ಬಾಗೇಪಲ್ಲಿಯಲ್ಲಿ ದಲಿತರ ಕುಂದು ಕೊರತೆ ಸಭೆ
1 min readಬಾಗೇಪಲ್ಲಿಯಲ್ಲಿ ದಲಿತರ ಕುಂದು ಕೊರತೆ ಸಭೆ
ಜೂಜು, ಅಕ್ರಮ ಮದ್ಯ ಮಾರಾಟ ತಡೆಗೆ ಕಠಿಣ ಕ್ರಮದ ಎಚ್ಚರಿಕೆ
ತಾಲೂಕಿನಲ್ಲಿ ಕಾನೂನು ಸುವ್ಯಸ್ಥೆ ಕಾಪಾಡಲು ಸಹಕರಿಸಲು ಮನವಿ
ದಲಿತ ಸಮುದಾಯಗಳ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಭಾನುವಾರ ಬಾಗೇಪಲ್ಲಿ ಪೋಲಿಸ್ ಠಾಣೆಯಲ್ಲಿ ವೃತ್ತ ನಿರೀಕ ಪ್ರಶಾಂತ್ ವರ್ಣಿ ನೇತೃತ್ವದಲ್ಲಿ ದಲಿತ ಕುಂದು ಕೊರತೆ ಸಭೆ ನಡೆಯಿತು. ಅಕ್ರಮ ಮಧ್ಯ ಮಾರಾಟ ಮತ್ತು ಜೂಜಾಟ ತಡೆಯುವ ಜೊತೆಗೆ ಯಾವುದೆ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ವೃತ ನಿರೀಕ್ಷಕ ಪ್ರಶಾಂತ್ ವರ್ಣಿ ತಿಳಿಸಿದರು.
ದಲಿತ ಸಮುದಾಯಗಳ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಭಾನುವಾರ ಬಾಗೇಪಲ್ಲಿ ಪೋಲಿಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕ ಪ್ರಶಾಂತ್ ವರ್ಣಿ ನೇತೃತ್ವದಲ್ಲಿ ದಲಿತ ಕುಂದು ಕೊರತೆ ಸಭೆ ನಡೆಯಿತು. ಅಕ್ರಮ ಮಧ್ಯ ಮಾರಾಟ ಮತ್ತು ಜೂಜಾಟ ತಡೆಯುವ ಜೊತೆಗೆ ಯಾವುದೆ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ವೃತ ನಿರೀಕ್ಷಕ ಪ್ರಶಾಂತ್ ವರ್ಣಿ ತಿಳಿಸಿದರು. ಪಟ್ಟಣದ ಪೋಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ದಲಿತರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಅತ್ಯವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.
ಪಟ್ಟಣದ ನಾನಾ ಕಡೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೆ, ಪಟ್ಟಣ ಸೇರಿ ಹಳ್ಳಿಗಳಲ್ಲಿ ಗಾಂಜಾ ಮಾರಾಟ ಮಾಡುವುದರಿಂದ ವಿದ್ಯಾರ್ಥಿಗಳು ದುಶ್ಚಟಕ್ಕೆ ದಾಸರಾಗುವ ಆತಂಕ ಪಾಲಕರಲ್ಲಿದೆ. ಹಾಗಾಗಿ, ಗಾಂಜಾ ಮಾರಾಟವನ್ನು ತಡೆಯಲು ಕ್ರಮಕೈಗಳ್ಳಬೇಕೆಂದು ಒತ್ತಾಯಿಸಿದರು. ದಲಿತ ಮುಖಂಡ ಲಕ್ಷಿ ನರಸಿಂಹಪ್ಪ ಮಾತನಾಡಿ, ಪಟ್ಟಣದ ಡಿ.ವಿ.ಜಿ. ಮುಖ್ಯ ರಸ್ತೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಅಪರಾಧ, ಕಳ್ಳತನ ಪ್ರಕರಣಗಳ ನಿಯಂತ್ರಣಕ್ಕೆ ಸಿಸಿ ಕ್ಯಾಮರಾ ಅಳವಡಿಸಲು ಸಹಕಾರ ನೀಡಿದರೆ ಉತ್ತಮವಾಗಿರುತ್ತದೆ ಎಂದು ಸಭೆಯಲ್ಲಿ ತಿಳಿಸಿದ್ದರು. ಪುರಸಭೆಯಲ್ಲಿ ೨೫ ಲಕ್ಷ ರೂ ಅನುದಾನ ಸಿದ್ದವಾಗಿದೆ ಎಂದು ಸಭೆಯಲ್ಲಿ ಪ್ರಶಾಂತ್ ವರ್ಣಿ ತಿಳಿಸಿದರು.
ಪಟ್ಟಣದಲ್ಲಿ ಬೆಳ್ಳೆಗ್ಗೆ ಹಾಗೂ ಸಂಜೆ ಶಾಲಾ ಕಾಲೇಜುಗಳು ಬಿಟ್ಟಾಗ ಪೋಲಿ ಹುಡುಗರ ಹೆಣ್ಣು ಮಕ್ಕಳು ಚುಡಾಯಿಸುತ್ತರೆ ಆದ್ದರಿಂದ ಅಂತಹ ಸಮಯದಲ್ಲಿ ಸೂಕ್ತ ಪೋಲಿಸ್ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.