ಜಿಲ್ಲೆಯ ಎಲ್ಲ ಶಾಸಕರ ಮುಖವಾಡದೊಂದಿಗೆ ಪ್ರತಿಭಟನೆ
1 min readಜಿಲ್ಲೆಯ ಎಲ್ಲ ಶಾಸಕರ ಮುಖವಾಡದೊಂದಿಗೆ ಪ್ರತಿಭಟನೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಶಾಸಕರ ವಿರುದ್ಧ ಹೋರಾಟ
ಮಗ್ಗಲು ಬದಲಿಸಿದ ಶಾಶ್ವತ ನೀರಾವರಿ ಹೋರಾಟ
ಸತತ ನಾಲ್ಕು ದಶಕಗಳಿಂದ ಎಲ್ಲ ರೀತಿಯ ಹೋರಾಟ ಮಾಡಿ ಹೈರಾಣಾಗಿರುವ ಶಾಶ್ವತ ನೀರಾವರಿ ಹೋರಾಟ ಸಮಿತಿ ಇದೀಗ ಮಗ್ಗಲು ಬದಲಿಸಿದೆ. ನೀರಾವರಿ ಸಮಸ್ಯೆಗಳಿಗೆ ಬಾರದೆ, ಸದನದ ಒಳಗೆ ಮತ್ತು ಹೊರಗೆ ನೀರಾವರಿಯ ಬಗ್ಗೆ ಚಕಾರವೆತ್ತದೆ ಮೌನಕ್ಕೆ ಶರಣಾಗಿರುವ ಶಾಸಕರ ಕ್ರಮದ ವಿರುದ್ಧ ಇಂದು ನೀರಾವರಿ ಹೋರಾಟಗಾರರು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಮುಂದೆ ವಿನೂತನ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಬೆoಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ಕ್ಷೇತ್ರಗಳ ಶಾಸಕರ ಮುಖವಾಡಗಳೊಂದಿಗೆ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ನೀರಾವರಿ ಹೋರಾಟಗಾರರು, ಇಂತಹ ಶಾಸಕರಿಗೆ ಮತ ನೀಡಿದ ಪಾಪಕ್ಕೆ ಇಂದು ಜನರನ್ನು ಬಾದಿಗೆ ತಂದಿದ್ದಾರೆ. ಇವರ ಹೀಗೆ ಮುಂದುವರಿದರೆ ಹೋರಾಟ ತೀವ್ರವಾಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಲಾಯಿತು.
ಬಯಲು ಸೀಮೆಯ ಜಿ¯್ಲೆಗಳ ನೀರಾವರಿ ವಿಚಾರವಾಗಿ ಈ ಜಿಲ್ಲೆಗಳ ಶಾಸಕರು ಸದನದಲ್ಲಿ ಧ್ವನಿ ಎತ್ತದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಶಾಶ್ವತ ನೀರಾವರಿ ಹೋರಾಟಗಾರರು ನೀರಾವರಿ ಹಕ್ಕೊತ್ತಾಯಕ್ಕೆ ಆಗ್ರಹಿಸಿ ನಡೆಸಿದ ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ಮಾತನಾಡಿ, ಕೆ.ಸಿ.ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ಯೋಜನೆಯ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಿ ಕೆರೆಗಳಿಗೆ ಹರಿಸಬೇಕು. ಕೃಷ್ಣಾ ಪೆನ್ನಾರ್ ನದಿ ನೀರು ಹರಿಸಿ ಈ ಜಿಲ್ಲೆಗಳ ನೀರಿನ ಬವಣೆ ನೀಗಿಸಬೇಕು. ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ ಎಂದು ಶಾಸಕರನ್ನು ನಿರಂತರವಾಗಿ ಆಗ್ರಹಿಸುತ್ತಿದ್ದೇವೆ. ಎರಡು ದುಂಡು ಮೇಜಿನ ಸಭೆ ನಡೆಸಿದ್ದೇವೆ. ಆದರೆ ಈ ಸಭೆಗೆ ಆಹ್ವಾನ ನೀಡಿದ್ದರೂ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಅವರನ್ನು ಹೊರತುಪಡಿಸಿ ಉಳಿದ ಯಾವ ಶಾಸಕರು ಭಾಗಿ ಆಗಲಿಲ್ಲ ಎಂದರು.
ಸರ್ಕಾರ ಬಯಲುಸೀಮೆ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವ ಬದ್ಧತೆ ತೋರದಿರುವುದರಿಂದ ಹಲವು ದಶಕಗಳ ಬೇಡಿಕೆ ಈವರೆಗೆ ಈಡೇರಿಲ್ಲ. ಇನ್ನಾದರೂ ಜನಪ್ರತಿನಿಧಿಗಳು ಯಿಂದ ಎಚ್ಚೆತ್ತು ಪಕ್ಷಬೇಧ ಮರೆತು ಅಧಿವೇಶನಗಳಲ್ಲಿ ಈ ಭಾಗದ ನೀರಿನ ಬವಣೆಯನ್ನು ಸರಕಾರಕ್ಕೆ ಮನದಟ್ಟು ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ತಲೆಮಾರು ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪಕ್ಷ, ಅಧಿಕಾರ ರಾಜಕಾರಣ ಇವೆಲ್ಲದರ ಜತೆಗೆ ಜನ ಜಾನುವಾರುಗಳು, ಕೃಷಿ, ಕುಡಿಯುವ ನೀರು ಈ ಬಗ್ಗೆಯೂ ನಿಮ್ಮ ಚಿಂತನೆಯಿರಲಿ. ಶಾಶ್ವತ ನೀರಿನ ವಿಚಾರವನ್ನು ಸದನದಲ್ಲಿ ಮಂಡಿಸಿ ಚರ್ಚಿಸಿ ನ್ಯಾಯಕೊಡಿಸುವ ನಿಟ್ಟಿನಲ್ಲಿ ನಿಮ್ಮ ಪಾತ್ರ ಮಹತ್ತರವಾಗಿದೆ ಎಂದು ಆಗ್ರಹಿಸಿದರು. ಶಾಶ್ವತ ನೀರಾವರಿ ಯೋಜನೆಯ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಚುನಾವಣೆ ಸಂದರ್ಭಗಳಲ್ಲಿ ನೀರಾವರಿ ಯೋಜನೆಗಳ ಜಾರಿ ಕುರಿತು ಭರವಸೆ ನೀಡುವ ಜನಪ್ರತಿನಿಧಿಗಳು ಗೆದ್ದ ಬಳಿಕ ಜನಜಾನುವಾರುಗಳ ಆರೋಗ್ಯ, ಆದಾಯ ಹಾಗೂ ಭವಿಷ್ಯವಾಗಿರುವ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಬದ್ಧತೆ ತೋರುವುದಿರುವುದು ದುರಂತವಾಗಿದೆ ಎಂದರು.
ಇನ್ನಾದರೂ ಜಿಲ್ಲೆಯ ಎಲ್ಲ ಶಾಸಕರು ನೀರಾವರಿ ಸೌಲಭ್ಯ ಕಲ್ಪಿಸುವ ಬದ್ಧತೆ ಪ್ರದರ್ಶಿಸಿ ಮುಂದಿನ ಪೀಳಿಗೆ ಎದುರಿಸಬಹುದಾದ ಹಲವು ಮಾರಣಾಂತಿಕ ಕಾಯಿಲೆಗಳಿಂದ ಮುಕ್ತಿ ನೀಡಬಹುದು ಹೇಳಿದರು. ಈ ವೇಳೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಚೇರಿಯ ಮುಂದೆ ವಿನೂತನ ಪ್ರತಿಭಟನೆ ನಡೆಸಿ ಸರ್ಕಾರ ಮತ್ತು ಶಾಸಕರ ವಿರುದ್ಧ ಧಿಕ್ಕಾರ ಕೂಗಿದರು.