ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭಾರೀ ಭಷ್ಟಾಚಾರ
1 min readಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭಾರೀ ಭಷ್ಟಾಚಾರ
ಬಡ ಮಕ್ಕಳಿಗೆ ಸೇರಬೇಕಾಗಿದ್ದ ಅನ್ನ ಲೂಟಿ ಮಾಡಿದ ದಂಧೆ ಕೋರರು
ಇದು ಬಡ ಮಕ್ಕಳಿಗೆ ನೀಡಬೇಕಿದ್ದ ಅನ್ನ ಕಸಿದ ದುರುಳರ ಕತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಡೆದಿರುವ ಭಾರೀ ಭ್ರಷ್ಟಾಚಾರದ ಸ್ಟೋರಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೋಡಲೇಬೇಕಾದ ಸುದ್ದಿ. ಇಷ್ಟಕ್ಕೂ ಏನು ಆ ಸುದ್ದಿ ಅಂತೀರಾ, ನೀವೇ ನೋಡಿ.
ಅಂಗನವಾಡಿ ಮಕ್ಕಳಿಗೆ ಸೇರಬೇಕಾದ ನೂರಾರು ಮೂಟೆ ಪಡಿತರ ಅಕ್ರಮ ದಾಸ್ತಾನು ಮಾಡಲಾಗಿದೆ. ಕಾಳ ಸಂತೆಯಲ್ಲಿ ಮಾರಾಟ ಮಾಡಲು ಲಕ್ಷಾಂತರ ರೂಪಾಯಿ ಮೌಲ್ಯದ ಪಡಿತರ ದಾಸ್ತಾನು ಮಾಡಲಾಗಿದ್ದು, ಸಮಾಜದ ಕಾಳಜಿ ಉಳ್ಳವರ ಖಚಿತ ಮಾಹಿತಿಯಂದ ಇದೀಗ ಪ್ರಕರಣ ಬಯಲಾಗಿದೆ. ಅಕ್ಕಿ, ಬೇಳೆ, ಎಣ್ಣೆ, ಸಾಂಬಾರು ಪದಾರ್ಥ, ಮಸಾಲೆ, ಉಪ್ಪು ಸೇರಿದಂತೆ ಲಕ್ಷಾಂತರ ರೂಪಾಯಿ ಪಡಿತರ ಅಕ್ರಮವಾಗಿ ದಾಸ್ತಾನು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬಾಗೇಪಲ್ಲಿ ತಾಲ್ಲೂಕಿನ ಪೂಲವಾರಪಲ್ಲಿ ಗ್ರಾಮದ ಖಾಸಗಿ ಮನೆಯೊಂದರಲ್ಲಿ ಪಡಿತರ ಪದಾರ್ಥಗಳು ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದು, ಪೂಲವಾರಪಲ್ಲಿ ಗ್ರಾಮದ ನಿವಾಸಿ ನಾಗರಾಜು ಎಂಬುವರ ಮನೆಯಲ್ಲಿ ಈ ಅಕ್ರಮ ದಾಸ್ತಾನು ಪತ್ತೆಯಾಗಿದೆ. ಗೋಡೌನ್ ಬಾಗಿಲು ತೆಗೆಯದೆ ದಂಧೆ ಕೋರರು ಸತಾಯಿಸಿದ್ದು, ಗೋಡೌನ್‌ನಲ್ಲಿ ನೂರಾರು ಮೂಟೆ ಪಡಿತರ ದಾಸ್ತಾನು ಮಾಡಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಜಿಪಂ ಸಿಇಒ ತಾಪಂ ಇಒ ಮಹಿಳಾ ಮತ್ತು ಮಕ್ಕಳ ಕಲ್ಯಾಧಿಕಾರಿಗಳು ದೌಡಾಯಿಸಿದ್ದಾರೆ.