ಜು.26ಕ್ಕೆ ವಿದ್ಯುತ್ ಗುತ್ತಿಗೆದಾರರ ಸಂಘದ ಚುನಾವಣೆ
1 min readಅಂತೂ ಇಂತೂ ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ಚುನಾವಣೆ
ಜು.26ಕ್ಕೆ ವಿದ್ಯುತ್ ಗುತ್ತಿಗೆದಾರರ ಸಂಘದ ಚುನಾವಣೆ
ನ್ಯಾಯ ಗೆಲ್ಲಲು ಬೆಂಬಲಿಸಲು ಅಧ್ಯಕ್ಷ ಆಕಾಂಕ್ಷಿ ಮನವಿ
ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಚುನಾವಣೆ ಕೊನೆಗೂ ಘೋಷಣೆಯಾಗಿದೆ. ಕಳೆದ ೮ ವರ್ಷಗಳಿಂದ ಚುನಾವಣೆ ನಡೆಯದೆ, ತೀವ್ರ ವಿವಾದಗಳಿಗೆ ಕಾರಣವಾಗಿದ್ದ ರಾಜ್ಯ ಅನವುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಚುನಾವಣೆ ನಡೆಸಲು ಸಂಘದ ಸದಸ್ಯರಲ್ಲಿಯೇ ತೀವ್ರ ಒತ್ತಡ ಇತ್ತು. ಆದರೂ ಚುನಾವಣೆ ನಡೆಯದೆ ತೀವ್ರ ಆರೋಪಗಳೂ ಕೇಳಿಬಂದಿದ್ದವು. ಇದೀಗ ಚುನಾವಣೆ ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಕೆಯೂ ಆಗಿದೆ.
ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಚುನಾವಣೆ ಕೊನೆಗೂ ಘೋಷಣೆಯಾಗಿದೆ. ಕಳೆದ ೮ ವರ್ಷಗಳಿಂದ ಚುನಾವಣೆ ನಡೆಯದೆ, ತೀವ್ರ ವಿವಾದಗಳಿಗೆ ಕಾರಣವಾಗಿದ್ದ ರಾಜ್ಯ ಅನವುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಚುನಾವಣೆ ನಡೆಸಲು ಸಂಘದ ಸದಸ್ಯರಲ್ಲಿಯೇ ತೀವ್ರ ಒತ್ತಡ ಇತ್ತು. ಆದರೂ ಚುನಾವಣೆ ನಡೆಯದೆ ತೀವ್ರ ಆರೋಪಗಳೂ ಕೇಳಿಬಂದಿದ್ದವು. ಇದೀಗ ಚುನಾವಣೆ ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಕೆಯೂ ಆಗಿದೆ. ಆಗದರೆ ಈಗಲೂ ಹಲವು ಸದಸ್ಯರು ಮತ್ತೆ ಅವಿರೋಧ ಆಯ್ಕೆ ಮಾತುಗಳನ್ನಾಡುತ್ತಿದ್ದು, ಇವರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಕೆಲಸವನ್ನು ಯಾಕೆ ಮಾಡಲಿಲ್ಲ ಎಂದು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬಾಬು ಟಿ.ಎಸ್. ಪ್ರಶ್ನೆ ಮಾಡಿದ್ದಾರೆ.
ಕಳೆದ 8 ವರ್ಷಗಳಿಂದ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಚುನಾವಣೆ ನಡೆದಿಲ್ಲವಂತೆ. ಚುನಾವಣೆ ನಡೆಸುವಂತೆ ಆಗ್ರಹಿಸಿ ಸಂಘದ 150ಕ್ಕೂ ಹೆಚ್ಚು ಸದಸ್ಯರು ಕೇಂದ್ರ ಸಂಘದ ಮೇಲೆ ಒತ್ತಡ ಹೇರಿದ್ದರೂ ಯಾವುದೇ ಉಫಯೋಗವಾಗಿಲ್ಲವಂತೆ. ಅಲ್ಲದೆ ಹೊಸಗಾಇ ಸಮಿತಿ ರಚನೆ ಮಡಿ, ಪ್ರತಿ ತಾಲೂಕಿಗೂ ಒಂದು ಉಪಾಧ್ಯಕ್ಷ ಸ್ಥಾನ ನೀಡಿ,. ಪದಾಧಿಕಾರಿಗಳನ್ನು ಮಾಡಿ ಠರಾವು ಮಾಡಿದ್ದರೂ ಅದನ್ನು ತಿರಸ್ಕೃತ ಮಾಡಿದವರು ಈಗ ಅವಿರೋಧ ಆಯ್ಕೆ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ ಎಂದು ಬಾಬು ಕಿಡಿ ಆಕರಿದ್ದಾರೆ.
ಬಾಬು ಟಿಎಸ್ ಅವರು ಇಂದು ಅಧ್ಯಕ್ಷ ಸ್ಥಾನವದ ಆಕಾಂಕ್ಷಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದು, ನ್ಯಾಯ ಗೆಲ್ಲಿಸಲು ಎಲ್ಲ ಸದಸ್ಯರು ಕೈ ಜೋಡಿಸುವಂತೆ ಕೋರಿದ್ದಾರೆ. ಈವರೆಗೂ ಇದ್ದ ಆಡಳಿತ ಮಂಡಳಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಜಿಲ್ಲಾ ಸಮಿತಿ ಎಲ್ಲಿದೆ ಎಂಬುದೇ ತಿಳಿಯದ ಸ್ಥಿತಿ ಈವರೆಗೂ ಇತ್ತು. ಈ ಸಂಬAಧ ಕೇಂದ್ರ ಸಮಿತಿಗೆ ಮನವಿ ಮಾಡಿದರೂ ಉಫಯೋಗವಾಗಿರಲಿಲ್ಲ. ಚುನಾವಣೆ ನಡೆಸಲು ಅನೇಕ ಬಾರಿ ಮನವಿ ಸಲ್ಲಿಸಲಾಗಿತ್ತು. ಈಗ ಚುನಾವಣೆ ನಿಗಧಿ ಮಾಡಲಾಗಿದೆ. ಈಗಲಾದರೂ ಚುನಾವಣೆ ನಡೆಸುತ್ತಿರುವುದಕ್ಕೆ ಸಂಬoಧಿಸಿದವರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು.
ಇಷ್ಟೆಲ್ಲಾ ಹೇಳುವ ಹಾಲಿ ಆಡಳಿತ ಮಂಡಳಿ ಪದಾಧಿಕಾರಿಗಳು ಅವಿರೋಧ ಆಯ್ಕೆಗೆ ಎಲ್ಲ ಸದಸ್ಯರನ್ನು ಪರಿಗಣನೆಗೆ ಪಡೆದು ಯಾಕೆ ಪ್ರಯತ್ನಿಸಲಿಲ್ಲ ಎಂದು ಬಾಬು ಪ್ರಶ್ನಿಸಿದರು. ಈಗ ಚುನಾವಣೆ ಬೇಡ ಎನ್ನುವವರು ಈ ಹಿಂದೆ 150 ಸದಸ್ಯರು ಠರಾವು ಮಾಡಿ, ಅನುಮೋದನೆಯಾಗಿದ್ದರೂ ಯಾಕೆ ತಿರಸ್ಕಾರ ಮಾಡಿದರು ಎಂದು ಪ್ರಶ್ನಿಸಿದರು. ನಾವು ಈ ಹಿಂದೆ ಮಾಡಿದ ಪದಾಧಿಕಾರಿಗಳ ಆಯ್ಕೆಯಲ್ಲಿ ಪ್ರಾದೇಶಿಕ ಸಮಾನತೆ ನೀಡಲಾಗಿತ್ತು. ಆದರೂ ಸರಿಯಿಲ್ಲ ಎಂದು ತಿರಸ್ಕಾರ ಮಾಡಿದ್ದು ಎಂದು ಪ್ರಶ್ನಿಸಿದರು.
ಜುಲೈ 26 ರಂದು ಚುನಾವಣೆ ನಡೆಯಲಿದ್ದು, ಈ ಬಾರಿ ಆಯ್ಕೆಯಾಗಲಿರುವ ನೂತನ ಆಡಳಿತ ಮಂಡಳಿ ಗುತ್ತಿಗೆದಾರರ ಹಿತ ಕಾಯಲು ಮುಂದಾಗಲಿದೆ ಮತ್ತು ಎಲ್ಲಾ ಸದಸ್ಯರಿಗೂ ಸಮಾನ ನ್ಯಾಯ ದೊರಕಿಸುವಲ್ಲಿ ಶ್ರಮಿಸಲಿದೆ ಎಂದು ಟಿ.ಎಸ್. ಬಾಬು ವಿಶ್ವಾಸ ವ್ಯಕ್ತಪಡಿಸಿದರು.