ನಂಜನಗೂಡು ಪರಶುರಾಮ ದೇಗುಲ ಜಲಾವೃತ
1 min readನಂಜನಗೂಡು ಪರಶುರಾಮ ದೇಗುಲ ಜಲಾವೃತ
ಸಂಪೂರ್ಣವಾಗಿ ಮುಳುಗಿದ ಸ್ನಾನಘಟ್ಟ, ಮುಡಿಕಟ್ಟೆ
ತಗ್ಗು ಪ್ರದೇಶಗಳ ಜನರಿಗೆ ರೆಡ್ ಅಲರ್ಟ್ ಘೋಷಣೆ
ಸೇತುವೆ ಮಟ್ಟದಲ್ಲಿ ಹರಿಯುತ್ತಿರುವ ಕಪಿಲಾ ನೀರು
ಕಪಿಲಾ ನದಿಯಲ್ಲಿ ನೀರಿನ ಹೊರ ಹರಿವು ಹೆಚ್ಚಾಗಿದೆ. ಇದರಿಂದಾಗಿ ಇಂದು ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡಿನಲ್ಲಿ ಕಪಿಲಾ ನದಿ ತೀರದಲ್ಲಿರುವ ಪರಶುರಾಮ ದೇವಾಲಯ ಜಲಾವೃತವಾಗಿದ್ದು, ಇದರೊಂದಿಗೆ ಶ್ರಿ ನಂಜುoಡಸ್ವಾಮಿ ದೇವಾಲಯದ ಸ್ನಾನಘಟ್ಟ, ಮುಡಿಕಟ್ಟೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿವೆ.
ಕಪಿಲಾ ನದಿಯಲ್ಲಿ ನೀರಿನ ಹೊರ ಹರಿವು ಹೆಚ್ಚಾಗಿದೆ. ಇದರಿಂದಾಗಿ ಇಂದು ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡಿನಲ್ಲಿ ಕಪಿಲಾ ನದಿ ತೀರದಲ್ಲಿರುವ ಪರಶುರಾಮ ದೇವಾಲಯ ಜಲಾವೃತವಾಗಿದ್ದು, ಇದರೊಂದಿಗೆ ಶ್ರಿ ನಂಜುoಡಸ್ವಾಮಿ ದೇವಾಲಯದ ಸ್ನಾನಘಟ್ಟ, ಮುಡಿಕಟ್ಟೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿವೆ. ಮೈದುಂಬಿ ಹರಿಯುತ್ತಿರುವ ಕಪಿಲಾ ನದಿಯನ್ನು ಕಣ್ತುಂಬಿಕೊಳ್ಳಲು ನೂರಾರು ಜನರು ಶ್ರೀ ನಂಜುoಡೇಶ್ವರ ಸ್ವಾಮಿ ದೇವಾಲಯದ ಸ್ನಾನಘಟ್ಟದ ಬಳಿ ಆಗಮಿಸುತ್ತಿದ್ದು, ನದಿ ಬಳಿಗೆ ಜನರು ತೆರಳದಂತೆ ಪೊಲೀಸರು ಧ್ವನಿ ವರ್ಧಕದ ಮೂಲಕ ಎಚ್ಚರಿಕೆ ನೀಡುತ್ತಿದ್ದರೂ ಆಗಮಿಸುತ್ತಿರುವ ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಗಿದೆ.
ಹದಿನಾರು ಕಾಲು ಮಂಟಪ, ಪರಶುರಾಮ ದೇವಾಲಯದ ಬಳಿ ನದಿ ದಡದಲ್ಲಿ ಹಗ್ಗ ಕಟ್ಟಿ, ಬ್ಯಾರಿಕೇಡ್ ಹಾಕಿ ಅಪಾಯದ ಕುರಿತು ಸಂದೇಶ ನೀಡುವ ಮೂಲಕ ಜನರು ನದಿ ನೀರಿನಲ್ಲಿ ಮುಂದೆ ಸಾಗದಂತೆ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕ್ಷಣದಲ್ಲಿ ನೀರಿನ ಹೊರ ಹರಿವು ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ನಗರದ ಹಳ್ಳದಕೇರಿ ನಿವಾಸಿಗಳಿಗೆ ನಗರಸಭೆಯಿಂದ ಮುನ್ನೆಚ್ಚರಿಕೆ ನೀಡಲಾಗಿದೆ. ಜೊತೆಗೆ ತಾತ್ಕಾಲಿಕ ಗಂಜಿ ಕೇಂದ್ರವನ್ನು ತೆರೆಯಲು ಅಗತ್ಯ ಸಿದ್ಧತೆ ಕೆಗೊಳ್ಳಲಾಗಿದೆ.
ದಕ್ಷಿಣ ಕಾಶಿ ನಂಜನಗೂಡಿನ ನಂಜುoಡೇಶ್ವರನ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಕಪಿಲ ನದಿಯ ಸ್ನಾನಘಟ್ಟದ ಬಳಿ ತೆರಳದಂತೆ ತಾಲೂಕು ಆಡಳಿತದ ಆದೇಶದ ಮೇರೆಗೆ ದಿಗ್ಬಂದನ ವಿಧಿಸಲಾಗಿದೆ. ಮೈಸೂರು ನಂಜನಗೂಡು ಮುಖ್ಯ ರಸ್ತೆಯ ನೂರು ವರ್ಷಗಳ ಹಳೆಯ ದೇವರಾಜ ಅರಸು ಸೇತುವೆ ತುತ್ತ ತುದಿಯಲ್ಲಿ ಬಾರಿ ಪ್ರಮಾಣದ ಪ್ರವಾಹದ ನೀರು ಹರಿಯುತ್ತಿದೆ. ಈಗಾಗಲೇ ಕಬಿನಿ ನಾಲೆಯಿಂದ ಕಪಿಲ ನದಿಗೆ 36 ಸಾವಿರ ಕ್ಯೂಸಕ್ಸ್ ನೀರು ಹೊರ ಬಿಡಲಾಗಿದೆ. ನಂಜನಗೂಡು ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯ, ನಂಜುoಡೇಶ್ವರನ ದೇವಾಲಯದ ಸ್ನಾನಘಟ್ಟ, ಹದಿನಾರು ಕಾಲು ಮಂಟಪ ಶೇ.90 ರಷ್ಟು ಮುಳುಗಡೆಯಾಗಿವೆ.
ದೇವಾಲಯದ ಹಿಂಬದಿಯಲ್ಲಿರುವ ತಗ್ಗು ಪ್ರದೇಶಗಳಾದ ತೋಪಿನ ಬೀದಿ, ಒಕ್ಕಲ ಗೇರಿ, ಹಳ್ಳದ ಕೇರಿ, ರಾಯರ ಮಠ, ಸೇರಿದಂತೆ ಸಾಕಷ್ಟು ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗುವ ಆತಂಕ ಎದುರಾಗಿದೆ. ನಂಜನಗೂಡಿನ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ತಗುಪ್ರದೇಶದ ಜನ ವಸತಿ ಪ್ರದೇಶಕ್ಕೆ ತೆರಳಿ ಈಗಾಗಲೇ ಎಚ್ಚರಿಕೆಯ ಸಂದೇಶಗಳನ್ನ ನೀಡಲಾಗಿದೆ.
ಮುಂದಿನ ಮೂರ್ನಾಲ್ಕು ದಿನಗಳ ಕಾಲ ನಿರಂತರವಾಗಿ ಮಳೆ ಸುರಿಯುವ ಕಾರಣ ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುವ ಸಾದ್ಯತೆ ಇದೆ. ಜನಜನವಾರುಗಳ ರಕ್ಷಣೆಗಾಗಿ ಸ್ಥಳಾಂತರವಾಗಬೇಕು ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.
ನಂಜನಗೂಡಿನ ಶಾಸಕ ದರ್ಶನ್ ದ್ರುವ ನಾರಾಯಣ್ ಈಗಾಗಲೇ ಸಂಬoಧಪಟ್ಟ ಅಧಿಕಾರಿಗಳಿಗೆ ಬೊಕ್ಕಳ್ಳಿ, ಹೆಜ್ಜೆಗೆ, ಹುಲ್ಲಹಳ್ಳಿ, ಮಹದೇವ ತಾತ ಗದ್ದಿಗೆಯ ಸಂಗಮ ಇವು ಕಪಿಲಾ ನದಿಯ ಅಂಚಿನಲ್ಲಿರುವ ಪ್ರದೇಶಗಳಾಗಿವೆ.
ಕೂಡಲೇ ಅಧಿಕಾರಿಗಳ ತಂಡ ಭೇಟಿ ನೀಡಿ ಸ್ಪಷ್ಟ ಮಾಹಿತಿ ಕಲೆ ಹಾಕಿ ಜನ ಜನವಾರು ರಕ್ಷಣೆಗೆ ಮುಂದಾಗಬೇಕು ಎಂದು ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ತಗ್ಗು ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗಿ ಆತಂಕ ಸೃಷ್ಟಿ ಮಾಡಿದರೆ ಯಾವುದೇ ಜೀವ ಹಾನಿ ಸಂಭವಿಸದ ಹಾಗೆ ಸಂರಕ್ಷಿಸಲು ಗಂಜಿ ಕೇಂದ್ರಗಳನ್ನ ತೆರೆಯಲಾಗುವುದು. ಸಂಕಷ್ಟದಲ್ಲಿರುವ ಜನರಿಗೆ ಯಾವುದೇ ರೀತಿಯ ತೊಂದರೆ ಇಲ್ಲದ ರೀತಿಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ತಾಲೂಕು ಆಡಳಿತ ಸಿದ್ಧವಾಗಿದೆ ಎಂದು ತಹಸಿಲ್ದಾರ್ ಶಿವಕುಮಾರ್ ಕಾಸನೂರು ತಿಳಿಸಿದ್ದಾರೆ.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday