ಮಕ್ಕಳಿಂದ ಬೃಹತ್ ಗಿಡ ನೆಡುವ ಕಾರ್ಯಕ್ರಮ
1 min readಮಕ್ಕಳಿಂದ ಬೃಹತ್ ಗಿಡ ನೆಡುವ ಕಾರ್ಯಕ್ರಮ
ಸಂಘಸoಸ್ಥೆಗಳ ಆಶ್ರಯದಲ್ಲಿ ಗಿಡ ನೆಡುವ ಕಾರ್ಯಕ್ರಮ
150 ಸಸಿ ನೆಟ್ಟು ಪೋಷಿಸುವ ಪಣ ತೊಟ್ಟ ಕಾರ್ಯಕರ್ತರು
ವರುಣ ವಿಧಾನ¸ಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿಯಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಗಿಡ ನೆಡುವ ಮೂಲಕ ಪರಿಸರ ಕಾಳಜಿ ಮೂಡಿಸುವ ಕೆಲಸಕ್ಕೆ ನಾಂದಿ ಹಾಡಲಾಯಿತು.
ವರುಣ ವಿಧಾನ¸ಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿಯಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದೇವನೂರು ಗ್ರಾಮ ಪಂಚಾಯಿತಿ, ಐಟಿಸಿ ಮತ್ತು ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆ ನಂಜನಗೂಡು, ವಿಮೋಚನಾ ಯುವಕರ ಸಂಘ ಚುಂಚನಹಳ್ಳಿ ಮತ್ತು ರಘು ಲಾಲ್ ಕಂಪನಿ ಮೈಸೂರು ಇವರ ಆಶ್ರಯದಲ್ಲಿ ಚುಂಚನಹಳ್ಳಿ ಮಹದೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಬೃಹತ್ ಗಿಡ ನೆಡುವ ಕಾರ್ಯಕ್ರಮಕ್ಕೆ ಗ್ರಾಪಂ ಮಂಜು ಗಿಡ ನೆಟ್ಟು ನೀರೆರೆಯುವ ಮೂಲಕ ಚಾಲನೆ ನೀಡಿದರು.
ಐಟಿಸಿ ಮತ್ತು ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆಯಿoದ ಸುಮಾರು 150 ಗಿಡ ನಾಟಿ ಮಾಡಿಸಲಾಯಿತು. ಅದಕ್ಕೆ ರಘುಲಾಲ್ ಕಂಪನಿಯಿoದ ಗಿಡಗಳ ಟ್ರಿ ಗಾರ್ಡ್ ಗಳನ್ನು ಅಳವಡಿಸಲಾಯಿತು. ಹಲಸು, ನೇರಳೆ, ಅರಳಿ, ಬೇವು, ಬೆಟ್ಟದ ನೆಲ್ಲಿ, ಗಸಗಸೆ, ಸಂಪಿಗೆ, ನಿಂಬೆ, ಹೊಂಗೆ, ಮಹಾಗಣಿ, ಕಾಡು ಬಾದಾಮಿ ಗಿಡಗಳನ್ನು ವಿಮೋಚನಾ ಯುವಕರ ಸಂಘದ ಪದಾಧಿಕಾರಿಗಳು ಯುವಕರು ಮತ್ತು ಶಾಲಾ ಮಕ್ಕಳು ನೆಟ್ಟು ನೀರು ಹಾಕಿದ್ದಾರೆ.