ಭೂ ಮಾಫಿಯಾದವರಿಂದ ಜಮೀನು ಕಬಳಿಕೆ! ಡಿಸಿ ಕಚೇರಿಯಲ್ಲಿ ಬಿದ್ದು ಹೊರಳಾಡಿ ಕಣ್ಣೀರಿಟ್ಟ ರೈತ!
1 min readಜಿಲ್ಲಾಧಿಕಾರಿ ಕಚೇರಿಗೆ ಬಂದ ರೈತನೊಬ್ಬ (Farmer) ತನ್ನ ಕಷ್ಟಗಳನ್ನು ಹೇಳಿಕೊಂಡು ಕಣ್ಣಿರು ಹಾಕುತ್ತಾ ನೆಲದ ಮೇಲೆ ಬಿದ್ದು ಹೊರಳಾಡಿದ ಘಟನೆ ಮಧ್ಯಪ್ರದೇಶದ (Madhya Pradesh) ಮಂದಸೌರ್‌ನಲ್ಲಿ (Mandsaur) ನಡೆದಿದೆ. ಸ್ಥಳೀಯ ಮಾಫಿಯಾ (Local Mafia) ನನ್ನ ಭೂಮಿಯನ್ನು ಅಕ್ರಮವಾಗಿ ಕಬಳಿಸಿದೆ (Illegal Occupation) ನಾವು ಈಗ ಏನು ಮಾಡಬೇಕು ಎಂದು ರೈತನು ಕಣ್ಣೀರಿಟ್ಟಿದ್ದಾನೆ.
ಮಾಫಿಯಾದಿಂದ ಸಂಕಷ್ಟಕ್ಕೆ ಸಿಲುಕಿದ ರೈತ ಶಂಕರಲಾಲ್, ಈ ಕುರಿತು ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಅಧಿಕಾರಿಗಳು ದೂರಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ತನ್ನ ನೋವನ್ನು ಹೇಳಿಕೊಳ್ಳಲು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದಾರೆ. ಕಚೇರಿಯ ಅವರಣದಲ್ಲಿ ಕೈ ಮುಗಿದು ಬಿದ್ದಿರುವ ರೈತ ಕಣ್ಣೀರು ಹಾಕುತ್ತ ಹೊರಳಾಡುತ್ತಿರುವ ದೃಶ್ಯವನ್ನು ಅಲ್ಲೆ ಇದ್ದವರು ಮೊಬೈಲ್ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ ಶಂಕರಲಾಲ್, ಭೂಮಾಫಿಯಾದಿಂದ ನನಗೆ ತೊಂದರೆಯಾಗಿದೆ. ತಹಶೀಲ್ದಾರ್ ಮಾಡಿದ ತಪ್ಪಿನಿಂದಾಗಿ ನಾವು ಕಷ್ಟಕ್ಕೆ ಸಿಲುಕಿದ್ದೇವೆ ಎಂದಿದ್ದಾರೆ. ತಹಶೀಲ್ದಾರ್ ಮಾಡಿದ ತಪ್ಪಿನ ಪರಿಣಾಮವನ್ನು ನಾನು ಅನುಭವಿಸುತ್ತಿದ್ದೇನೆ. ನನಗೆ ಸರ್ಕಾರ ಹಾಗೂ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲ, ಇಲ್ಲಿ ಎಲ್ಲರೂ ಭ್ರಷ್ಟರೆ, ರೈತರಿಗೆ ಅನ್ಯಾಯವಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇನ್ನು ರೈತನ ಗೋಳಾಟ ಕಂಡ ಜಿಲ್ಲಾಧಿಕಾರಿ ಘಟನೆ ಕುರಿತು ಅಧಿಕಾರಿಗಳ ಮಾಹಿತಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ದಿಲೀಪ್ ಯಾದವ್, ಸಾರ್ವಜನಿಕ ವಿಚಾರಣೆಯಲ್ಲಿ ಬರುವ ಎಲ್ಲಾ ಪ್ರಕರಣಗಳನ್ನು ತಕ್ಷಣವೇ ಪರಿಹರಿಸಲಾಗುತ್ತದೆ. ಮಂಗಳವಾರ ನಡೆದ ವಿಚಾರಣೆಗೆ ಹಲವು ಮಂದಿ ಹಾಜರಾಗಿದ್ದು, ಅವರ ಸಮಸ್ಯೆಗಳನ್ನು ಆಲಿಸಿ ಸಾಧ್ಯವಾದಷ್ಟು ಪರಿಹರಿಸಲಾಗಿದೆ. ಹಿಂದಿನ ಪ್ರಕರಣಗಳನ್ನೂ ಪರಿಶೀಲಿಸಲಾಗಿದೆ ಎಂದು ತಿಳಿಸಿದ್ದಾರೆ.
ದೂರುದಾರ ರೈತ ವಿವಾದಿತ ಭೂಮಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ಸ್ಥಳೀಯ ಆಡಳಿತ ಸ್ಪಷ್ಟಪಡಿಸಿದೆ. ಸದ್ಯ ಶಂಕರ್ ಮತ್ತು ಅವರ ಕುಟುಂಬದವರು ಜಮೀನು ಹೊಂದಿದ್ದಾರೆ. ಈ ಹಿಂದೆ ಜೀಮಿನಿನ ಪಾಲುದಾರರು ಮಾರಾಟ ಮಾಡಿದ್ದ ಅರ್ಧದಷ್ಟು ಭೂಮಿಯನ್ನು ಖರೀದಿದಾರರು ಸ್ವಾಧೀನಪಡಿಸಿಕೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸ್ಥಳೀಯ ಆಡಳಿತ ನೀಡಿದ ದಾಖಲೆಗಳ ಆಧಾರದ ಮೇಲೆ ತಹಸೀಲ್ದಾರ್ ಸಲ್ಲಿಸಿದ ತನಿಖಾ ವರದಿ ಪ್ರಕಾರ, ಸುಖದ್ ಗ್ರಾಮದಲ್ಲಿ 2.5 ಹೆಕ್ಟೇರ್ ಜಮೀನು ಇದ್ದು, ಸರ್ವೆ ಸಂಖ್ಯೆ 625 ರಲ್ಲಿ 1.01 ಹೆಕ್ಟೇರ್ ಇದೆ. ಈ ಭೂಮಿಯನ್ನು ಶಂಕರಲಾಲ್ ಮತ್ತು ಅವರ ಕುಟುಂಬ ಅನೋಖಿಲಾಲ್, ಭಗವಾನ್ ಭಾಯ್ ಮತ್ತು ರೇಶಮ್ ಭಾಯ್, ಫೂಲ್‌ಚಂದ್ ಅವರ ಪುತ್ರರು, ಬಾಬಾ ಘಾಸಿರಾಮ್, ಕರು ಲಾಲ್, ರಾಮ್‌ಲಾಲ್, ಪ್ರಭು ಲಾಲ್, ಮಂಗಿ ಬಾಯಿ ಮತ್ತು ಪಾರ್ವತಿ ಬಾಯಿ ಜಂಟಿಯಾಗಿ ಪಾಲುದಾರರಾಗಿದ್ದಾರೆ.
2010ರ ಡಿಸೆಂಬರ್ 31 ರಂದು ಮಾರಾಟ ಪತ್ರದ ಪ್ರಕಾರ ಈ ಭೂಮಿಯನ್ನು ಮಂದಸೌರ್ ನಿವಾಸಿ ನಾರಾಯಣ ರಾವ್ ಅವರ ಮಗ ಅಶ್ವಿನ್ ಎಂಬುವವರಿಗೆ ಮಾರಾಟ ಮಾಡಲಾಗಿದೆ. ಈ ಭೂಮಿಯನ್ನು ಹಸ್ತಾಂತರಿಸಲು ಅಂದಿನ ತಹಶೀಲ್ದಾರ್ 2010ರಲ್ಲಿ ಅನುಮೋದನೆ ನೀಡಿದ್ದರು. ಆದರೂ ಮಾರಾಟವಾದ ಭೂಮಿ ಕರು ಲಾಲ್, ರಾಮಲಾಲ್, ಪ್ರಭು ಲಾಲ್, ಮಂಗಿ ಬಾಯಿ ಮತ್ತು ಪಾರ್ವತಿ ಬಾಯಿ ಅವರ ಸ್ವಾಧೀನದಲ್ಲಿ ಉಳಿದಿದ್ದು, ಅದನ್ನು ಅಶ್ವಿನ್‌ಗೆ ಹಸ್ತಾಂತರಿಸಲು ಅವರು ಸಿದ್ಧರಿಲ್ಲ ಎಂದು ವರದಿ ತಿಳಿಸಿದೆ.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday