ಧರ್ಮದ ಎಲ್ಲೆ ಮೀರಿ ಮೊಹರಂ ಹಬ್ಬ ಆಚರಣೆ
1 min readಧರ್ಮದ ಎಲ್ಲೆ ಮೀರಿ ಮೊಹರಂ ಹಬ್ಬ ಆಚರಣೆ
ಮನುಕುಲ ಒಂದೇ ಎಂಬ ಸಂದೇಶ ಸಾರುವ ಮೊಹರಂ
ಆಧುನಿಕತೆಯ ಅಬ್ಬರ ಎಷ್ಟೆ ಜೋರಾಗಿದ್ದರೂ ಹಿಂದೂ-ಮುಸ್ಲಿoರ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬ ಪ್ರತಿ ವರ್ಷ ತನ್ನ ಅಸ್ತಿತ್ವ ವೃದ್ಧಿಸಿಕೊಳ್ಳುತ್ತಾ ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಬರುತ್ತಿದೆ. ತ್ಯಾಗ-ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಬಾಗೇಪಲ್ಲಿಯಲ್ಲಿ ಮುಸ್ಲಿಂರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಆಧುನಿಕತೆಯ ಅಬ್ಬರ ಎಷ್ಟೆ ಜೋರಾಗಿದ್ದರೂ ಹಿಂದೂ-ಮುಸ್ಲಿoರ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬ ಪ್ರತಿ ವರ್ಷ ತನ್ನ ಅಸ್ತಿತ್ವ ವೃದ್ಧಿಸಿಕೊಳ್ಳುತ್ತಾ ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಬರುತ್ತಿದೆ. ತ್ಯಾಗ-ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಬಾಗೇಪಲ್ಲಿಯಲ್ಲಿ ಮುಸ್ಲಿಂರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಪಟ್ಟಣದ ಬಯಲು ಆಂಜನೇಯ ಸ್ವಾಮಿ ಮುಖ್ಯ ರಸ್ತೆಯಲಿರುವ ಪೀರ್ಲು ಚಾವಡಿ ದೇವರ ಸನ್ನಿಧಿಯಲ್ಲಿ ಹೂವಿನ ಅಲಂಕಾರ, ವಿಶೇಷ ಪೂಜೆ ನೆರವೇರಿಸಲಾಯಿತು.
ಬಾವಯ್ಯ ಹಬ್ಬದ ಪಕೀರ್‌ಗಳು ದೇವರಿಗೆ ಕಡಲೇ ಪಪ್ಪು, ಸಕ್ಕರೆ ,ಮಂಡಕ್ಕಿ, ಹಾಗೂ ಕಲ್ಲು ಸಕ್ಕರೆಗಳಿಂದ ನೈವೇದ್ಯ ಮಾಡಿ ನೇಮಿಸುತ್ತಾರೆ. ನಂತರ ಭಕ್ತಾದಿಗಳು ಪ್ರಸಾದ ಸ್ವೀಕರಿಸುತ್ತಾರೆ. ಜಾತಿಯ ಹಂಗಿಲ್ಲದೇ ಮನುಕುಲ ಒಂದೇ ಎಂಬ ಸಂದೇಶ ಸಾರಿ, ಸರ್ವಧರ್ಮಗಳ ಭಾವೈಕ್ಯತೆಯ ಕೊಂಡಿಯಾಗಿರುವ ಮೊಹರಂ ಹಬ್ಬ ಆಚರಣೆ ಆಧುನಿಕ ಯುಗದಲ್ಲೂ ಸ್ನೇಹ, ಭ್ರಾತೃತ್ವದ ಸಂಕೇತವಾಗಿ ನಡೆದುಕೊಂಡು ಬಂದಿದೆ.
ಹುತಾತ್ಮರನ್ನು ನೆನೆಯುವ ಉದ್ದೇಶದಿಂದ ವಿಶ್ವಾದಾದ್ಯಂತ ಮೊಹರಂ ಹಬ್ಬವನ್ನು ಜಾತಿ ಭೇದವಿಲ್ಲದೇ ಶೋಕದ ಮೂಲಕ ಆಚರಿಸಲಾಗುತ್ತದೆ. ಮೊಹರಂ ಸರ್ವ ಧರ್ಮೀಯರು ಆಚರಿಸುವ ವೈಶಿಷ್ಟಪೂರ್ಣ ಹಬ್ಬವಾಗಿದೆ. ಇದಕ್ಕೆ ಅಲಾಯಿ ಹಬ್ಬ, ಬಾವಯ್ಯ ಹಬ್ಬ ಅಂತಲೂ ಹೆಸರು. ಹಳ್ಳಿಗಳಲ್ಲಿ ಈ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಾರೆ. 10 ದಿನಗಳ ವರೆಗೆ ಕೂರಿಸಲಾಗುವ ಅಲಾಯಿ ಪಂಜಾ ದೇವರಿಗೆ ಗುಣಿ ತೆಗೆದು ಅಗ್ನಿಕುಂಡ ಪ್ರವೇಶ ಮಾಡುತ್ತಾರೆ. ಮೊಹರಂ ಕೊನೆಯ ದಿನ ಹಬ್ಬ ಆಚರಿಸಲಾಗುತ್ತದೆ.
ಮೊಹರಂ ಧರ್ಮ, ಜಾತಿಯ ಹಂಗಿಲ್ಲದ ಹಬ್ಬವಾಗಿದೆ. ಇದು ಎಲ್ಲರೂ ಭಾವೈಕ್ಯತೆ ಹಾಗೂ ಶ್ರದ್ಧಾ-ಭಕ್ತಿಯಿಂದ ಆಚರಿಸುವ ಹಬ್ಬವಾಗಿದೆ. ಹುಲಿ ವೇಷಧಾರಿಗಳು ಮೈಗೆ ಮುಖಕ್ಕೆ ಕೆಂಪ್ಪು, ಬಿಳಿ, ಕಪ್ಪು ಹರಿಶಿಣ ಬಣ್ಣ ಹುಲಿ ವೇಷದಂತೆ ಬಣ್ಣ ಬಳೆದು ತಲೆಗೆ ವಸ್ತ ಕಟ್ಟಿಕೊಂಡು ಕೊರಳಿಗೆ ಹೂವಿನ ಹಾರ ಹಾಕಿಕೊಂಡು ಹಲಗೆ ಬಡಿತಕ್ಕೆ ಹೆಜ್ಜೆ ಹಾಕುತ್ತಾ ಜನರನ್ನು ರಂಜಿಸುವುದೇ ಮೊಹರಂ ಹಬ್ಬದ ಸಂಕೇತವಾಗಿದೆ.
ಇoದಿನ ಆಧುನಿಕ ಕಾಲದಲ್ಲಿ ಹುಲಿ ವೇಷ, ರಾಮ ಲಕ್ಷಣ ಸೀತೆ ಆಂಜನೇಯ ಹಾಗೂ ಜೋಕರ್ ವೇಷಗಳು ನೇಪಥ್ಯಕ್ಕೆ ಸರಿಯುತ್ತಿದೆ ಎಂದು ಹಿರಿಯ ಕಲಾವಿದ ಅಬ್ದುಲ್ ಕರೀಂ ಸಾಬ್ ತಿಳಿಸಿದರು. ಗ್ರಾಮದಲ್ಲಿ ಹಬ್ಬವನ್ನು ಧರ್ಮತೀತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ನಮ್ಮ ಮುತ್ತಾತ, ತಾತ ಹಾಗೂ ತಂದೆಯವರು ಪ್ರತಿವರ್ಷ ಅದ್ದೂರಿಯಾಗಿ ಹಬ್ಬದಲ್ಲಿ ಪಾಲ್ಗೊಂಡು ಆಚರಿಸುತ್ತಿದ್ದರು. ನಾವು ಮುಂದುವರಿಸಿಕೊoಡು ಹೋಗುತ್ತಿದ್ದೇವೆ. ನಮ್ಮ ಊರು ಭಾವೈಕ್ಯದ ಕೊಂಡಿಯಾಗಿದೆ’ ಎಂದು ಸಿಪಿಐಎಂ ಮುಖಂಡ ಚನ್ನರಾಯಪ್ಪ ತಿಳಿಸಿದರು.