ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಕೆಆರ್‌ಎಸ್ ಪಣ

ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಿಗಲಿ

3.7 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಚಿಂತಾಮಣಿಯಲ್ಲಿ ಮುಂದುವರಿದ ಫುಟ್‌ಪಾತ್ ಒತ್ತುವರಿ ತೆರುವು

December 27, 2024

Ctv News Kannada

Chikkaballapura

ರಾಜ್ಯ ಕಾಂಗ್ರೆಸ್ ಸರ್ಕಾರ ಡಬಲ್ ದಲಿತ ವಿರೋಧಿ

1 min read

ರಾಜ್ಯ ಕಾಂಗ್ರೆಸ್ ಸರ್ಕಾರ ಡಬಲ್ ದಲಿತ ವಿರೋಧಿ
ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ದಲಿತರಿಗೆ ಮೋಸ ಮಾಡುತ್ತಿರುವ ಸಿಎಂ
ದಲಿತರ ಹಣ ದುರ್ಬಳಕೆ ಮೂಲಕ ದಲಿತರಿಗೆ ಅನ್ಯಾಯ
ನಟ ಚೇತನ್, ಹರಿರಾಂ ರಾಜ್ಯ ಸರ್ಕಾರದ ವಿರುದ್ಧ ಆರೋಪ

ತಮ್ಮ ಹೇಳಿಕೆಗಳ ಮೂಲಕವೇ ವಿವಾದ ಸೃಷ್ಟಿಸುವ ನಟ ಚೇತನ್ ತಮ್ಮ ವರಸೆ ಬದಲಿಸಿದ್ದಾರಾ, ಈವರೆಗೂ ಇದ್ದ ಕಾಂಗ್ರೆಸ್ ಪಕ್ಷಪಾತಿ ಎಂಬ ಆರೋಪ ಅಳಿಸುವತ್ತ ದಿಟ್ಟ ಹೆಜ್ಜೆ ಹಾಕಿದ್ದಾರಾ, ಅಥವಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರಾ, ಇಷ್ಟೆಲ್ಲಾ ಪ್ರಶ್ನೆ ಯಾಕೆ ಬಂದು ಅಂತಾ ಯೋಚನೆ ಮಡಾಬೇಡಿ. ಇದಕ್ಕೆ ಕಾರಣ ಇದೆ. ನಟ ಚೇತನ್ ಮಾತ್ರವಲ್ಲ, ದಲಿತ ಪರ ಹೋರಾಟಗಾರ ಹರಿರಾಂ ಸೇರಿದಂತೆ ಹಲವರು ಇಂದು ಆಡಿದ ಮಾತುಗಳು ಈ ಪ್ರಶ್ನೆ ಎದುರಾಗಲು ಕಾರಣವಾಗಿದೆ. ಹಾಗಾದರೆ ಅವರು ಮಾತನಡಿದ್ದಾದರೂ ಏನು ಅಂತ ನೀವೇ ನೋಡಿ.

ನಟ ಚೇತನ್ ಈವರೆಗೂ ಬಿಡೆಪಿ ಮತ್ತು ಹಿಂದು ವಿರೋಧಿ ಹೇಳಿಕೆಗಳಿಂದಲೇ ಪ್ರಸಿದ್ಧಿಗೆ ಬಂದವರು. ಆದರೆ ಇದೀಗ ಅದೇ ಚೇತನ್ ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಅಣಿಯಾಗುತ್ತಿರೋದು ವಿಶೇಷ. ಇಂದು ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ನಟ ಚೇತನ್, ದಲಿತ ಪರ ಹೋರಾಟಗಾರ ಫ್ರೊ. ಹರಿರಾಂ ಸೇರಿದಂತೆ ಹಲವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಕಾಂಗ್ರೆಸ್ ಸರ್ಕಾರ ದುರಾಡಳಿತ ನಡೆಸುತ್ತಿದೆ, ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ದಲಿತರಿಗೆ ದ್ರೋಹ ಮಾಡುತ್ತಿದೆ ಎಂದು ಸರಣಿ ಆರೋಪ ಮಾಡಿದರು. ಅಷ್ಟೇ ಅಲ್ಲಾ, ಐದು ವಿಚಾರಗಳನ್ನು ಮುಂದಿಟ್ಟು ರಾಜ್ಯ ಕಾಗೆಂ್ರಸ್ ಸರ್ಕಾರ ಬಿಜೆಪಿಗಿಂತ ಹೆಚ್ಚು ದುರಾಡಳಿತ ನಡೆಸುತ್ತಿದೆ ಎಂದು ಕಿಡಿ ಕಾರಿದರು.

ಮೊದಲ ಆರೋಪವಾಗಿ ಪರಿಶಿಷ್ಟ ಜಾತಿಯವರ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಹಣವನ್ನು ಕಳೆದ ಎರಡು ವರ್ಷಗಳಲ್ಲಿ 25 ಸಾವಿರಕ್ಕೂ ಹೆಚ್ಚು ಮೊತ್ತವನ್ನು ಗ್ಯಾರೆಟಿಗಳಿಗೆ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ ಎಂದು ನಟ ಚೇತನ್ ಆರೋಪಿಸಿದರು. ಪರಿಶಿಷ್ಟರ ಹಣ ಗ್ಯಾರೆಂಟಿಗಳಿಗೆ ಬಳಕೆ ಮಾಡಿರೋದು ಖಂಡನೀಯ, ದಲಿತರ ಶಿಕ್ಷಣ, ಆರೋಗ್ಯ, ವಸತಿಗೆ ಬಳಕೆಯಾಗಬೇಕಿದ್ದ ಹಣವನ್ನು ಗ್ಯಾರೆಟಂಇಗಳಿಗೆ ಬಳಸಲಾಗುತ್ತಿದೆ. ಅಹಿಂದ ಸರ್ಕಾರ ಎಂದು ಅಧಿಕಾರಕ್ಕೆ ಬಂದು ಕಾಂಗ್ರೆಸ್ ಇದೀಗ ದಲಿತರ ಹಣ 25 ಸಾವಿರ ಕೋಟಿಗೂ ಹೆಚ್ಚು ಬಳಕೆ ಮಾಡಿ ದಲಿತರಿಗೆ ತೀರದ ಮೋಸ ಎಸಗಿದೆ ಎಂದು ಕಿಡಿ ಕಾರಿದರು.

ನ್ಯಾಯದ ಪರಿಕಲ್ಪನೆಗಾಗಿ ಮೀಸಲಿಟ್ಟ ಹಣ ಗ್ಯಾರೆಂಟಿಗೆ ಬಳಕೆ ಮಾಡಿರುವುದು ಅಪರಾಧ. ಇದು ನ್ಯಾಯದ ಪರಿಕಲ್ಪನೆಗೆ ಸರ್ಕಾರ ಮಾಡಿದ ಮೋಸ. ಚುನಾವಣೆಯಲ್ಲಿ ಗೆಲುವಿಗಾಗಿ, ಅಧಿಕಾರದ ಹಪಹಪಿಗಾಗಿ ಹಣ ದಲಿತರ ಹಣ ಬಳಕೆ ಮಾಡಲಾಗಿದೆ. ಶೋಷಿತ, ತಳ ಸಮುದಾಯಕ್ಕೆ ಅನ್ಯಾಯ ಎಸಗಲಾಗಿದೆ. ರಾಜ್ಯದಲ್ಲಿ ನಡೆದ ಕಳೆದ ವಿಧಾನಸಭಾ ಚುನಾವಣಯೆಲ್ಲಿ ಶೇ. ೮೦ರಷ್ಟು ದಲಿತರು ಮತ್ತು ಶೇ. 95 ರಷ್ಟು ಮುಸ್ಲಿಂರು ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ಆದರೆ ಸರ್ಕಾರ ಮಾತ್ರ ದಲಿತರ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಒಕ್ಕಲಿಗರಿಗಾಗಿ, ಲಿಂಗಾಯಿತರಿಗಾಗಿ ತಲಾ ಒಂದೊoದು ಪಕ್ಷ ಇದೆ. ಆದರೆ ದಲಿತರನ್ನು ಪ್ರತಿನಿಧಿಸುವ ಯಾವುದೇ ಪಕ್ಷ ಇಲ್ಲವಾಗಿದೆ ಎಂದು ಅಸಮಾಧಾನ ಹೊರಹಾಕಿದರು. ಇನ್ನು ವಾಲ್ಮೀಕಿ ನಿಗಮದಲ್ಲಿ ನಡೆದಿರುವ 187 ಕೋಟಿ ಹಗರಣಕ್ಕೆ ಸಂಬoಧಿಸಿ ಅಧಿಕಾರಿ ಚಂದ್ರಶೇಖರ್ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ರಾಜ್ಯ ಸರ್ಕಾರ ನೇಮಕ ಮಾಡಿದ್ದ ಎಸ್ ಐಟಿ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿಲ್ಲ, ಬದಲಿಗೆ ರಾಜ್ಯ ಸರ್ಕಾರದ ನಿರ್ದೇಶನದಂತೆ ನಡೆಯುತ್ತಿದೆ ಗಂಭೀರ ಆರೋಪ ಮಾಡಿದರು.

ಗಣಿ ಅಕ್ರಮದಲ್ಲಿ ಜೈಲಿಗೆ ಹೋಗಿದ್ದ ನಾಗೇಂದ್ರ ಎಂಬ ವ್ಯಕ್ತಿಗೆ ಸಚಿವ ಸ್ಥಾನವನ್ನೇ ನೀಡಬಾರದಿತ್ತು. ಅಂತಹ ವ್ಯಕ್ತಿ ದಲಿತರಿಗೆ ಸಿಗಬೇಕಾದ ಕೋಟಿ ಕೋಟಿ ಹಣ ದುರ್ಬಳಕೆ ಮಾಡಿಕೊಡಿದ್ದರೂ ಎಸ್‌ಐಟಿ ಯಾವುದೇ ಕ್ರಮ ಜರುಗಿಸಲು ಮುಂದಾಗಲಿಲ್ಲ. ಆದರೆ ಇಡಿ ಮಧ್ಯೆಪ್ರವೇಶದಿಂದ ಇದೀಗ ಮಾಜಿ ಸಚಿವ ನಾಗೇಂದ್ರ ಬಂಧನವಾಗಿದೆ. ಮತ್ತೊಬ್ಬ ಶಾಸಕ ಬಸವರಾಜ್ ದದ್ಧಲ್ ಅವರ ಬಂಧನವೂ ಆಗದುವ ನಿರೀಕ್ಷೆ ಇದೆ. ಆದರೆ ಎಸ್‌ಐಟಿ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗದೆ ಪ್ರಕರಣ ಮುಚ್ಚಿಹಾಕುವ ಕೆಲಸಕ್ಕೆ ಮುಂದಾಗಿತ್ತು ಎಂದು ಕಿಡಿ ಕಾರಿದರು.

ಎಸ್ ಐಟಿ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ, ಶಾಸಕ ದದ್ದಲ್ ಬಂಧನ ಆಗಬೇಕು, ನಿಗಮದ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಮುಡಾ ಹಗರದಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಚುಕ್ಕಿಯಾಗಿದೆ. ಈ ಹಿಂದೆ ಮುಡಾಗೆ ಸೇರಿದ ಜಮೀನು ದಲಿತರಿಗೆ ಸೇರಿದ್ದು ಎಂಬುದಕ್ಕೆ ದಾಖಲೆಗಳಿವೆ. ದಲಿತರಿಂದ ಕೇವಲ 6 ಲಕ್ಷಕ್ಕೆ ಖರೀದಿ ಮಾಡಿದ ಜಮೀನಿಗೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 64 ಕೋಟಿ ಕೇಳುತ್ತಿರೋದು ವಿಪರ್ಯಾಸ. ಈ ಪ್ರಕರಣದಲ್ಲಿ ಸಿಎಂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲವೂ ಅವರ ಗಮನಕ್ಕೆ ಬಂದೇ ನಡೆದಿವೆ ಎಂದರು.

ಪ್ರಸ್ತುತ ಮುಡಾ ಹಗರಣವನ್ನು ನ್ಯಾಯಾಂಗ ತನಿಖೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಆದರೆ ನ್ಯಾಯಾಂಗ ತನಿಖೆಯಿಂದಲೂಸತ್ಯ ಹೊರಬರಲುಸಾಧ್ಯವಿಲ್ಲ. ನ್ಯಾಯಾಂಗ ತನಿಖೆಯ ಸಮಿತಿಯೂ ಸರ್ಕಾರದ ಕೈಗೊಂಬೆಯಾಗುವ ಸಾಧ್ಯತೆ ಇದೆ. ಹಾಗಾಗಿ ಮುಡಾ ಪ್ರಕರಣ ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಸಿಬಿಐ ಮೂಲಕ ಮುಡಾ ಹಗರಣ ಪಾರದರ್ಶಕ ತನಿಖೆ ಆಗಿ, ಸತ್ಯಾಂಶ ಹೊರಬರಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಇದರ ಜೊತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಮೂಢನಂಬಿಕೆ ಬಿತ್ತುವ ಕೆಲಸಕ್ಕೂ ಮುಂದಾಗಿದೆ. ರಾಜ್ಯದ ಶಕ್ತಿಸೌಧ ವಿಧಾನಸೌಧದಲ್ಲಿ ಭುವನೇಶ್ವರಿಯ 25 ಅಡಿ ಪ್ರತಿಮೆ ಸ್ಥಾಪಿಸಿರೋದು ಮೌಢ್ಯದ ಸಂಕೇತವಾಗಿದೆ. ಇದು ಕನ್ನಡ ಪರ ಅಲ್ಲ, ಮೌಢ್ಯದ ಪರ ಆಲೋಚನೆಯಾಗಿದೆ. ಖಾಸಗಿ ವಲಯದಲ್ಲಿ ಉದ್ಯೋಗ ನೀಡಬೇಕು ಎಂಬುದು ಕನ್ನಡಪರ ಆದರೆ ಸರ್ಕಾರ ಅಂತಹ ಕೆಲಸ ಮಾಡದೆ ಮೌಢ್ಯ ಬಿತ್ತುವ ಕೆಲಸ ಮಾಡುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ವಿಧಾನ ಸೌಧ ಧಾರ್ಮಿಕ ಆವರಣ ಆಗುವ ಆತಂಕ ಎಂದುರಾಗಿದೆ ಎಂದರು.

ಇನ್ನು ಕುರಿ ಕಳವು ತಡೆಯಲು ಕುರಿ ಮಾಲೀಕರಿಗೆ ಬಂದೂಕು ಪರವಾನಿಗೆ ಆದೇಶ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದು ಅತ್ಯಂತ ಖಂಡನೀಯ. ಭಾರತ ಶಾಂತಿಯ ನಾಡು. ಇಲ್ಲಿ ಹಿಂಸೆಗೆ ಅವಕಾಶವಿಲ್ಲ. ಬುದ್ಧ, ಬಸವ, ಕನಕದಾಸರು ಅಹಿಂಸೆಯನ್ನು ಬೋಧಿಸಿದ್ದಾರೆ ಹೊರತು ಆಯುಧ ಹೋರಾಟವನ್ನು ಅವರು ಪ್ರೇರೇಪಿಸಿಲ್ಲ. ಕುರಿ ಕಾಯುವವರ ಕೈಗೆ ಬಂದೂಕು ನೀಡಿದರೆ ಅದು ಹಿಂಸೆಗೆ ದಾರಿಯಾಗಲಿದೆ. ಬಂದೂಕು ದುರುಪಯೋಗವಾಗಲಿದೆ. ಅಮೆರಿಕಾ ಅಧ್ಯಕ್ಷರ ಮೇಲೂ ಗುಂಡಿನ ದಾಳಿ ನಡೆದಿದೆ. ಇಂತಹ ಸಂದರ್ಭದಲ್ಲಿ ಬಂದೂಕು ಎಲ್ಲರಿಗೂ ನೀಡುವುದು ಮುಂದಿನ ದಿನಗಳಲ್ಲಿ ಅಪರಾಧ ಪ್ರಕರಣ ಹೆಚ್ಚುವುದಕ್ಕೆ ಮತ್ತು ಮನುಷ್ಯ ಮನುಷ್ಯರ ನಡುವೆ ಸಂಘರ್ಷಕ್ಕೆ ಕಾರಣವಾಗಲಿದೆ ಎಂದರು.

ಅಲ್ಲದೆ ಕಾಡಿನಲ್ಲಿ ಕುರಿ ಮೇಯಿಸಲು ಮತ್ತು ಅವುಗಳ ರಕ್ಷಣೆಗೆ ಬಂದೂಕು ಪರವಾನಿಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದು, ಭವಿಷ್ಯದ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಅರಣಯ್ ನಾಶವಾಗಿದ್ದು, ಕುರಿಗಳು ಅರಣ್ಯ ಪ್ರವೇಶದಿಂದ ಮತ್ತಷ್ಟು ಅರಣ್ಯ ನಾಶಕ್ಕೆ ಕಾರಣವಾಗುವ ಜೊತೆಗೆ ಕುರಿಗಾಹಿಗಳು ಬಂದೂಕು ದುರಪಯೋಗಕ್ಕೂ ಕಾರಣವಾಗಲಿದೆ. ಗೋಮಾಳಗಳನ್ನು ಒತ್ತುವರಿಗೆ ಬಿಟ್ಟು, ಅರಣ್ಯಗಳಲ್ಲಿ ಕುರಿ ಮೇಯಿಸಲು ಅವಕತಾಶ ನೀಡಲು ಮುಂದಾಗಿರುವ ಸರ್ಕಾರದ ಕ್ರಮ ಖಂಡನೀಯ. ಹಾಗಾಗಿ ಗೋಮಾಳದಲ್ಲಿಯೇ ಕುರಿ ಮೇಯಿಸಲು ಅವಕಾಶ ನೀಡಬೇಕು ಮತ್ತು ಬಂದೂಕು ಪರವಾನಿಗೆ ನೀಡುವ ಆದೇಶ ನೀಡಬಾರದು ಎಂದು ಒತ್ತಾಯಿಸಿದರು.

ದಲಿತಪರ ಹೋರಾಟಗಾರ ಹರಿರಾಂ ಮಾತನಾಡಿ, ಆಂಧ್ರಪ್ರದೇಶ ಸರ್ಕಾರ ದಲಿತರಿಗೆ ಅತಿ ಹೆಚ್ಚು ಹಣ ಮೀಸಲಿಟ್ಟ ಮೊದಲ ಸರ್ಕಾರವಾಗಿದೆ ಹೊರತು ಕರ್ನಾಟಕ ಸರ್ಕಾರವಲ್ಲ. ಕಳೆದ 9 ವರ್ಷಗಳಲ್ಲಿ ರಾಜ್ಯದಲ್ಲಿ 70 ಸಾವಿರ ಕೋಟಿಗೂ ಹೆಚ್ಚು ಹಣ ದುರ್ಬಳಕೆಯಾಗಿರುವ ಬಗ್ಗೆ ಸರ್ಕಾರವೇ ಒಪ್ಪಿದೆ. ನಿಗಮಗಳಿಂದ ಜನರಿಗೆ ಅನುಕೂಲವಾಗುತ್ತಿಲ್ಲ, ಬದಲಿಗೆ ನಾಯಕರ ಜೇಬು ತುಂಬುತ್ತಿದೆ. ಇದು ಜನರ ಜೇಬಿಗೆ ಕೈ ಹಾಕಿರುವ ಪಿಕ್ ಪಾಕೆಟ್ ಸರ್ಕಾರ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದಲಿತರಿಗೆ ಆದಾಯ ಬರುವ ಯಾವುದೇ ಯೋಜನೆ ಮಾಡದ ಸರ್ಕಾರ ದುಂದುವೆಚ್ಚಗಳ ಯೋಜನೆಗಳನ್ನು ಮಾಡುತ್ತಿದೆ.
ನ್ಯಾಯ ಕೇಳಲು ಹೋದ ದಲಿತರನ್ನು ಬಂಧಿಸಿ ಕೇಸು ಹಾಕಿದ್ದಾರೆ, ಮಾಲೂರು ಶಾಸಕ ನಂಜೇಗೌಡ ಹಾಲು ಒಕ್ಕೂಟದ ನೇಮಕ ವಿಚಾರದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ. ಬಸವರಾಜ ದದ್ದಲ್ ಮತ್ತು ಸಚಿವರಾಗಿದ್ದ ನಾಗೇಂದ್ರ ವಾಲ್ಮೀಕಿ ಹಗರಣದಲ್ಲಿ ಭಾಗದಿಯಾಗಿ ಜೈಲಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿ, ಅಧಿಕಾರಕ್ಕೆ ಬಂದು, ಒಂದು ವರ್ಷದಲ್ಲಿಯೇ ಹಗರಣಗಳ ಸರಮಾಲೆಯನ್ನೇ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.

ಪ್ರಸ್ತುತ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಜಾಪ್ರಭುತ್ವ ಇಲ್ಲ, ಬದಲಿಗೆ ನಿರಂಕುಶ ಆಡಳಿತ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ದಲುತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಗೃಹ ಸಚಿವ ಪರಮೇಶ್ವರ್ ಅವರಿಗೆ ಅವರ ಸಂಪುಟದ ಬಗ್ಗೆಯೇ ಅರಿವಿಲ್ಲ. ಸಿದ್ದರಾಮಯ್ಯ ಮೌನಕ್ಕೆ ಶರಣಾಗಿದ್ದಾರೆ. ದಲಿತ ಸಂಘಟನೆಗಳು ಮೌನವಹಿಸಿರುವುದು ದೊಡ್ಡ ದುರಂತ. ಅಷ್ಟೇ ಅಲ್ಲ, ಸರ್ಕಾರದ ಲೋಪಗಳ ಬಗ್ಗೆ ದಲಿತ ಸಂಘಟನೆಗಳು ಮೌನವಾಗಿರೋದು ದೇಶದ್ರೋಹದ ಮನಸ್ಥಿತಿ ಎಂದು ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಬಿಜೆಪಿಗಿಂತ ಡಬಲ್ ದಲಿತ ವಿರೋಧಿಯಾಗಿದೆ. ದಲಿತ ಸಂಘಟನೆಗಳು ಯಾವುದೇ ಪಕ್ಷದ ಪರ ಇರಬಾರದು. ವಿರೋಧ ಪಕ್ಷಗಳಾಗಿ ಹೋರಾಟ ನಡೆಸಬೇಕು. ಆದರೆ ಪ್ರಸ್ತುತ ರಾಜ್ಯದಲ್ಲಿ ದಲಿತ ಸಂಘಟನೆಗಳು ಮೌನಕ್ಕೆ ಜಾರಿರೋದು ಅಪಾಯಕಾರಿ ಸೂಚನೆ ಎಂದು ಆತಂಕ ವ್ಯಕ್ತಪಡಿಸಿದರು.

 

About The Author

Leave a Reply

Your email address will not be published. Required fields are marked *