ಕೊನೆಗೂ ವಿದ್ಯುತ್ ದೀಪದ ಬೆಳಕು ಕಂಡ ಗ್ರಾಮಸ್ಥರು
1 min read
ಕೊನೆಗೂ ವಿದ್ಯುತ್ ದೀಪದ ಬೆಳಕು ಕಂಡ ಗ್ರಾಮಸ್ಥರು
ಇದು ಸಿಟಿವಿ ನ್ಯೂಸ್ ಬಿಗಿ ಇಂಪ್ಯಾಕ್ಟ್
ಮುಖ್ಯಮoತ್ರಿಗಳ ಜಿಲ್ಲೆಯ ಕುಗ್ರಾಮಕ್ಕೆ ಕೊನೆಗೂ ಬೆಳಕಿನ ವ್ಯವಸ್ಥೆ
ಅದು ಸಾಸಂಕೃತಿಕ ನಗರಿ ಮೈಸೂರು ಜಿಲ್ಲೆಯ ಒಂದು ಪುಟ್ಟ ಹಳ್ಳಿ. ಸಾಲದೆಂಬoತೆ ನಾಡಿನ ದೊರೆ ಮುಖ್ಯಮಂತ್ರಿ ಇದ್ದಾರಲ್ಲ, ಸಿದ್ದರಾಮಯ್ಯ, ಅವರ ತವರು ಜಿಲ್ಲೆ. ಅಷ್ಟೇ ಅಲ್ಲಾ, ರಾಜ್ಯ ಸಚಿವ ಸಂಪುಟದಲ್ಲಿ ಪ್ರತಿಷ್ಠಿತ ಸಚಿವರಾಗಿರುವ ಎಚ್.ಸಿ. ಮಹದೇವಪ್ಪ ಅವರು ಉಸ್ತುವಾರಿ ವಹಿಸಿರುವ ಜಿಲ್ಲೆಯೂ ಹೌದು. ಆದರೆ ಇಷ್ಟೆಲ್ಲಾ ಕೀರ್ತಿ ಪತಾಕೆಗಳಿರುವ ಈ ಜಿಲ್ಲೆಯ ಗ್ರಾಮವೊಂದು ಇಂದಿಗೂ ಬೆಳಕು ಕಂಡಿಲ್ಲ ಎಂದರೆ ನಂಬ್ತೀರಾ, ಈ ಬಗ್ಗೆ ಸಿಟಿವಿ ನ್ಯೂಸ್ ವರದಿ ಮಾಡುವ ಮೂಲಕ ಬೆಳಕು ಚೆಲ್ಲಿತ್ತು. ಈ ವರದಿಗೆ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಕೊನೆಗೂ ಆಗ್ರಮಕ್ಕೆ ವಿದ್ಯುತ್ ಬೆಳಕು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದರೆ ಏನು ಆ ಸ್ಟೋರಿ ಅಂತೀರಾ, ನೀವೇ ನೋಡಿ.
ಹೌದು ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುತ್ತಿರುವ ಜಿಲ್ಲೆಯ ಪುಟ್ಟ ಹಳ್ಳಿ. ಅಂತಹ ಹಳ್ಳಿಗೆ ಈವರೆಗೂ ವಿದ್ಯುತ್ ಸಂಪರ್ಕವೇ ಕಲ್ಪಿಸಿಲ್ಲ. ಇದರಿಂದ ಮಕ್ಕಳ ಓದಿಗೆ ತೀವ್ರ ಸಂಕಷ್ಟ ಎದುರಾಗಿದ್ದರೆ, ರಾತ್ರಿಯ ವೇಳೆ ಕಾಡು ಪ್ರಾಣಿಗಳು ಮತ್ತು ಕಳ್ಳರ ಭೀತಿಯಲ್ಲಿಯೇ ಜೀವನ ನಡೆಸುವ ದುಸ್ಥಿತಿಯಲ್ಲಿ ಆ ಗ್ರಾಮದ ಜನರು ಬದುಕುತ್ತಿರುವ ಬಗ್ಗೆ ಸಿಟಿವಿ ನ್ಯೀಸ್ ಬೆಳಕು ಚೆಲ್ಲಿತ್ತು. ಇದರಿಂದ ಆ ಗ್ರಾಮದ ಜನತೆಗೆ ಇದೀಗ ಬೆಳಕಿನ ಭಾಗ್ಯ ಸಿಕ್ಕಿದ್ದು, ಗ್ರಾಮಸ್ಥರು ಸ್ಟಿವಿ ನ್ಯೂಸ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ ಬಂದು 76 ವರ್ಷಗಳೇ ಕಳೆದರು ರಾಜ್ಯದ ಮುಖ್ಯಮುಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿಯೇ ಇನ್ನೂ ಬೆಳಕಿನ ಭಾಗ್ಯ ಕಾಣದ ಕುಗ್ರಾಮ ಎಂದು ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಟ್ಟವಾಡಿ ಗ್ರಾಮ ಕಳೆದ 15 ವರ್ಷಗಳಿಂದ ವಿದ್ಯುತ್ ದೀಪವಿಲ್ಲದೆ ನಿವಾಸಿಗಳು ಪರದಾಡುತ್ತಿರುವ ಬಗ್ಗೆ ಸಿ.ಟಿವಿ ನ್ಯೂಸ್ ನಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು.
ಈ ವರದಿಯಿಂದ ಎಚ್ಚೆತ್ತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಟ್ಟವಾಡಿ ಗ್ರಾಮದ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ಕೊನೆಗೂ ಕಲ್ಪಿಸಿದ್ದಾರೆ. ಇದು ಸಿಟಿವಿ ನ್ಯೂಸ್ ವರದಿಯ ಫಲಶೃತಿಯಾಗಿದೆ. ಗಟ್ಟವಾಡಿ ಗ್ರಾಮದ ಜನತಾ ಕಾಲೋನಿಗೆ ಸುಮಾರು 15 ವರ್ಷಗಳಿಂದ ವಿದ್ಯುತ್ ದೀಪ ಇಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಮೇಣದ ಬತ್ತಿ ಹಚ್ಚಿಕೊಂಡು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು.
ವಿದ್ಯುತ್ ಕಂಬಗಳನ್ನು ಕಲ್ಪಿಸುವಂತೆ 15 ವರ್ಷಗಳಿಂದ ಗ್ರಾಮಸ್ಥರು ಕಚೇರಿಗಳಿಗೆ ಅಲೆದಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ಸಿ ಟಿವಿ ನ್ಯೂಸ್ ವಾಹಿನಿಯಲ್ಲಿ ಜುಲೈ 3 ರಂದು ಸುದ್ದಿ ಪ್ರಸಾರ ಮಾಡಿದ ಪರಿಣಾಮ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಚೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸುಮಾರು 9 ವಿದ್ಯುತ್ ಕಂಬಗಳನ್ನು ನೆಟ್ಟು ವಿದ್ಯುತ್ ಸಂಪರ್ಕವನ್ನು ಗ್ರಾಮಕ್ಕೆ ಕಲ್ಪಿಸಿದ್ದಾರೆ. ಇದರಿಂದ ಸಂತಸ ವ್ಯಕ್ತಪಡಿಸಿದ ನಿವಾಸಿಗಳು ವಾಹಿನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದು ಸಿ ಟಿವಿ ನ್ಯೂಸ್ ವರದಿಯ ಫಲಶೃತಿಯಾಗಿದೆ.