ಗೌರಿಬಿದನೂರು ತಾಲೂಕಿನಾಧ್ಯಂತ ಸಂಭ್ರಮದ ಕ್ರಿಸ್ಮಸ್

ಬಾಗೇಪಲ್ಲಿಯಲ್ಲಿ ಮುಗಿಲು ಮುಟ್ಟಿದ ಕ್ರಿಸ್ ಮಸ್ ಸಂಭ್ರಮ

ಬಾಗೇಪಲ್ಲಿಯಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕ್ರಿಸ್‌ಮಸ್ ಸಂಭ್ರಮ

December 26, 2024

Ctv News Kannada

Chikkaballapura

ಸಿಹಿ ಸುದ್ದಿ, ರಾಜಧಾನಿ ಬೆಂಗಳೂರಿಗೆ ಮತ್ತೊಂದು ಗರಿ: ಜಿಸಿಸಿ ವರದಿ

1 min read

Businessman touching the brain working of Artificial Intelligence (AI) Automation, Predictive analytics, Customer service AI-powered chatbot, analyze customer data, business and technology

 ಸಿಲಿಕಾನ್ ಸಿಟಿ, ಐಟಿ ಹಬ್, ಉದ್ಯಾನ ನಗರಿ ಸೇರಿದಂತೆ ವಿವಿಧ ಹೆಸರುಗಳಿಂದ ಕರೆಸಿಕೊಳ್ಳು ರಾಜ್ಯ ರಾಜಧಾನಿ ಬೆಂಗಳೂರಿಗೆ ಮತ್ತೊಂದು ಗರಿ ಲಭಿಸಿದೆ. ಮುಂದುವರಿದ ತಂತ್ರಜ್ಞಾನವಾದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಲಯಕ್ಕೆ ಸಂಬಂಧಿಸಿದ ವಿಷಯದಲ್ಲಿ ಬೆಂಗಳೂರಿನ ಹೆಸರು ವಿಶ್ವದಲ್ಲಿ ರಾರಾಜಿಸುವಂತಾಗಿದೆ.

ಹೌದು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ನಲ್ಲಿ ಕೆಲಸ ಮಾಡುವ ‘ಟ್ಯಾಲೆಂಟ್ ಪೂಲ್’ ನಲ್ಲಿ ಬೆಂಗಳೂರು ವಿಶ್ವದ ಎರಡನೇ ಅತಿದೊಡ್ಡ ಕೇಂದ್ರವಾಗಿ ಗುರುತಿಸಿಕೊಂಡಿದೆ. ಈ ಕುರಿತು ನೆನ್ನೆ ಸೋಮವಾರವಷ್ಟೇ ಬಿಡುಗಡೆಯಾದ ಕರ್ನಾಟಕ ‘ಗ್ಲೋಬಲ್ ಕೆಪಾಬಿಲಿಟಿ ಸೆಂಟರ್ (GCC)’ ಲ್ಯಾಂಡ್‌ಸ್ಕೇಪ್ ರಿಪೋರ್ಟ್ 2024 ಖಚಿತಪಡಿಸಿದೆ.

ಭಾರತ ಮಾತ್ರವಲ್ಲದೇ ಜಾಗತಿಕವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನದ ಹೇರಳ ಬಳಕೆ ಆಗುತ್ತಿದೆ. ಈ ತಂತ್ರಜ್ಞಾನದಲ್ಲಿ ತೊಡಗಿಕೊಂಡ ಕೌಶಲ್ಯಯುತ ಪ್ರತಿಭಾವಂತರ ಪೈಕಿ ಭಾರತದಲ್ಲಿ 3.25 ಲಕ್ಷಕ್ಕೂ ಹೆಚ್ಚು ವೃತ್ತಿಪರರು ಇದ್ದಾರೆ. ಅದರಲ್ಲಿ25% ಕ್ಕಿಂತ ಹೆಚ್ಚು ಡಿಜಿಟಲ್ ಪ್ರತಿಭೆಗಳು ಬೆಂಗಳೂರಲ್ಲಿದ್ದಾರೆ ಎಂದು ವರದಿ ಮಾಹಿತಿ ನೀಡಿದೆ.

ಬೆಂಗಳೂರು AI ಟ್ಯಾಲೆಂಟ್ ಪೂಲ್‌ನ ವಿಶ್ವದ ಎರಡನೇ ಅತಿದೊಡ್ಡ ಕೇಂದ್ರವಾಗಿದೆ. ಇದನ್ನು ಈಗ ಜಾಗತಿಕ AI ಹಬ್ ಎಂದು ಗುರುತಿಸಲಾಗುತ್ತಿದೆ” ಎಂಬುದು ಬಿಡುಗಡೆಗೊಂಡ ವರದಿಯಿಂದ ಬಹಿರಂಗವಾಗಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ

ಭಾರತದಲ್ಲಿ ಗ್ಲೋಬಲ್ ಕೆಪಾಬಿಲಿಟಿ ಸೆಂಟರ್ (GCC)’ ಹೊಂದಿರುವ ಫೋರ್ಬ್ಸ್ 2000 ಜಾಗತಿಕ ಕಂಪನಿಗಳಲ್ಲಿ ಶೇಕಡಾ 60ರಷ್ಟು ಕಂಪನಿಗಳು ಬೆಂಗಳೂರಿನಲ್ಲಿವೆ. ಇಲ್ಲಿ ಆಯಾ ಕಂಪನಿಗಳು ತಮ್ಮ ಕೇಂದ್ರವನ್ನು ಸ್ಥಾಪಿಸಿಕೊಂಡಿವೆ. ಈ ಕುರಿತ ವರದಿಯನ್ನು ರಾಜ್ಯ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಬಿಡುಗಡೆಗೊಳಿಸಿದ್ದಾರೆ.

ಭವಿಷ್ಯವನ್ನು ನಿರ್ಧರಿಸಬಲ್ಲ ಸಾಮರ್ಥ್ಯವುಳ್ಳ ಈ ನೂತನ ಎಐ ತಂತ್ರಜ್ಞಾನಗಳಲ್ಲಿ ಅಪ್ಲಿಕೇಶನ್ ಅಭಿವೃದ್ಧಿ ಮತ್ತು ನಿರ್ವಹಣೆ, ಡಿಜಿಟಲ್ ಸೇವೆಗಳು, ಐಟಿ ಸಲಹಾ, ಐಟಿ ಬೆಂಬಲ ಮತ್ತು ಐಟಿ ಮೂಲಸೌಕರ್ಯ ಕುರಿತು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಡೇಟಾ ಅನಾಲಿಟಿಕ್ಸ್, ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಸೆಕ್ಯುರಿಟಿ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್‌ನಂತಹ ಹೆಚ್ಚಿನ ಬೇಡಿಕೆಯೊಂದಿಗೆ ತಂತ್ರಜ್ಞಾನ ಮತ್ತು ಡಿಜಿಟಲ್ ಕೌಶಲ್ಯಗಳ ಆದ್ಯತೆಯನ್ನು ಇದರಲ್ಲಿ ಶಿಫಾರಸು ಮಾಡಲಾಗಿದೆ.

ಕರ್ನಾಟಕವು ಮುಂದಿನ ದಿನಗಳಲ್ಲಿ ಪ್ರಮುಖ GCC ಹಬ್ ಆಗುವ ಸಾಮರ್ಥ್ಯ ಹೊಂದಿದೆ. ಕರ್ನಾಟಕದಲ್ಲೇ ಬರೋಬ್ಬರಿ ಶೇ.15ಕ್ಕಿಂತ ಹೆಚ್ಚು ಫೋರ್ಬ್ಸ್ ಉದ್ಯಮಗಳಿಗೆ ಅವಕಾಶ ದೊರೆಯುತ್ತದೆ. 2030 ರ ವೇಳೆಗೆ, ಕರ್ನಾಟಕವು ಸುಮಾರು 330 ಫೋರ್ಬ್ಸ್ 2000 ಉದ್ಯಮಗಳ ನೆಲೆಯಾಗಬಹುದು ಎಂದು ಈಗಾಗಲೇ ತಜ್ಞರು, ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ಈ ಸಂದರ್ಭದಲ್ಲಿ, ಕರ್ನಾಟಕದಲ್ಲಿ ತಮ್ಮ ಕೇಂದ್ರಗಳನ್ನು ಸ್ಥಾಪಿಸಲು ಹೆಚ್ಚಿನ ಕಂಪನಿಗಳನ್ನು ಆಕರ್ಷಿಸಲು ರಾಜ್ಯ ಸರ್ಕಾರವು ಶೀಘ್ರದಲ್ಲೇ ‘ಗ್ಲೋಬಲ್ ಕೆಪಾಬಿಲಿಟಿ ಸೆಂಟರ್ (GCC)’ ನೀತಿ ‘ಯನ್ನು ಹೊರತರಲಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.

►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura

-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday

About The Author

Leave a Reply

Your email address will not be published. Required fields are marked *