ಅಜ್ಜವಾರ ಗ್ರಾಮ ಪಂಚಾಯತಿ ಬಿಜೆಪಿ ತೆಕ್ಕೆಗೆ
1 min readಅಜ್ಜವಾರ ಗ್ರಾಮ ಪಂಚಾಯತಿ ಬಿಜೆಪಿ ತೆಕ್ಕೆಗೆ
ಅಧ್ಯಕ್ಷರಾಗಿ ಶಿವಪ್ಪ, ಉಪಾಧ್ಯಕ್ಷರಾಗಿ ಮಂಜುನಾಥ್
ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮ ಪಂಚಾಯತಿ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಇಂದು ನಡೆದಿದ್ದು, ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಅವಿರೋಧವಾಗಿ ಅಯ್ಕೆಯಾಗಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮ ಪಂಚಾಯತಿ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಇಂದು ನಡೆದಿದ್ದು, ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಅಜ್ಜವಾರ ಗ್ರಾಮ ಪಂಚಾಯತಿ ಎರಡನೇ ಅವಧಿಯ ಅದ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅದ್ಯಕ್ಷರಾಗಿ ನಾಯನಹಳ್ಳಿ ಗ್ರಾಮದ ಶಿವಪ್ಪ, ಉಪಾಧ್ಯಕ್ಷರಾಗಿ ನುಗಿತಹಳ್ಳಿ ಗ್ರಾಮದ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಬಂದಿದ್ದ ತಹಶಿಲ್ದಾರ್ ಅನಿಲ್ ಅವರು ಇವರಿಬ್ಬರ ಆಯ್ಕೆ ಘೋಷಣೆ ಮಾಡಿದ್ದು, ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಇದರಲ್ಲಿ ಶಿವಪ್ಪ ಮತ್ತು ಮಂಜುನಾಥ್ ಇಬ್ಬರು ಮಾತ್ರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಅಯ್ಕೆ ಮಾಡಲಾಗಿದೆ ಎಂದರು.
ಅಜ್ಜವಾರ ಗ್ರಾಮ ಪಂಚಾಯತಿಗೆ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತರು ನೂತನ ಅದ್ಯಕ್ಷರಾಗಿ ನಾಯನಹಳ್ಳಿ ಗ್ರಾಮದ ಶಿವಪ್ಪ, ಉಪಾಧ್ಯಕ್ಷರಾಗಿ ನುಗಿತಹಳ್ಳಿ ಗ್ರಾಮದ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಅಭಿಮಾನಿಗಳು ಗೆದ್ದ ಅಭ್ಯರ್ಥಿಗಳಿಗೆ ಹೂಮಾಲೆಗಳು ಹಾಕಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಸಿದ್ದಾರೆ.