ವಿಶೇಷಚೇತನರ ಸೌಲಭ್ಯಕ್ಕೆ ಮೊದಲ ಆದ್ಯತೆ
1 min read
ವಿಶೇಷಚೇತನರ ಸೌಲಭ್ಯಕ್ಕೆ ಮೊದಲ ಆದ್ಯತೆ
ವಿಶೇಷ ಚೇತನರಿಗೆ ಸೌಲಭ್ಯ ವಿತರಿಸಿದ ಉಸ್ತುವಾರಿ ಸಚಿವ
ಸಮಾಜದಲ್ಲಿ ಸಹಜ ಜೀವನ ನಡೆಸಲು ಕಷ್ಟವಿರುವ ವಿಶೇಷ ಚೇತನರಿಗೆ ಸೌಲಭ್ಯಗಳನ್ನು ಮೊದಲ ಆದ್ಯತೆಯಾಗಿ ನೀಡಲು ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಮನವಿ ಮಾಡಿದರು.
ಸಮಾಜದಲ್ಲಿ ಸಹಜ ಜೀವನ ನಡೆಸಲು ಕಷ್ಟವಿರುವ ವಿಶೇಷ ಚೇತನರಿಗೆ ಸೌಲಭ್ಯಗಳನ್ನು ಮೊದಲ ಆದ್ಯತೆಯಾಗಿ ನೀಡಲು ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಮನವಿ ಮಾಡಿದರು. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷಚೇತನ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ವಿತರಿಸಿ ಮಾತನಾಡಿದರು.
ವಿಶೇಷ ಚೇತನರು ತಮ್ಮದಲ್ಲದ ತಪ್ಪಿಗೆ ಇತರರಂತೆ ಸಹಜ ಜೀವನ ನಡೆಸಲು ಸಾಧ್ಯವಾಗದೇ ಕಷ್ಟಪಡುತ್ತಾರೆ. ಆದ್ದರಿಂದ ಅವರಿಗೆ ಮೊದಲ ಆದ್ಯತೆಯಲ್ಲಿ ಸೌಲಭ್ಯ ಮತ್ತು ಅವಕಾಶಗಳನ್ನು ಸಮಾಜ ಮತ್ತು ಸರ್ಕಾರ ನೀಡಬೇಕು. ಈ ವರ್ಷದ ಶಾಸಕರ ನಿಧಿಯಲ್ಲಿ ಲಭ್ಯವಿರುವ ೨ ಕೋಟಿ ರೂಪಾಯಿ ಅನುದಾನವನ್ನು ಸಂಪೂರ್ಣವಾಗಿ ಅರ್ಹ ವಿಶೇಷ ಚೇತನ ಫಲಾನುಭವಿಗಳಿಗೆ ವಾಹನ ಖರೀದಿಸಲು ಮೀಸಲಿಡುವುದಾಗಿ ಮತ್ತು ಡೆಂಘೀ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಜನರಲ್ಲಿ ಜಾಗೃತಿ ಮೂಡಿಸಲಾಗುತಿದೆ ಎಂದರು.