ಶಾಲಾ ಮಕ್ಕಳಿಗೆ ಬ್ಯಾಗ್ ಸೇರಿ ಲೇಖನ ಸಾಮಗ್ರಿ ವಿತರಣೆ
1 min readಶಾಲಾ ಮಕ್ಕಳಿಗೆ ಬ್ಯಾಗ್ ಸೇರಿ ಲೇಖನ ಸಾಮಗ್ರಿ ವಿತರಣೆ
ಬ್ಯಾಂಕ್ ಆಫ್ ಬರೋಡ 117ನೇ ಸ್ಥಾಪನಾ ದಿನಾಚರಣೆ
ಶಾಲಾ ಮಕ್ಕಳಿಗೆ ಬ್ಯಾಗ್, ಪುಸ್ತಕ, ಪೆನ್ ವಿತರಣೆ
ಬ್ಯಾಂಕ್ ಆಫ್ ಬರೋಡ ಸಂಸ್ಥೆಯ 117ನೇ ಸ್ಥಾಪನಾ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಬ್ಯಾಗ್ ಪುಸ್ತಕ ಹಾಗೂ ಪೆನ್ನು ಸೇರಿ ಲೇಖನಿ ಸಾಮಗ್ರಿಗಳನ್ನು ವಿತರಣೆ ಮಾಡಿರುವುದಾಗಿ ದೊಡ್ಡಬಳ್ಳಾಪುರ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕ ವಿನೋದ್ ಕುಮಾರ್ ತಿಳಿಸಿದರು.
ಬ್ಯಾಂಕ್ ಆಫ್ ಬರೋಡ ಸಂಸ್ಥೆಯ 117ನೇ ಸ್ಥಾಪನಾ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಬ್ಯಾಗ್ ಪುಸ್ತಕ ಹಾಗೂ ಪೆನ್ನು ಸೇರಿ ಲೇಖನಿ ಸಾಮಗ್ರಿಗಳನ್ನು ವಿತರಣೆ ಮಾಡಿರುವುದಾಗಿ ದೊಡ್ಡಬಳ್ಳಾಪುರ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕ ವಿನೋದ್ ಕುಮಾರ್ ತಿಳಿಸಿದರು. 1,576ನೇ ದಿನದ ನಿರಂತರ ಅನ್ನದಾಸೋಹದಲ್ಲಿ ಮಾತನಾಡಿದ ಅವರು, ಅನ್ನದಾಸೋಹಿ ಸತತವಾಗಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದು, ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಶ್ಯಕತೆ ಇರುವ ಸಾಮಗ್ರಿಗಳನ್ನು ನೀಡುವಂತೆ ಮನವಿ ಮಾಡಿದ್ದರು ಎಂದರು.
ಈ ಸಂಬoಧ ಬ್ಯಾಂಕ್ ಆಫ್ ಬರೋಡ ಸಂಸ್ಥಾಪನಾ ದಿನವಾದ ಇಂದು ಸರ್ಕಾರಿ ಶಾಲಾ ಮಕ್ಕಳಿಗೆ ಅವಶ್ಯಕತೆ ಇರುವ ಶಾಲಾ ಬ್ಯಾಗ್, ಪುಸ್ತಕ, ಹಾಗೂ ಪೆನ್ನುಗಳ ವಿತರಣೆ ಮಾಡಲಾಗಿದೆ ಎಂದರು. ಮುಂದೆ ನಮ್ಮ ಬ್ಯಾಂಕ್‌ನಿoದ ಮತ್ತಷ್ಟು ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.