46 ವರ್ಷಗಳ ನಂತರ ಜಗನ್ನಾಥನ ರತ್ನ ಭಂಡಾರದ ಓಪನ್
1 min read
ವಿಶ್ವ ಪ್ರಸಿದ್ದ ಪುರಿ ಜಗನ್ನಾಥ ದೇವಾಲಯದ ಆವರಣದಲ್ಲಿರುವ ರತ್ನ ಭಂಡಾರವನ್ನು 46 ವರ್ಷಗಳ ನಂತರ ಇದೇ ಮೊದಲ ಬಾರಿಗೆ ತೆರೆಯಲಾಗಿದ್ದು, ಭಂಡಾರದಲ್ಲಿ ರಾಶಿ ರಾಶಿ ಚಿನ್ನಾಭರಣಗಳು ಪತ್ತೆಯಾಗಿವೆ.
ಒಡಿಶಾ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ನೀಡಿದ ವಾಗ್ದಾನದಂತೆ ಮದ್ಯಾಹ್ನ 1.28ಕ್ಕೆ ಸರಿಯಾಗಿ 1978 ರ ನಂತರ ಇದೇ ಮೊದಲ ಬಾರಿಗೆ ರತ್ನ ಭಂಡಾರ ತೆರೆಯಲಾಯಿತು.
ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಸೇವಾದಳದವರು, ಎಎಸ್‌ಐ ಪ್ರತಿನಿಧಿಗಳು, ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.ರಾಜ್ಯ ಸರ್ಕಾರವು ರಚಿಸಿದ್ದ ನ್ಯಾಯಮೂರ್ತಿ ಬಿಸ್ವಾಸ್ ನೇತೃತ್ವದ 16 ಸದಸ್ಯರ ಉನ್ನತ ಮಟ್ಟದ ಸಮಿತಿಯು ಜುಲೈ 14ರಂದು ರತ್ನ ಭಂಡಾರವನ್ನು ತೆರೆಯಲು ಸೂಚಿಸಿತ್ತು. ಸಮಿತಿ ಸೂಚನೆ ಮೇರೆಗೆ ಇಂದು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಮೊದಲು ದೇವಾಲಯದ ಒಳಗೆ ಲೋಕನಾಥ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಭಂಡಾರ ತೆರೆಯಲಾಯಿತು.
ದೇವಸ್ಥಾನದ ಒಳಗೆ ಹಾವುಗಳು ಇರುವ ಬಗ್ಗೆ ಶಂಕೆ ಇದ್ದ ಕಾರಣ ಹಾವು ಹಿಡಿಯುವವರನ್ನು ಭಂಡಾರಕ್ಕೆ ಕರೆದೊಯ್ಯಲಾಗಿತ್ತು.ದೇವಸ್ಥಾನದಲ್ಲಿನ ನಿಧಿಯನ್ನು ನಾಗಸರ್ಪಗಳು ಕಾಯುತ್ತವೆ ಎಂಬುದು ಪ್ರತೀತಿ. ಪುರಿ ಜಗನ್ನಾಥನ ಭಂಡಾರವನ್ನು ಹಾವುಗಳು ಕಾಯುತ್ತಿವೆ ಎಂದು ನಂಬಲಾಗಿದೆ. ಹೀಗಾಗಿ, ಹಾವು ಹಿಡಿಯುವ ತಂಡವನ್ನು ಮೊದಲು ದೇವಾಲಯದ ಒಳಗೆ ಕಳುಹಿಸಿ ನಂತರ ಉಳಿದವರು ಭಂಢಾರ ಪ್ರವೇಶಿಸಿದರು.
ಹಾವುಗಳ ಭಯದ ಜೊತೆಗೆ ಶಾಪದ ಭೀತಿಯೂ ಇರುವುದರಿಂದ ಈವರೆಗೂ ಭಂಡಾರದ ಗೊಡವೆಗೆ ಹೋಗಿರಲಿಲ್ಲ. ಇದೀಗ 1978ರ ನಂತರ ಮೊದಲ ಬಾರಿಗೆ ರತ್ನ ಭಂಡಾತ ಆಂತರಿಕ ರಹಸ್ಯ ಕೋಣೆಯನ್ನು ತೆರೆಯಲಾಯಿತು.
ಭಂಡಾರದಲ್ಲಿ 500 ಕೆಜಿಗೂ ಹೆಚ್ಚು ಚಿನ್ನ ಮತ್ತು ಬೆಳ್ಳಿ ಆಭರಣಗಳಿರುವುದು ಕಂಡುಬಂದಿದೆ. ಇದರಲ್ಲಿ ಬಲಭದ್ರ, ಜಗನ್ನಾಥ ಮತ್ತಿತರ ದೇವರುಗಳ ಆಭರಣಗಳು ಹಾಗೂ ರಾಜ ಮಹರಾಜರು ಜಗನ್ನಾಥನಿಗೆ ಅರ್ಪಿಸಿದ್ದ ಕೋಟ್ಯಂತರ ರೂ. ಬೆಲೆ ಬಾಳುವ ಆಭರಣಗಳು ಇರುವುದು ದೃಢಪಟ್ಟಿದೆ.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday