ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಜಕ್ಕಲಮಡಗು ನೀರಿದ್ದರೂ ಬಳಸಲು ಸಾಧ್ಯವಾಗದ ಸ್ಥಿತಿ

1 min read

ಜಕ್ಕಲಮಡಗು ನೀರಿದ್ದರೂ ಬಳಸಲು ಸಾಧ್ಯವಾಗದ ಸ್ಥಿತಿ

ನಗರಸಭೆ ಅಧಿಕಾರಿಗಳ ನಿರ್ಲಕ್ಷಕ್ಕೆ ವಾರದಿಂದ ನಗರದಲ್ಲಿ ನೀರಿಲ್ಲ

ಪೈಪ್‌ಲೈನ್ ಒಡೆದು ವಾರ ಕಳೆದರೂ ದುರಸ್ತಿ ಮಾಡದ ನಗರಸಭೆ

ಜಕ್ಕಲಮಡಗು ನೀರಿದ್ದರೂ ಹಣ ನೀಡಿ ನೀರು ಖರೀದಿಸುವ ಸ್ಥಿತಿ

ಚಿಕ್ಕಬಳ್ಳಾಪುರ ಜನತೆಯ ನಶೀಬು ಸರಿಯಿಲ್ಲವೋ, ನಗರಸಭೆ ವಾಸ್ತು ಸರಿಯಿಲ್ಲವೋ ಗೊತ್ತಿಲ್ಲ. ಎನರ ಸಮಸ್ಯೆ ಪರಿಹಾರ ಮಾಡೋದು ಅಂದರೆ ನಗರಸಭೆ ಅಧಿಕಾರಿಗಳಿಗೆ ಆಗಿಬರುತ್ತಿಲ್ಲ. ಕುಡಿಯುವ ನೀರು ತುರ್ತು ಸೇವೆಗಳಲ್ಲಿ ಒಂದು ಎಂಬ ಕನಿಷ್ಠ  ಇಲ್ಲದ ನಗರಸಭೆ ಅಧಿಕಾರಿಗಳು ಎಂಟು ದಿನದಿಂದ ಪೈಪ್‌ಲೈನ್ ದುರಸ್ತಿ ಮಾಡದೆ ನಿರ್ಲಕ್ಷ ವಹಿಸಿದ್ದು, ನಾಗರಿಕರು ನಗರಸಭೆಗೆ ಶಾಪ ಹಾಕುವಂತಾಗಿದೆ. ಹಾಗಾದರೆ ಯಾವ ಪೈಪ್ ಲೈನ್, ಎಲ್ಲಿ ಒಡೆದಿದೆ ಅಂತ ನೀವೇ ನೋಡಿ.

ಹೌದು, ಚಿಕ್ಕಬಳ್ಳಾಪುರ ನಗರಸಭೆ ಅಧಿಕಾರಿಗಳಿಗೆ ನಾಗರಿಕರ ಹಿತಕ್ಕಿಂತ ಸ್ವ ಹಿತವೇ ಹೆಚ್ಚಾದಂತಿದೆ. ಅಷ್ಟೇ ಅಲ್ಲ, ನಾಗರಿಕರ ಯಾವುದೇ ಸಮಸ್ಯೆಯನ್ನು ಒಂದು ದಿನಕ್ಕೆ ಪರಿಹರಿಸುವ ಕನಿಷ್ಠ ಪ್ರಯತ್ನವನ್ನೂ ನಗರಸಭೆ ಅಧಿಕಾರಿಗಳು ಈವರೆಗೆ ಮಾಡಿದ ಉದಾಹರಣೆ ಇಲ್ಲ. ಇದಕ್ಕೆ ಜೊತೆಯಾಗಿ ಪ್ರಸ್ತುತ ನಗರಸಭೆಯಲ್ಲಿ ಆಡಳಿತ ಮಂಡಳಿ ಇಲ್ಲದೆ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಗಳಾಗಿದ್ದು, ಅವರು ಜಿಲ್ಲೆಯ ಆಡಳಿತದ ನಡುವೆ ನಗರಸಭೆ ಆಡಳಿತದತ್ತ ಗಮನ ಹರಿಸಲು ಸಮಯ ಸಿಗುತ್ತಿಲ್ಲ. ಸಾಲದೆಂಬoತೆ ಪ್ರಸ್ತುತ ಆಯುಕ್ತರೂ ನಗರಸಭೆಯಲ್ಲಿ ಇಲ್ಲ. ಇದರಿಂದ ಅಧಿಕಾರಿಗಳಿಗೆ ಆಡಿದ್ಸದ್ದೇ ಆಟ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿ ಕಾಣ್ತಾಯ ಇದೆಯಲ್ಲ, ಅಗೆದು ಹಾಳು ಮಡಿದ ರಸ್ತೆ, ಇದನ್ನು ಹೀಗೆ ಅಗೆದು ಎಂಟು ದಿನಗಳಾಗಿದೆ. ಹೀಗೆ ಇಲ್ಲಿ ಅಗೆಯೋದಕ್ಕೆ ಕಾರಣ ಪೈಪ್‌ಲೈನ್ ಒಡೆದಿದೆ ಎಂಬುದೇ ಕಾರಣ. ಇಲ್ಲಿ ಒಡೆದಿರೋದು ಯಾವುದೋ ಸಾಮಾನ್ಯ ಪೈಪ್‌ಲೈನ್ ಅಲ್ಲ, ಇಡೀ ಚಿಕ್ಕಬಳ್ಳಾಪುರ ನಗರಕ್ಕೆ ಜೀವ ಜಲ ಪೂರೈಸುತ್ತಿದೆಯಲ್ಲ, ಜಕ್ಕಲಮಡಗು ಜಲಾಶಯ, ಈ ಜಲಾಶಯದ ನೀರು ಪೂರೈಕೆ ಮಾಡೋ ಮುಖ್ಯ ಪೈಪ್‌ಲೈನ್. ಇಡೀ ನಗರಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಲೈನ್ ಇದಾಗಿದ್ದು, ಇಲ್ಲಿ ಯಾವುದೋ ಖಾಸಗಿಯವರು ಕೇಬಲ್ ಭೂಮಿಯಲ್ಲಿ ಹಾಕಲು ಅಗೆಯುವ ವೇಳೆ ಪೈಪ್‌ಲೈನ್ ಒಡೆದು ಅವಾಂತರ ಸೃಷ್ಟಿಯಾಗಿದೆ.

ಹೀಗೆ ಅವಾಂತರವಾಗಿ ಬರೋಬ್ಬರಿ ಎಂಟು ದಿನಗಳೇ ಕಳೆದಿದೆ. ಪೈಪ್‌ಲೈನ್ ಒಡೆದಿರುವ ಕಾರಣ ಈ ಮಾರ್ಗದಲ್ಲಿ ಜಕ್ಕಲಮಡಗು ಜಲಾಶಯದ ನೀರು ಬಿಡುವಂತಿಲ್ಲ. ಬಿಟ್ಟರೆ ಅದು ಪೋಲಾಗುತ್ತದೆ. ಹಾಗಾಗಿ ಅದನ್ನು ದುರಸ್ತಿ ಮಡಾಇದ ನಂತರವೇ ಆ ಮಾರ್ಗದಲ್ಲಿ ನೀರು ಬಿಡಬೇಕು. ಆದರೆ ಕಳೆದ ಎಂಟು ದಿನಗಳಿಂದ ನಗರಸಭೆ ಅಧಿಕಾರಿಗಳು ಮಾತ್ರ ಈ ಪೈಪ್‌ಲೈನ್ ದುರಸ್ತಿ ಮಾಡುತ್ತಲೇ ಇದ್ದಾರೆ. ಅದು ಮಾತ್ರ ಸರಿಹೋಗಿಲ್ಲ. ಯಾವಾಗ ಸರಿಹೋಗುತ್ತೆ ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ.

ಯಾವಾಗ ಚಿಕ್ಕಬಳ್ಳಾಪುರ ನಗರಕ್ಕೆ ಜಕ್ಕಲಮಡಗು ಜಲಾಶಯದ ನೀರು ಪೂರೈಕೆ ನಿಂತಿದೆಯೋ ಆಗ ನಗರದಲ್ಲಿ ನೀರಿನ ಸಮಸ್ಯೆ ತಲೆದೂರಿದೆ. ಸತತ ೮ ದಿನಗಳ ಕಾಲ ನೀರು ಬಾರದ ಕಾರಣ ಅನಿವಾರ್ಯವಾಗಿ ನಾಗರಿಕರು ಖಾಸಗಿ ನೀರಿನ ಟ್ಯಾಂಕರ್‌ಗಳ ಖರೀದಿಗೆ ಮುಂದಾಗಿದ್ದಾರೆ. ಪ್ರಸ್ತುತ ಮಳೆಯಾಗುತ್ತಿದ್ದು, ಜಕ್ಕಲಮಡಗು ಜಲಾಶಯದಲ್ಲಿ ಅಪಾರ ಪ್ರಮಾಣದ ನೀರಿದ್ದರೂ ಅದನ್ನು ನಗರಸಭೆ ಯಾಕೆ ನಡೀಉತ್ತಿಲ್ಲ ಎಂಬ ಅರಿವೇ ಇಲ್ಲದ ನಾಗರಿಕರು ಪ್ರತಿನಿತ್ಯ ನಗರಸಭೆಗೆ ಶಾಪ ಹಾಕುತ್ತಿದ್ದರೆ, ವಾಟರ್‌ಮನ್‌ಗಳು ವಾರ್ಡಿಗೆ ಹೋದರೆ ಜನ ನೀರು ಕೇಳುತ್ತಾರೆ ಎಂದು ಹೆದರಿ ವಾರ್ಡಿನತ್ತ ಸುಳಿಯದ ಸ್ಥಿತಿ ನಿರ್ಮಾಣವಾಗಿದೆ. ಸತತ ಎಂಟು ದಿನಗಳ ನೀರು ಬಂದ್‌ಗೆ ಕಾರಣ ಗೊತ್ತಿಲ್ಲದ ಜನರು ಮಾತ್ರ ಆಡಳಿತ ವ್ಯವಸ್ಥೆಗೆ ಶಾಪ ಹಾಕುತ್ತಲೇ ನೀರು ಖರೀದಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ನಗರದ ಬರೋಬ್ಬರಿ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಪ್ರಸ್ತುತ ನೀರಿನ ಸಮಸ್ಯೆ ಎದುರಾಗಿದೆ. ಜನರು ಪ್ರತಿನಿತ್ಯ ನಗರಸಭೆ ಸದಸ್ಯರಿಗೆ ಎಡೆತಾಕಿ, ನೀರಿನ ಸಮಸ್ಯೆ ಬಗ್ಗೆ ದೂರುತತಿದದಾರೆ. ಆದರೂ ನಗರಸಭೆ ಅಧಿಕರಿಗಳು ಮಾತ್ರ ಗಮನ ಹರಿಸುವ ಪ್ರಯತ್ನ ಮಾಡಿಲ್ಲ. ಸಿಟಿವಿಯಿಂದ ನಗರಸಭೆ ಎಂಜಿನಿಯರ್ ಅವರಿಗೆ ಕರೆ ಮಡಾಇದರೆ, ಇಂದು ಪೈಪ್‌ಲೈನ್ ದುರಸ್ತಿ ಕಾಮಗಾರಿ ಮುಕ್ತಾಯವಾಗಲಿದ್ದು, ನಾಳೆಯಿಂದಲೇ ನೀರು ಹರಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಅದು ಸಾಧ್ಯವಾಗಲಿದೆಯೋ ಇಲ್ಲವೋ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

ಕಳೆದ ಎಂಟು ದಿನಗಳಿಂದ ಕಾಲ ದೂಡಿರುವ ನಗರಸಭೆ ಅಧಿಕಾರಿಗಳು ಈಗಲಾದರೂ ಪೈಪ್‌ಲೈನ್ ದುರಸ್ತಿ ಕಾರ್ಯ ಪೂರ್ಣಗೊಳಿಸಿ ನೀರಿಲ್ಲದೆ ಪರದಾಡುತ್ತಿರುವ ನಗರದ ಜನತೆಗೆ ನೀರು ನೀಡುವ ಕೆಲಸ ಮಾಡಲಿದ್ದಾರೆ. ಅಥವಾ ಅವರ ನಿರ್ಲಕ್ಷತನವನ್ನು ಮುಂದುವರಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

About The Author

Leave a Reply

Your email address will not be published. Required fields are marked *