ಭಾರೀ ಮಳೆಗೆ ಹಾರಂಗಿ ಜಲಾಶಯದ ಒಳಹರಿವು ಹೆಚ್ಚಳ, ಇಂದಿನ ವಿವರ
1 min readಜೂನ್ ಎರಡನೇ ವಾರದಿಂದಲೇ ಕೊಡಗಿನಲ್ಲಿ ಆಗಾಗ ಭಾರೀ ಮಳೆ ಆಗುತ್ತಲೇ ಇದೆ. ಇನ್ನೂ ಮಲೆನಾಡಿನ ಭಾಗದಲ್ಲಿ ಕೆಲವು ವಾರಗಳಿಂದ ಸಾಧಾರಣದಿಂದ ಭಾರೀ ಮಳೆ ಆಗುತ್ತಲೇ ಇದೆ. ಹೀಗಾಗಿ ಹಾರಂಗಿ ಸೇರಿದಂತೆ ರಾಜ್ಯದ ಕೆಲವು ಜಲಾಶಯಗಳಲ್ಲಿ ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹಣೆ ಆಗುತ್ತಿದೆ.
ಇದೀಗ ಕೊಡಗು ಜಿಲ್ಲೆಯ ಕುಶಾಲನಗರದ ಸಮಯ ಕಾವೇರಿ ಉಪನದಿ ಹಾರಂಗಿ ಅಡ್ಡಲಾಗಿ ಹದಗೂರಿನಲ್ಲಿ ನಿರ್ಮಿಸಲಾಗಿರುವ ಹಾರಂಗಿ ಜಲಾಶಯದಲ್ಲಿ ಗುರುವಾರ ಅತ್ಯಧಿಕ ನೀರು ಕಂಡು ಬಂದಿದೆ. ಬುಧವಾರ ಡ್ಯಾಂ ನಿಂದ ಬಿಡುಗಡೆ ಮಾಡಿದರೂ ಸಹ ಗುರುವಾರ 2059 ಕ್ಯೂಸೆಕ್ಸ ಒಳಹರಿವು ಕಂಡು ಬಂದಿದೆ.
ನೆನ್ನೆ ಬುಧವಾರ 2377 ಕ್ಯೂಸೆಕ್ ಒಳಹರಿವು ನೀರಿತ್ತು. ಈ ಜಲಾಶಯ ಭರ್ತಿಗೆ ಹತ್ತು ಅಡಿ ನೀರು ತಂಬುವುದು ಮಾತ್ರವೇ ಬಾಕಿ ಇತ್ತು. ಅಷ್ಟಲ್ಲಾಗಲೇ ನೀರು ಬಿಡುಗಡೆ ಮಾಡಲಾಗಿದೆ. ಹೀಗಿದ್ದರೂ ಸಹ ಗುರುವಾರ ಅತ್ಯಧಿಕ ಒಳಹರಿವು ಕಂಡು ಬಂದಿದೆ.
ಈ ಜಲಾಶಯದ ಒಟ್ಟು ಸಾಮರ್ಥ್ಯ 871 ಟಿಎಂಸಿ ಇದ್ದು, ಸದ್ಯ 868 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನೇನು ಭರ್ತಿ ಆಗಲು ಕೆಲವೇ ಅಡಿಗಳು ಬಾಕಿ ಇದೆ. ಅದಾಗಲೇ ನದಿ ಹಾಗೂ ಜಲ ಮೂಲಗಳಿಗೆ ನೀರು ಬಿಡಲಾಗಿದೆ. ನೀರು ಬಿಟ್ಟ ಹಿನ್ನೆಲೆಯಲ್ಲಿ ತೀರದ ಪ್ರದೇಶಗಳಿಗೆ ಎಚ್ಚರಿಕೆ ನೀಡಲಾಗಿದೆ.
ಮಳೆಗಾಲ ಇನ್ನೂ ಎರಡೂವರೆ ತಿಂಗಳು ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಲಾಶಗಳು ಗರಿಷ್ಠ ಪ್ರಮಾಣದಲ್ಲಿ ಭರ್ತಿಯಾಗಲಿವೆ. ಇನ್ನು ರಾಜ್ಯದ ಇತರ ಕೆಲವು ಜಲಾಶಯಗಳ ಇಂದಿನ (ಜುಲೈ 11) ನೀರಿನ ಮಟ್ಟ ಇಲ್ಲಿದೆ.
ಭದ್ರಾ ಜಲಾಶಯ
ಒಳ ಹರಿವು : 6246 ಕ್ಯೂಸೆಕ್
ಹೊರ ಹರಿವು : 158 ಕ್ಯೂಸೆಕ್
ಒಟ್ಟು ಸಾಮರ್ಥ್ಯ : 186 ಅಡಿ
ಇಂದಿನ ನೀರಿನ ಮಟ್ಟ 136.0 ಅಡಿ
ಒಟ್ಟು ಸಾಮರ್ಥ್ಯ: 71.5 ಟಿಎಂಸಿ
ಲಿಂಗನಮಕ್ಕಿ ಜಲಾಶಯ
ಒಳ ಹರಿವು : 13128 ಕ್ಯೂಸೆಕ್
ಹೊರ ಹರಿವು : 3422.14 ಕ್ಯೂಸೆಕ್
ಗರಿಷ್ಟ ಮಟ್ಟ : 1819 ಅಡಿ
ಇಂದಿನ ಮಟ್ಟ : 1772.05 ಅಡಿ
ಒಟ್ಟು ಸಾಮರ್ಥ್ಯ : 151.64 ಟಿಎಂಸಿ
ತುಂಗಾ ಜಲಾಶಯ
ಒಳ ಹರಿವು : 11619 ಕ್ಯೂಸೆಕ್
ಹೊರ ಹರಿವು : 11619 ಕ್ಯೂಸೆಕ್
ಗರಿಷ್ಟ ಮಟ್ಟ : 588.24 ಮೀ
ಇಂದಿನ ಮಟ್ಟ 588.24 ಮೀ
ಒಟ್ಟು ಸಾಮರ್ಥ್ಯ : 3.24 ಟಿಎಂಸಿ
ಹೇಮಾವತಿ ಜಲಾಶಯ
ಒಳಹರಿವು – 6767 ಕ್ಯೂಸೆಕ್
ಹೊರಹರಿವು – 250 ಕ್ಯೂಸೆಕ್
ಇಂದಿನ ಮಟ್ಟ – 2899 ಅಡಿ
ಗರಿಷ್ಠ ಮಟ್ಟ – 2922 ಅಡಿ
ಒಟ್ಟು ಸಾಮರ್ಥ್ಯ – 37.103 ಟಿಎಂಸಿ
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday