ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಕೆಆರ್‌ಎಸ್ ಪಣ

ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಿಗಲಿ

3.7 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಚಿಂತಾಮಣಿಯಲ್ಲಿ ಮುಂದುವರಿದ ಫುಟ್‌ಪಾತ್ ಒತ್ತುವರಿ ತೆರುವು

December 28, 2024

Ctv News Kannada

Chikkaballapura

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಛೇರಿಗೆ ರೈತರಿಂದ ಮುತ್ತಿಗೆ

1 min read

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಛೇರಿಗೆ ರೈತರಿಂದ ಮುತ್ತಿಗೆ
ಹತ್ತಾರು ಟ್ರಾಕ್ಟರ್‌ಗಳ ಮೂಲಕ ಡಿಸಿ ಕಛೇರಿಗೆ ಮುತ್ತಿಗೆ
ಡಿಸಿ ಕಛೇರಿಗೆ ಮುತ್ತಿಗೆ ವೇಳೆ ಪೊಲೀಸರು, ರೈತರ ನಡುವೆ ನೂಕುನುಗ್ಗಲು
ಕೆಲ ಕಾಲ ಉದ್ರಿಕ್ತ ಪರಿಸ್ಥಿತಿ ನಿರ್ಮಾಣ, ದನಗಳೊಂದಿಗೆ ರೈತರ ಧರಣಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಇಂದು ಹಮ್ಮಿಕೊಡಂಇದ್ದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಕಾರ್ಯಕ್ರಮ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಸಿತ್ತು. ಟ್ರಾಕ್ಟರ್ ಹಾಗೂ ದನಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿದ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಪೊಲೀಸಸರು ಮತ್ತು ರೈತರ ನಡುವೆ ನೂಕುನುಗ್ಗಲು ನಡೆದು ಕೆಲ ಕಾಲ ಉದ್ರಿಕ್ತ ಪರಿಸ್ಥಿತಿ ನಿರ್ಮಾಣ ಮಾಡಿತ್ತು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಇಂದು ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಕಾರ್ಯಕ್ರಮ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಸಿತ್ತು. ಟ್ರಾಕ್ಟರ್ ಹಾಗೂ ದನಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿದ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಪೊಲೀಸಸರು ಮತ್ತು ರೈತರ ನಡುವೆ ನೂಕುನುಗ್ಗಲು ನಡೆದು ಕೆಲ ಕಾಲ ಉದ್ರಿಕ್ತ ಪರಿಸ್ಥಿತಿ ನಿರ್ಮಾಣ ಮಾಡಿತ್ತು. ಜಾನುವಾರುಗಳೊಂದಿಗೆ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿದ ರೈತರು ಜಿಲ್ಲಾಧಿಕಾರಿಗಳ ಕ್ರಮ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಇಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಛೆರಿಗೆ ಮುತ್ತಿಗೆ ಹಾಕಿದ್ರು, ಡಿಸಿ ಕಛೇರಿಗೆ ಮುತ್ತಿಗೆ ಹಾಕಲು ಹೋದ ರೈತರನ್ನು ತಡೆಯಲು ಹೋದ ಪೊಲೀಸರು ಹಾಗು ರೈತರ ನಡುವೆ ನೂಕು ನುಗ್ಗಲು ಏರ್ಪಟ್ಟು ಡಿಸಿ ಕಛೇರಿ ಬಳಿ ಹೈಡ್ರಾಮವೇ ನಡೆದುಹೋಯಿತು. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕುವ ವೇಳೆ ರೈತರು ಹಾಗು ಪೊಲೀಸರ ನುಡವೆ ನೂಕಾಟ ತಳ್ಳಾಟ ಏರ್ಪಟ್ಟು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ಹಾಲು ಉತ್ಪಾದನೆಗೆ ಅಗತ್ಯವಿರುವ ಪಶು ಆಹಾರದ ಬೆಲೆ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ರೈತರು ಉತ್ಪಾದಿಸುವ ಹಾಲಿನ ಧರದಲ್ಲಿ ಎರಡು ರೂಪಾಯಿ ಖಡಿತ ಮಾಡಿದೆ. ಇದರಿಂದ ರೈತರಿಗೆ ನಷ್ಟ ಉಂಟುಮಾಡಿದೆ. ಇದನ್ನು ವಿರೋಧಿಸಿ ರೈತರು ಇಂದು ಬೆಳಗ್ಗೆ ಟ್ರಾರ್ಕ್ಟಗಳ ಮೂಲಕ ಚಿಕ್ಕಬಳ್ಳಾಪುರ ಡಿಸಿ ಕಛೇರಿಗೆ ಮುತ್ತಿಗೆ ಹಾಕಿದ್ರು. ಡಿಸಿ ಕಛೇರಿ ಎದುರು ಹಸುಗಳನ್ನು ಕಟ್ಟಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು.

ಸರಕಾರ ರೈತರನ್ನು ದರೋಡೆ ಮಾಡುತ್ತಿದೆ ಎಂದು ಆಕ್ರೋಶ ಹೊರ ಹಾಕುತ್ತಲೇ ಮಾತು ಆರಂಭಿಸಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಪ್ರಸ್ತುತ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ ನಡೀಉತ್ತಿರುವ ಬೆಲೆಯೇ ತೀರಾ ಕಡಿಮೆ ಇದೆ. ಹಾಲು ಉತ್ಪಾದನೆಗೆ ರೈತ ಮಾಡುವ ವೆಚ್ಚ ಲೆಕ್ಕ ಹಾಕಿ, ಸ್ವಾಮಿನಾಥನ್ ವರದಿಯಂತೆ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 100 ರುಪಾಯಿ ನೀಡಬೇಕು, ಆದರೆ ರಾಜ್ಯ ಸರ್ಕಾರ ಮಾತ್ರ ಗ್ರಾಹಕರಿಗೆ 2 ರುಪಾಯಿ ಹೆಚ್ಚಿಸುವ ಜೊತೆಗೆ ರೈತರಿಗೆ 2 ರುಪಾಯಿ ಕಡಿತ ಮಾಡಿ, ರಾಜ್ಯ ಸರ್ಕಾರ ಲೂಟಿ ಸರ್ಕಾರವಾಗಿದೆ ಎಂದು ಆರೋಪಿಸಿದರು.

ಯಾವುದೇ ಜನಪರ ಸರ್ಕಾರ ರೈತರ ಸಮಸ್ಯೆಗಳನ್ನು ಸ್ಥಳಕ್ಕೆ ಬಂದು ಆಲಿಸಬೇಕು. ಸಂಬoಧಪಟ್ಟವರು ಬಂದು ರೈತರ ಅಹವಾಲು ಸ್ವೀಕರಿಸಬೇಕು. ಅದರ ಬದಲಿಗೆ ಪ್ರಸ್ತುತ ರಾಜ್ಯ ಸರ್ಕಾರ ಬೀದಿಯಲ್ಲಿ ನಿಂತು ಅರ್ಜಿ ಕೊಟ್ಟು ಹೋಗಿ ಎಂದು ಹೇಳುತ್ತಿರುವುದು ವಿಪರ್ಯಾಸ. ಜಿಲ್ಲಾಡಳಿತ ಭವನ ಸೇರಿ ಜಿಲ್ಲಾಧಿಕಾರಿ ಕಚೇರಿ ಜನರಿಗೆ ಸೇರಿದ್ದು, ಕೇಳೋದು ನಮ್ಮ ಹಕ್ಕು. ಅಧಿಕಾರಿಗಳ ನಿರ್ಲಕ್ಷಕ್ಕೆ ಸರಿಯಾದ ತಿಳಿವಳಿಕೆ ಹೇಳಿ ಹೋಗಬೇಕಿದೆ ಎಂದು ಟ್ರಾಕ್ಟರ್ ಮತ್ತು ಜಾನುವಾರುಗಳೊಂದಿಗೆ ಜಿಲ್ಲಾಡಳಿತ ಭವನಕ್ಕೆ ನುಗ್ಗಿರುವುದಾಗಿ ಅವರು ಸಮರ್ಥಿಸಿಕೊಂಡರು.

ಇನ್ನು ಕೆಐಎಡಿಬಿ ಎಂಬುದು ಒಂದು ಬ್ರೋಕರ್ ಏಜೆನ್ಸಿ, ಕಳೆದ ೨೦ ವರ್ಷದಿಂದ ಸರ್ಕಾರ ಪಡೆದ ಲಕ್ಷಾಂತರ ಎಕರೆ ಭೂಮಿ ಏನಾಯಿತು, ಹಾಗೆ ವಶಕ್ಕೆ ಪಡೆದ ಭೂಮಿಯಲ್ಲಿ ಶೇ.25ರಷ್ಟೂ ಕೈಗಾರಿಕೆಗಳಿಗೆ ಬಳಕೆಯಾಗಿಲ್ಲ. ಬಹುತೇಕ ಎಲ್ಲ ಭೂಮಿ ರಿಯಲ್ ಎಸ್ಟೇಟ್‌ಗೆ ಪಾಲಾಗಿದೆ ಎಂದು ಆರೋಪಿಸಿದರು. ಸರ್ಕಾರ ರೈತರನ್ನು ದರೋಡೆ ಮಾಡಲು ಹೊರಟಿದೆ, ಈಗ ಹಾಲಿಗೆ ನೀಡುತ್ತಿರೋ ಬೆಲೆಯೂ ನ್ಯಾಯೋಚಿತವಲ್ಲ, ಕೊಡುತ್ತಿರೋದರಲ್ಲಿಯೂ 2 ರುಪಾಯಿ ಕಡಿತ ಮಾಡಿದರೆ ರೈತರ ಪಾಡೇನು ಎಂದು ಪ್ರಶ್ನಿಸಿದರು.
ಹಾಗಾಗಿ ರಾಜ್ಯ ಕಾಂಗ್ರೆಸ್ ಕೂಡಲೇ ತನ್ನ ಧೋರಣೆ ಕೈಬಿಡಬೇಕು. ಈಗ ರೈತರಿಗೆ ಕಡಿತ ಮಾಡಿರುವ ೨ ರುಪಾಯಿ ಬೆಲೆಯ ಆದೇಶ ವಾಪಸ್ ಪಡೆದು, ಕೂಡಲೇ ಮೊದಲು ನೀಡುತ್ತಿದ್ದ ಬೆಲೆಯಲ್ಲಿಯೇ ರಾತರಿಂದ ಹಾಲು ಖರೀದಿಸಬೇಕು. ಅಲ್ಲದೆ ಅವೈನಿಕ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *