ಪ್ರಾಣಿ ಪ್ರೇಮಿ, ಹಸಿರು ಶಕ್ತಿಯ ಪ್ರಚಾರಕ; ಇಲ್ಲಿದೆ ಮದುಮಗ ಅನಂತ್ ಅಂಬಾನಿ ಬಗೆಗಿನ ಆಸಕ್ತಿದಾಯಕ ಮಾಹಿತಿ
1 min readಜುಲೈ 12 ಶುಕ್ರವಾರ ದೇಶದ ಎಲ್ಲರ ಕಣ್ಣುಗಳು ರಿಲಯನ್ಸ್ ಇಂಡಸ್ಟ್ರೀಸ್‌ನ (Reliance Industries) ಅಧ್ಯಕ್ಷರಾದ ಮುಕೇಶ್ ಅಂಬಾನಿ ( Mukesh Ambani) ಮತ್ತು ಅವರ ಪತ್ನಿ ನೀತಾ ಅಂಬಾನಿ (Nita Ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani) ಮೇಲೆ ಇದೆ.
ಜೂನಿಯರ್ ಅಂಬಾನಿ ಎನ್‌ಕೋರ್ ಹೆಲ್ತ್‌ಕೇರ್ ಸಿಇಒ ವೀರೇನ್ ಮರ್ಚೆಂಟ್ ಪುತ್ರಿ ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಿದ್ದಾರೆ.
ಅಮೆರಿಕಾದ ಬ್ರೌನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ ಅನಂತ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಎನರ್ಜಿ ವಿಭಾಗದ ಕಾರ್ಯನಿರ್ವಾಹಕ ಉಸ್ತುವಾರಿಯಾಗಿದ್ದಾರೆ. ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್, ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್, ರಿಲಯನ್ಸ್ ನ್ಯೂ ಎನರ್ಜಿ ಲಿಮಿಟೆಡ್ ಮತ್ತು ರಿಲಯನ್ಸ್ ನ್ಯೂ ಸೋಲಾರ್ ಎನರ್ಜಿ ಲಿಮಿಟೆಡ್‌ನಲ್ಲಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸೆಪ್ಟೆಂಬರ್ 2022 ರಿಂದ ರಿಲಯನ್ಸ್ ಫೌಂಡೇಶನ್ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್‌ನ ಎನರ್ಜಿ ಹಾಗೂ ಮೆಟಿರೀಯಲ್ ಬ್ಯುಸಿನೆಸ್ ವಿಸ್ತರಣೆ ಮತ್ತು ನವೀಕರಿಸಬಹುದಾದ ಮತ್ತು ಹಸಿರು ಶಕ್ತಿಯಲ್ಲಿ ಅದರ ಜಾಗತಿಕ ಕಾರ್ಯಾಚರಣೆಗಳನ್ನು ಅಂಬಾನಿ ಕುಡಿ ನಡೆಸುತ್ತಿದ್ದಾರೆ. ಅನಂತ್ 2035 ರ ವೇಳೆಗೆ ನೆಟ್ ಕಾರ್ಬನ್ ಝೀರೋ ಕಂಪನಿಯನ್ನಾಗಿ ಮಾಡುವ ರಿಲಯನ್ಸ್ ಕಂಪನಿಯ ಪ್ರಯಾಣವನ್ನು ಮುನ್ನಡೆಸುತ್ತಿದ್ದಾರೆ.
ಪ್ರಾಣಿ ಕಲ್ಯಾಣಕ್ಕಾಗಿ ಅನಂತ್ ಅವರ ಉತ್ಸಾಹದಿಂದ ದುಡಿಯುತ್ತಿದ್ದಾರೆ. ವನ್ಯಜೀವಿಗಳ ಆರೋಗ್ಯ ರಕ್ಷಣೆ, ಪುನರ್ವಸತಿ ಮತ್ತು ಪ್ರಾಣಿಗಳ ಸಂರಕ್ಷಣೆಯಾದ್ಯಂತ ಹಲವಾರು ಕಾರ್ಯಕ್ರಮಗಳನ್ನ ನೋಡಿಕೊಳ್ಳುತ್ತಿದ್ದಾರೆ. ಜಾಮ್‌ನಗರದಲ್ಲಿರುವ ಅಂಬಾನಿ ಪ್ರಾಣಿ ರಕ್ಷಣಾ ಕೇಂದ್ರವಾದ ವಂತಾರಾದಲ್ಲಿ ಅವರ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ನಡೆದಿದ್ದ ವೇಳೆ ಪ್ರಾಣಿ ಸಂರಕ್ಷಣೆಯ ಮೇಲಿನ ಉತ್ಸಾಹವನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದ್ದನ್ನು ಸ್ಮರಿಸಬಹುದು.
ವಂತಾರದ ಉದ್ಘಾಟನೆಯ ನಂತರ ನ್ಯೂಸ್ 18 ನೊಂದಿಗೆ ಮಾತನಾಡಿದ ಅನಂತ್ ಅಂಬಾನಿ, ಈ ಕೇಂದ್ರವು ಸನಾತನ ನಂಬಿಕೆಗಳಲ್ಲಿ ಬೇರೂರಿದೆ, ಏಕೆಂದರೆ ಪ್ರತಿಯೊಂದು ದೇವತೆಗೂ ವಾಹನದಂತೆ ಪ್ರಾಣಿ ಇರುತ್ತದೆ. ಪ್ರಾಣಿ ಕಲ್ಯಾಣ ಮತ್ತು ಸಮಾಜಕ್ಕೆ ಮರಳಿ ನೀಡುವ ಅವರ ಇಚ್ಛೆಯಿಂದ ಈ ಉಪಕ್ರಮವನ್ನು ನಡೆಸಲಾಗಿದೆ ಎಂದು ಅವರು ಹೇಳಿದ್ದರು.
ವಂತಾರವು ಅದರ ಮೊದಲ-ರೀತಿಯ ಸಮಗ್ರ ಪ್ರಾಣಿ ರಕ್ಷಣೆ, ಆರೈಕೆ, ಸಂರಕ್ಷಣೆ ಮತ್ತು ಪುನರ್ವಸತಿ ಕಾರ್ಯಕ್ರಮವಾಗಿದೆ. ರಿಲಯನ್ಸ್‌ನ ಜಾಮ್‌ನಗರ ರಿಫೈನರಿ ಕಾಂಪ್ಲೆಕ್ಸ್‌ನ ಹಸಿರು ಬೆಲ್ಟ್‌ನಲ್ಲಿ 3,000 ಎಕರೆಗಳಷ್ಟು ಹರಡಿದೆ, ಇದು ಪ್ರಪಂಚದಾದ್ಯಂತದ 43 ಜಾತಿಗಳಲ್ಲಿ 2,000 ಕ್ಕೂ ಹೆಚ್ಚು ರಕ್ಷಿಸಲ್ಪಟ್ಟ ಪ್ರಾಣಿಗಳನ್ನು ಹೊಂದಿದೆ.
” ನಮ್ಮ ಸನಾತನ (ಧರ್ಮ) ದಲ್ಲಿ, ಪ್ರತಿಯೊಬ್ಬ ದೇವತೆಗೂ ಅವರ ಹೃದಯಕ್ಕೆ ಹತ್ತಿರವಾದ ಪ್ರಾಣಿ ಇರುತ್ತದೆ. ಪ್ರತಿಯೊಂದು ದೇವತೆಗೂ ವಾಹನವಿದೆ, ಅದು ಪ್ರಾಣಿಯಾಗಿದೆ. ಋಗ್ವೇದದಲ್ಲಿಯೂ, (ಹಿಂದೂ ದೇವತೆ) ಕೃಷ್ಣನು ಎಲ್ಲಾ ಜೀವಗಳು ಸಮಾನವೆಂದು ಹೇಳುತ್ತಾನೆ, ಅದು ಮನುಷ್ಯ ಅಥವಾ ಜೇನುನೊಣ, ಅಥವಾ ಇರುವೆ. ಇಲ್ಲಿ (ವಂತಾರಾ), ನಾವು ಕಪ್ಪೆಗಳಿಂದ ಹಿಡಿದು ಇಲಿಗಳವರೆಗೆ ನೋಡಿಕೊಳ್ಳುತ್ತೇವೆ, “ಎಂದು ಅನಂತ್ ನ್ಯೂಸ್ 18 ಗೆ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದರು.
ಅನಂತ್ ಮತ್ತು ರಾಧಿಕಾ ನಿಶ್ಚಿತಾರ್ಥ ಜನವರಿ 2023 ರಲ್ಲಿ ಮುಂಬೈನಲ್ಲಿರುವ ಕುಟುಂಬದ ನಿವಾಸ ಆಂಟಿಲಿಯಾದಲ್ಲಿ ಸಾಂಪ್ರದಾಯಿಕ ಸಮಾರಂಭದಲ್ಲಿ ನಡೆದಿತ್ತು. ಅದ್ದೂರಿ ಸಂಗೀತ ಮತ್ತು ಹಲ್ದಿ ಸಮಾರಂಭದ ನಂತರ ಜುಲೈ 12 ರಂದು ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಈ ಜೋಡಿ ವಿವಾಹವಾಗಿದ್ದಾರೆ.