ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಿಗಲಿ

3.7 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಚಿಂತಾಮಣಿಯಲ್ಲಿ ಮುಂದುವರಿದ ಫುಟ್‌ಪಾತ್ ಒತ್ತುವರಿ ತೆರುವು

ದೊಡ್ಡಬಳ್ಳಾಪುರ ಸಬ್ ರಿಜಿಸ್ಟಾçರ್ ಕಛೇರಿಗೆ ಕೃಷ್ಣಬೈರೇಗೌಡ ಭೇಟಿ

December 27, 2024

Ctv News Kannada

Chikkaballapura

ತೋಟ ಕಾಯುತ್ತಿರುವ ಸುಪ್ರಸಿದ್ಧ ನಟಿಮಣಿಗಳು

1 min read

ತೋಟ ಕಾಯುತ್ತಿರುವ ಸುಪ್ರಸಿದ್ಧ ನಟಿಮಣಿಗಳು
ಶಿಡ್ಲಘಟ್ಟ ಟಮೇಟೋ ತೋಟ ಕಾವಲಿಗೆ ನಿಂತಿದ್ದಾಳೆ ಸನ್ನಿಲಿಯೋನ್
ತೋಟಕ್ಕೆ ದೃಷ್ಟಿ ಗೊಂಬೆಗಳಾಗಿ ನಿಂತಿರುವ ರಚಿತಾರಾಮ್

ಇಡೀ ರಾಜ್ಯವೇ ಖುಷಿ ಪಡೋ ವಿಚಾರ. ಹಾಗಂತ ಯಾವುದೇ ನಟಿ ತಾಯಿಯಾಗುತ್ತಿರೋ ವಿಚಾರ ಅಲ್ಲ, ಬೆಡ್ ರೂಂ ಗೋಡೆಯ ಮೇಲಿರಬೇಕಾದ ಸುಪ್ರಸಿದ್ಧ ನಟಿಯರ ಚಿತ್ರಗಳು ತೋಟಗಳಲ್ಲಿ ರಾರಾಜಿಸುತ್ತಿವೆ. ಆ ನಟಿಯ ಅಭಿಮಾನಿ, ಅಭಿಮಾನಕ್ಕಾಗಿ ಹಾಕಿದ್ದಾನೆ ಅಂತ ಭಾವಿಸಬೇಡಿ. ಹಾಗೆ ತೋಟಕ್ಕೆ ನಟಿಯರ ಚಿತ್ರಗಳು ಬರೋದಕ್ಕೆ ಬೇರೆಯೇ ಕಾರಣವಿದೆ. ಆ ಕಾರಣ ಏನು ಅನ್ನೋದನ್ನು ನೀವೇ ನೋಡಿ.

ನಟಿ ಸನ್ನಿಲಿಯೋನ್ ಯಾರಿಗೆ ಪರಿಚಯ ಇಲ್ಲ ಹೇಳಿ, ವಿಶ್ವದಲ್ಲಿಯೇ ಕುಖ್ಯಾತಿ ಪಡೆದಿರುವ ಸನನಿಲಿಯೋನ್ ಇದೀಗ ಶಿಡ್ಲಘಟ್ಟದ ರೈತರೊಬ್ಬರ ಟೊಮೇಟೋ ತೋಟ ಕಾಯುತ್ತಿದ್ದಾರೆ. ಅಷ್ಟೇ ಅಲ್ಲ, ಮತ್ತೊಬ್ಬ ನಟಿ ರಚಿತಾರಾಮ್ ಇದ್ದಾಳಲ್ಲಾ, ಆಕೆಯೂ ಅದೇ ಟೊಮೇಟೋ ತೋಟದ ಕಾವಲಿಗೆ ನಿಂತಿದ್ದಾಳೆ. ಅರೇ ಇದೇನಿದು, ಇಷ್ಟು ಖ್ಯಾತ ನಟಿಯರು ಬಂದು ತೋಟದ ಕಾವಲು ಕಾಯೋ ಸ್ಥಿತಿ ಯಾಕೆ ಅಂತ ಗಾಬರಿಯಾಗಬೇಡಿ. ಇದಕ್ಕೆ ಕಾರಣ ಬೇರೇನೇ ಇದೆ.

ಈ ಹಿಂದೆ ತೋಟಗಳು ತುಂಬಾ ಸಮೃದ್ಧಿಯಾಗಿ ಬಂದರೆ ಅಂತಹ ತೋಟಗಳಿಗೆ ದೃಷ್ಟಿ ತಗಲುತ್ತೆ ಅನ್ನೋ ಒಂದು ನಂಬಿಕೆ ಇತ್ತು. ಅದು ಮೂಢನಂಬಿಕೆಯೋ, ನಂಬಿಕೆಯೋ ಗೊತತಿಲ್ಲ. ಆದರೆ ಪ್ರತಿ ತೋಟದಲ್ಲಿಯೂ ಒಂದು ಬೆದರು ಬೊಂಬೆ ನಿಲ್ಲಿಸುತ್ತಿದ್ದರು. ಅಂದರೆ ಯಾರೇ ಕೆಟ್ಟ ಕಣ್ಣಿನವರು ತೋಟದ ಕಡೆ ನೋಡುವುದಕ್ಕೂ ಮೊದಲು ಆ ಬೆದುರು ಬೊಂಬೆಯನ್ನು ನೋಡುತ್ತಾರೆ. ಹಾಗಾಗಿ ಕೆಟ್ಟ ದೃಷ್ಟಿ ಆ ಗೊಂಬೆಗೆ ತಗಲುತ್ತದೆ ಹೊರತು, ತೋಟ ಆ ಕೆಟ್ಟ ದೃಷಟಿಯಿಂದ ತಪ್ಪಿಸಿಕೊಳ್ಳುತ್ತದೆ ಎಂಬುದು ರೈತರ ನಂಬಿಕೆ. ಹಾಗಾಗಿಯೇ ಪ್ರತಿ ತೋಟದಲ್ಲಿಯೂ ಬಗೆ ಬಗೆಯ ಬೆಂದರು ಬೊಂಬೆಗಳನ್ನು ನಿಲ್ಲಿಸುತ್ತಿದ್ದರು.

ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ರೈತರೊಬ್ಬರು ತಮ್ಮ ಟೊಮೇಟೊ ತೋಟಕ್ಕೆ ದೃಷ್ಟಿ ಆಗಬಾರದೆಂದು ವಿನೂತನ ಉಪಾಯ ಹುಡುಕಿ ಗಮನ ಸೆಳೆದಿದ್ದಾರೆ. ಚಲನಚಿತ್ರ ನಟಿಯರ ಫೋಟೋಗಳನ್ನು ಕಟ್ಟಿ ಗಮನ ಸೆಳೆದಿದ್ದಾರೆ. ಈ ರೈತನ ಹೆಸರು ದೀಪು, ಜನರ ದೃಷ್ಟಿ ನಟಿಮಣಿಯರ ಕಡೆ ಹೋಗೋದರಿಂದ ಬೆಳೆಗೆ ಕೆಟ್ಟ ದೃಷ್ಟಿ ತಾಕಲ್ಲ ಎಂಬುದು ಈ ರೈತನ ಮುಂದಾಲೋಚನೆ. ಸಂಜು ವೆಡ್ಸ್ ಗೀತಾ ಭಾಗ ಎರಡರ ಶೂಟಿಂಗ್ ಇತ್ತೀಚೆಗಷ್ಟೇ ಶಿಡ್ಲಘಟ್ಟದಲ್ಲಿ ನಡೆದಿತ್ತು. ಅದರಲ್ಲಿ ನಾಯಕಿಯಾಗಿ ನಟಿಸುತ್ತಿರುವ ನಟಿ ರಚಿತಾ ರಾಮ್ ಚಿತ್ರಗಳನ್ನೇ ತನ್ನ ಟೊಮೇಟೋ ತೋಟದಲ್ಲಿ ಹಾಕಿದ್ದಾರೆ. ಶೂಟಿಂಗ್‌ಗೆoದು ಬಂದ ನಟಿಮಣಿಯನ್ನು ತೋಟದ ಕಾವಲಿಗೆ ಇರಿಸಿರುವುದಾಗಿ ರೈತ ನಗೆಚಟಾಕಿ ಹಾರಿಸುತ್ತಾರೆ.

ಟೊಮೇಟೋ ಎಂಬುದು ಅನಿಶ್ಚಿತತೆಯ ಬೆಳೆ. ಉತ್ತಮ ಬೆಳೆ ಬಂದಾಗ ಬೆಲೆ ಸಿಗೋದಿಲ್ಲ, ಬೆಲೆ ಬಂದಾಗ ಬೆಳೆ ಬರಲ್ಲ ಎಂಬ ಆತಂಕ ರೈತರನ್ನು ಸದಾ ಕಾಡುತ್ತಲೇ ಇದೆ. ಹಾಗಾಗಿ ಬೆಳೆ ಚೆನ್ನಾಗಿ ಬರಲಿ, ಬೆಲೆಯೂ ಸಿಗಲಿ ಎಂಬ ಆಸೆಯಿಂದ ಯಾರ ಕೆಟ್ಟ ದೃಷ್ಟಿಯೂ ಬೆಳೆ ಕಡೆ ಬೀಳಬಾರದೆಂದು ಎಚ್ಚರಿಕೆ ವಹಿಸುವರು ಈಗಲೂ ಇದ್ದಾರೆ. ಅಲ್ಲದೆ ತೋಟದಲ್ಲಿ ಜನರಿದ್ದಾರೆ ಎಂದು ತೋರಿಸಲು ಬೆದರುಗೊಂಬೆಗಳು, ದೃಷ್ಟಿಯಾಗದೇ ಇರಲಿ ಎಂದು ದೃಷ್ಟಿಗೊಂಬೆಗಳನ್ನು ಅಳವಡಿಸುವುದೆಲ್ಲ ರೈತರ ಸಹಜ ಕೆಲಸಗಳು.

ಟೊಮೇಟೋ ಬೆಳೆ ನಳನಳಿಸುತ್ತಿದೆ. ತೋಟಕ್ಕೆ ದೃಷ್ಟಿಯಾದರೆ ಏನು ಗತಿಹಾಗಾಗಿ ಇವರಿಗೆ ಹೊಳೆದಿದ್ದೇ ಸುಂದರ ನಟಿಯ ಚಿತ್ರ. ಹೌದು, ನಟಿಯರ ಫೋಟೋಗಳನ್ನು ತನ್ನ ತೋಟದಲ್ಲಿ ಕಟ್ಟಿ ಕುತೂಹಲ ಕೆರಳಿಸಿದ್ದಾರೆ. ತೋಟದ ಸುತ್ತ ರಸ್ತೆ ಬದಿಯಲ್ಲಿ ಜನರಿಗೆ ಕಾಣುವಂತೆ ನಟಿಯರ ಫೋಟೋಗಳನ್ನು ಹಾಕಲಾಗಿದೆ. ರೈತ ದೀಪು ಮಾತನಾಡಿ, ಹಲವು ಬಾರಿ ದೃಷ್ಟಿಗೊಂಬೆಗಳನ್ನಿಟ್ಟಿದ್ದೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಹಾಗಾಗಿ ನಟಿಯರ ಫೋಟೋಗಳನ್ನು ದೃಷ್ಟಿ ಗೊಂಬೆಗಳ ಜಾಗದಲ್ಲಿ ಹಾಕಿದ್ದೀನಿ. ಈ ಫೋಟೋಗಳನ್ನು ಜನ ನೋಡಿಕೊಂಡು ಖುಷಿಯಿಂದ ಮುಂದೆ ಹೋಗುತ್ತಾರೆ ಎಂದರು.

 

About The Author

Leave a Reply

Your email address will not be published. Required fields are marked *