ನನ್ನ ಮೊದಲ ಸಿನಿಮಾ ಕೈತಪ್ಪಿದು ಆ ನಟಿಯಿಂದಲೇ; ಇಮ್ರಾನ್ ಹಶ್ಮಿ ಹೀಗೆಂದಿದ್ದು ಯಾರಿಗೆ?
1 min readಇಮ್ರಾನ್ ಹಶ್ಮಿ 2003ರಲ್ಲಿ ವಿಕ್ರಮ್ ಭಟ್ ಅವರ ಫುಟ್‌ಪಾತ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಅದಕ್ಕೂ ಮುನ್ನ ’ಯೇ ಜಿಂದಗಿ ಕಾ ಸಫರ್’ ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತು. ಅದರಲ್ಲಿ ನಾನೇ ನಟಿಸಿದ್ದರೆ ಅದೇ ನನ್ನ ಮೊದಲ ಸಿನಿಮಾ ಆಗುತಿತ್ತು.
ಆ ನಟಿಯಿಂದ ನನಗೆ ಅವಕಾಶ ಕೈತಪ್ಪಿತು ಎಂದು ಸ್ವತಃ ನಟ ಇಮ್ರಾನ್ ಅವರೆ ಹೇಳಿದ್ದಾರೆ.
ಇಮ್ರಾನ್ ಹಶ್ಮಿ ಪ್ರಸ್ತುತ ಅವರ ಸರಣಿ ‘ಶೋಟೈಮ್’ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇದರ ಮೊದಲ ಸೀಸನ್‌ನ ಎರಡನೇ ಭಾಗವು ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ವೆಬ್ ಸಿರೀಸ್ ಪ್ರಚಾರದಲ್ಲಿರುವ ಇಮ್ರಾನ್ ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಮೊದಲ ಸಿನಿಮಾದ ಬಗ್ಗೆ ಹೇಳಿದ್ದಾರೆ.
ಯೇ ಜಿಂದಗಿ ಕಾ ಸಫರ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ಮೊದಲು ನಟ ಗೋವಿಂದ್ ಅವರು ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಚಿತ್ರೀಕರಣಕ್ಕೆ ಅವರ ಡೇಟ್ಸ್ ಸಮಸ್ಯೆ ಆಯಿತೆಂದು ಮಹೇಶ್ ಭಟ್ ಫೋನ್ ಮಾಡಿ ಸಿನಿಮಾಕ್ಕೆ ಆಫರ್ ಕೊಟ್ಟರು. ಆದರೆ ಆಗ ನಾನು ಸಿನಿಮಾದಲ್ಲಿ ನಟಿಸಲು ಸಿದ್ಧನಿರಲಿಲ್ಲ. ಮಹೇಶ್ ಭಟ್ ಅವರು, ಸಿನಿಮಾದಲ್ಲಿ ತೊಡಗಿಕೊಳ್ಳದೆ ನಟಿಸಲು ಎಂದಿಗೂ ಸಾಧ್ಯವಾಗುವುದಿಲ್ಲ. ನೀವೂ ಸಿನಿಮಾದಲ್ಲಿ ನಟಿಸುತ್ತಾ ಕಲಿಯಬಹುದು ಎಂದು ಹೇಳಿದರು.
ಸಿನಿಮಾಗೆ ಆಯ್ಕೆಯಾಗಿದ್ದ ನಟಿ ಅಮೀಶಾ ಪಟೇಲ್ , ಆ ಸಮಯಕ್ಕಾಗಲೇ ಕಹೋ ನಾ ಪ್ಯಾರ್ ಹೈನಂತಹ ಹಿಟ್ ಸಿನಿಮಾ ನೀಡದ್ದರು. ಈ ಸಿನಿಮಾದಲ್ಲಿ ನಾಯಕನ ಪಾತ್ರಕ್ಕೆ ಇಮ್ರಾನ್ ಹಶ್ಮಿ ಸೂಕ್ತವಲ್ಲ ಎಂದು ಭಾವಿಸಿದ್ದಳು. ಈ ಪಾತ್ರಕ್ಕೆ ನ್ಯಾಯ ಒದಗಿಸಲು ಅವರಿಂದ ಸಾಧ್ಯವಾಗುವುದಿಲ್ಲ. ನಾಯಕನ ಕಾಸ್ಟಿಂಗ್ ಸರಿಯಾಗಿರಬೇಕೆಂದು ಅಮೀಶಾ ಬಯಸಿದ್ದಳು. ನಂತರ ಅವಳು ಭಟ್ ಸಾಹಿಬ್ ಬಳಿಗೆ ಹೋಗಿ ಇಮ್ರಾನ್ ಸೂಕ್ತವೆಂದು ನಾನು ಭಾವಿಸುವುದಿಲ್ಲ ಎಂದು ಹೇಳಿದರು. ಆದರೆ ಆ ಸಮಯದಲ್ಲಿ ನನಗೆ ತುಂಬಾ ಕೋಪ ಬಂತು, ಆದರೆ ಈಗ ಆಲೋಚಿಸಿದರೆ ಅಮೀಶಾ ಹೇಳಿದ್ದು ಸರಿ ಎನ್ನಿಸುತ್ತದೆ ಎಂದಿದ್ದಾರೆ.
See alsoವಿವಾಹೇತರ ಸಂಬಂಧ ಹೊಂದಿದ್ದ ಉಪನ್ಯಾಸಕ ಹೆಂಡತಿ ಮಕ್ಕಳಿಗೆ ವಿಷ ಉಣಿಸಿ ತಾನೂ ಪ್ರಾಣ ಬಿಟ್ಟ…
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday