ್ಮಿಕರಿಗೆ ತೊಂದರೆಯಾದರೆ ಹೊಣೆ ಯಾರು? ಎಂಬ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿದೆ.
ಮಳೆಗಾಲ ಆರಂಭವಾಗಿದ್ದು, ವಿದ್ಯುತ್ ಉಪಕರಣಗಳೊಂದಿಗೆ ಎಚ್ಚರದಿಂದಿ ಇರಬೇಕಾಗಿದೆ. ಹಾಗಾಗಿ ನಿತ್ಯವೂ ಕೊಳವೆ ಬಾವಿಯ ಪಂಪ್‌ನ್ನು ಚಾಲು ಮಾಡುವ ಜಲಗಾರರು ತೇವಭರಿತ ನೆಲದಲ್ಲಿಟ್ಟಿರುವ ಸ್ಟಾಟರ್ ಪೆಟ್ಟಿಗೆಯನ್ನು ಮುಟ್ಟುವಾಗ ವಿದ್ಯುತ್ ಅವಘಡದ ಆತಂಕದ ಕೆಲಸ ಮಾಡಬೇಕಿದೆ. ಇನ್ನು ಕೆಲ ಸ್ಟಾರ್ಟ್ ಪೆಟ್ಟಿಗೆಗಳಿರುವ ಕಡೆ ದೊಡ್ಡ ಪೊದೆಗಳು ಅರಳುತ್ತಿದ್ದು, ವಿದ್ಯುತ್ ಅವಘಡಗಳನ್ನು ಸೃಷ್ಟಿಸುವಂತಿವೆ.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ, ಕೆ.ಎನ್ ಹರೀಶ್, ಮಾತನಾಡಿ, ಅವಘಡಗಳು ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳುವುದು ಮುಖ್ಯ. ಹಾಗಾಗಿ ಸ್ಟಾಟರ್ ಪೆಟ್ಟಿಗೆಗಳನ್ನು ಮಕ್ಕಳ, ಪ್ರಾಣಿಗಳ ಸಂಪರ್ಕಕ್ಕೆ ಸಿಗದಂತೆ ಅಳವಡಿಸಬೇಕು.
ಜಲಗಾರನು ನಿತ್ಯವೂ ತಮ್ಮ ವಾರ್ಡಿನ ಜನತೆಗೆ ನೀರಿನ ಸರಬರಾಜು ಮಾಡಲು ಕೊಳವೆಬಾವಿಗಳನ್ನು ಚಾಲು ಮಾಡಬೇಕಿದೆ. ಈ ವೇಳೆ ವಿದ್ಯುತ್ ಅವಘಡಗಳು ಸಂಭವಿಸಿದರೆ ಅವರ ಕುಟುಂಬಸ್ಥರಿಗೆ ನೆರವಿಗೆ ನಿಲ್ಲುವವರು ಯಾರು ಎಂಬ ಪ್ರಶ್ನೆಗೆ ಉಥ್ತರಿಸುವವರೇ ಇಲ್ಲವಾಗಿದ್ದಾರೆ.
ಹಾಗಾಗಿ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ವಿದ್ಯುತ್ ಸ್ಟಾಟರ್ ಪೆಟ್ಟಿಗೆಗಳ ನಿರ್ವಹಣೆ ಸಮರ್ಪಕ ರೀತಿಯಲ್ಲಿ ಮಾಡಬೇಕು ಸಂಬAಧಪಟ್ಟ ಅಧಿಕಾರಿಗಳು ಗಮನಹರಿಸಿ ಪ್ಯಾನೆಲ್ ಬೋರ್ಡ್ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕರವೇ ತಾಲೂಕು ಖಜಾಂಚಿ ನಾರಾಯಣಸ್ವಾಮಿ, ಕಾರ್ಮಿಕ ಘಟಕದ ಅಧ್ಯಕ್ಷ ಕೃಷ್ಣಪ್ಪ, ಕರವೇ ವಿದ್ಯಾರ್ಥಿ ಘಟಕ ಸಚಿನ್ ಇದ್ದರು.