ಚಿಕ್ಕಬಳ್ಳಾಪುರದತ್ತ ಹರಿದು ಬರುತ್ತಿರುವ ಸಾವಿರಾರು ಪ್ರವಾಸಿಗರು
1 min readಕರಾವಳಿಯಲ್ಲಿ ಮಳೆಯಿಂದ ಪ್ರವಾಸಿತಾಣಗಳಿಗೆ ನಿರ್ಧಂದ
ಚಿಕ್ಕಬಳ್ಳಾಪುರದತ್ತ ಹರಿದು ಬರುತ್ತಿರುವ ಸಾವಿರಾರು ಪ್ರವಾಸಿಗರು
ಬಿಎಂಟಿಸಿ 550 ಪ್ಯಾಕೇಜ್‌ಗೆ ಈಶಾ ಪೌಂಢೇಶನ್ ಸೇರಿ ಚಿಕ್ಕಬಳ್ಳಾಪುರ ರೌಂಡ್ಸ್
ಬಿಎoಟಿಸಿ 550 ಪ್ಯಾಕೇಜ್‌ಗೆ ಫುಲ್ ಪಿಧಾ ಆದ ಪ್ರವಾಸಿಗರು
ಇಂದು ಚಿಕ್ಕಬಳ್ಳಾಪುರದ ಹೋಟೆಲ್ ರೆಸ್ಟೋರೆಂಟ್ ಹೌಸ್ ಫುಲ್
ಕರುನಾಡಲ್ಲಿ ಮುಂಗಾರು ಅಬ್ಬರಿಸುತಿದೆ, ಕರಾವಳಿಯಲ್ಲಂತೂ ನದಿ ಜಲಪಾತ ಸಮುದ್ರ ಬೋರ್ಗರೆಯುತ್ತಿವೆ, ಕರಾವಳಿಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಹುಚ್ಚಾಟ ತಾರಕಕ್ಕೇರಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹಲವು ಪ್ರವಾಸಿ ತಾಣಗಳಿಗೆ ನಿರ್ಧಂದ ಹೇರಲಾಗಿದೆ. ಇದರಿಂದ ಬೆಂಗಳೂರಿಗೆ ಸಮೀಪ ಇರೋ ಪ್ರವಾಸಿ ತಾಣಗಳತ್ತ ಪ್ರವಾಸಿಗರು ಮುಖ ಮಾಡಿದ್ದು, ಪ್ರವಾಸಿ ತಾಣಗಳು ಜನರಿಂದ ಹೌಸ್ ಫುಲ್ ಆಗಿವೆ. ಈ ಸ್ಟೋರಿ ಏನು ಅಂತೀರಾ, ನೀವೇ ನೋಡಿ
ಹೀಗೆ ಮುಸ್ಸಂಜೆ ವೇಳೆ ಕಿಲೋ ಮೀಟರ್ ಗಟ್ಟಲೇ ಸಾಲುಗಟ್ಟಿ ನಿಂತ ವಾಹನಗಳು, ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ಹೆಣಗಾಡುತ್ತಿರುವ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಹಾಗು ಪೊಲೀಸರು, ಮೊತ್ತೊಂದು ತೇಲಾಡುವ ಮಂಜಿನ ಮೋಡಗಳೊಂದಿಗೆ ಸ್ಟೆಪ್ ಹಾಕುತ್ತಿರುವ ಪ್ರಕೃತಿ ಪ್ರಿಯರು, ತಂಪಾದ ವಾತಾವರಣ ಆಸ್ವಾಧಿಸುತ್ತಾ ಕೈ ಕೈ ಹಿಡಿದು ಮೆಲ್ಲನೆ ಹೆಜ್ಜೆ ಹಾಕುತ್ತಿರುವ ಪ್ರೇಮ ಪಕ್ಷಿಗಳು.
ಇದು ಒಂದು ಭಾಗವಾದರೆ ಬಿಎಂಟಿಸಿ ಎಸಿ ಬಸ್ ನಲ್ಲಿ ಜಾಲಿಯಾಗಿ ಪ್ರವಾಸಿತಾಣಗಳಿಗೆ ರೌಂಡ್ಸ್ ಹೊಡೆಯುತ್ತಿರುವ ಪ್ರವಾಸಿಗರು ಮತ್ತೊಂದು ಕಡೆ. ಈ ದೃಶ್ಯಗಳು ಕಂಡುಬoದಿದ್ದು ರಾಜಧಾನಿಗೆ ಸಮೀಪ ಇರೋ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ. ಕರ್ನಾಟಕಲ್ಲಿ ಮುಂಗಾರು ಅಬ್ಬರಿಸುತಿದ್ದು, ನದಿ ಜಲಪಾತ ಸಮುದ್ರ ಉಕ್ಕಿ ಹರಿಯುತಿವೆ. ಹರಿಯುವ ನೀರಿನಲ್ಲಿ ಪ್ರವಾಸಿಗರ ಹುಚ್ಚಾಟ ಹೆಚ್ಚಾಗಿದ್ದು ಉತ್ತರಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಉಡುಪಿ ಹಲವು ಪ್ರವಾಸಿ ತಾಣಗಳಿಗೆ ನಿರ್ಧಂದ ಹೇರಲಾಗಿದೆ.
ಇದರಿಂದ ಬೆಂಗಳೂರಿಗೆ ಸಮೀಪ ಇರೋ ಚಿಕ್ಕಬಳ್ಳಾಪುರ ತಾಲ್ಲೂಕಿನ ವಿಶ್ವವಿಖ್ಯಾತ ನಂದಿ ಗರಿಧಾಮದ ಕಡೆ ಪ್ರಾವಾಸಿಗರ ದಂಡೇ ಹರಿದು ಬಂದಿದ್ದು, ಬೆಟ್ಟದಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡುವಂತಾಗಿತ್ತು, ಹೇಗೋ ಕಷ್ಟಪಟ್ಟು ಬೆಟ್ಟದ ಮೇಲೆ ಹೋದ ಪ್ರವಾಸಿಗರಿಗೆ ನಂದಿ ಸ್ವರ್ಗದ ಬಾಗಿಲು ತೆರದಿತ್ತು
ಈಶಾ ಪೌಂಢೇಶನ್ ಅಂತೇಳಿ ಕಾರು ಬೈಕ್ ನಲ್ಲಿ ಬಂದು ಟ್ರಾಫಿಕ್, ಟೋಲ್, ಪಾರ್ಕಿಂಗ್ ಅಂತ ಸಾವಿರಾರು ರುಪಾಯಿ ಖರ್ಚು ಮಾಡೊ ಪ್ರವಾಸಿಗರಿಗೆ ಬಿಎಂಟಿಸಿ ಬಂಪರ್ ನೀಡಿದೆ. ಬಿಎಂಟಿಸಿ 550 ಪ್ಯಾಕೇಜ್‌ನಲ್ಲಿ ಈಶಾ ಪೌಂಡೇಶನ್ ಸೇರಿದಂತೆ ಚಿಕ್ಕಬಳ್ಳಾಪುರ ರೌಂಡ್ಸ್ ಹೊಡೆಯುವ ಅವಕಾಶ ಕಲ್ಪಿಸಿದೆ. ಬಿಎಂಟಿಸಿ ೫೫೦ ರೂಪಾಯಿ ಪ್ಯಾಕೇಜ್‌ಗೆ ಪ್ರವಾಸಿಗರು ಫುಲ್ ಪಿಧಾ ಆಗಿದ್ದು, ಎಸಿ ಓಲ್ವಾ ಬಸ್ ನಲ್ಲಿ ಕುಳಿತು ಚಿಕ್ಕಬಳ್ಳಾಪುರ ತಾಲ್ಲೂಕಿನ ವಿಶ್ವವಿಖ್ಯಾತ ಭೋಗನಂದೀಶ್ವರ ದೇವಸ್ಥಾನ, ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಮ್ಯೂಸಿಯಂ, ತಿಪ್ಪನೇಹಳ್ಳಿ ಬಳಿ ಇರುವ ರಂಗಸ್ಥಳ ದೇವಸ್ಥಾನ ದರ್ಶನ ಮಾಡಿದ ಬಳಿಕ ರಸ್ತೆಯ ಅಕ್ಕಪಕ್ಕದ ಹೂ ತೋಟಗಲ್ಲಿ ಸೆಲ್ಪಿ ತೆಗೆಸಿಕೊಂಡು ಎಂಜಾಯ್ ಮಾಡ್ತಿದ್ದಾರೆ.
ಸಂಜೆ ಈಶಾ ಪೌಂಡೇಶನ್ ಲೇಸರ್ ಶೋ ಮಾಡಿದ ಬಳಿಕ ರಾತ್ರಿ 9 ಗಂಟೆಗೆ ಸೇಪ್ ಆಗಿ ಮನೆ ಸೇರಿಕೊಳ್ತಿದ್ದಾರೆ. ಸದ್ಯ ವೀಕೆಂಡ್‌ನಲ್ಲಿ ಚಿಕ್ಕಬಳ್ಳಾಪುರ ಪ್ರವಾಸಿಗರ ಹಾಟ್ ಆಗಿದೆ. ಜನರಿಲ್ಲದೆ ಖಾಲಿ ಖಾಲಿಯಾಗಿದ್ದ ಹಲವು ಪ್ರವಾಸಿ ತಾಣಗಳಿಗೆ ಮರುಜೀವ ಬಂದಿದ್ದು, ಗತ ವೈಭವ ತಳೆದಿವೆ. ಇದರಿಂದ ತಾಲ್ಲೂಕಿನ ಅಂಗಡಿ ಹೋಟೆಲ್ ರೆಸ್ಟೋರೆಂಟ್ ಹೋಮ್ ಸ್ಟೇಗಳು ಹೌಸ್ ಫುಲ್ ಆಗಿದ್ದು ಭರ್ಜರಿ ವ್ಯಾಪಾರದಿಂದ ಇತ್ತ ಪ್ರವಾಸಿಗರು ಖಷ್ ಅತ್ತ ವ್ಯಾಪಾರಸ್ಥರು ಫುಲ್ ಖಷ್ ಆಗಿದ್ದಾರೆ.